ಜಗನ್ನಾಥ್ ಪೂರಿ ಗರಡಿಯಲ್ಲಿ ಮಳೆ ಹುಡುಗಿ ನೇಹಾಶೆಟ್ಟಿ

ಬೆಂಗಳೂರು, ಸೋಮವಾರ, 25 ಸೆಪ್ಟಂಬರ್ 2017 (16:29 IST)

ಬೆಂಗಳೂರು:  ಮುಂಗಾರು ಮಳೆ 2 ಸಕ್ಸಸ್ ನಂತರ ಮಳೆ ಹುಡುಗಿ ನೇಹಾ ಶೆಟ್ಟಿ ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.


ಸಾಕಷ್ಟು ಯಶಸ್ವಿ ನಾಯಕ-ನಾಯಕಿಯರನ್ನ ಚಿತ್ರರಂಗಕ್ಕೆ ಪರಿಚಯಿಸಿದ ಪೂರಿ ಜಗನ್ನಾಥ್ ಈಗ ತಮ್ಮ ಪುತ್ರ ಆಕಾಶ್ ಪೂರಿಯನ್ನ ಫುಲ್ ಟೈಮ್ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಆಕಾಶ್ ಗೆ ನಾಯಕಿಯಾಗಿ ನೇಹಾ ಶೆಟ್ಟಿ ಆಯ್ಕೆಯಾಗಿದ್ದು, ಟಾಲಿವುಡ್ ನಲ್ಲಿ ನೇಹಾ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ರಾಮ್ ಚರಣ್ ತೇಜಾ ಅಭಿನಯದ `ಚಿರುತ’ ಚಿತ್ರದಲ್ಲಿ ಆಕಾಶ್ ಪೂರಿ ಬಾಲನಟನಾಗಿ ಗುರುತಿಸಿಕೊಂಡಿದ್ರು. ಇನ್ನು 2015ರಲ್ಲಿ ತೆರೆಕಂಡಿದ್ದ `ಆಂಧ‍್ರ ಪೋರಿ’ಯಲ್ಲಿ ಆಕಾಶ್ ಹಿರೋ ಆಗಿ ಮಿಂಚಿದ್ರು. ಇದೇ ಅಕ್ಟೋಬರ್ ನಲ್ಲಿ ಪೂರಿ ಹೊಸ ಚಿತ್ರದ ಶೂಟಿಂಗ್ ಶುರುವಾಗಲಿದ್ದು, 3 ತಿಂಗಳಲ್ಲಿ ಚಿತ್ರೀಕರಣ ಮುಗಿಸಲು ಪೂರಿ ಜಗನ್ನಾಥ್ ಆಲೋಚನೆ ಮಾಡಿದ್ದಾರಂತೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಿನಿಮಾವಾಗಲಿದೆ ಕಪಿಲ್ ದೇವ್ ರ 1983 ರ ಸಾಹಸ

ಮುಂಬೈ: ಧೋನಿ, ಸಚಿನ್ ನಂತರ ಭಾರತದ ಇನ್ನೊಬ್ಬ ಮಹಾನ್ ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನ ಚರಿತ್ರೆ ...

news

‘ಮಹಿರಾ ಖಾನ್ ಜತೆ ರಣಬೀರ್ ದಮ್ ಎಳೆದರೆ ತಪ್ಪೇನು?’

ಮುಂಬೈ: ಪಾಕಿಸ್ತಾನಿ ಮೂಲದ ನಟಿ ಮಹಿರಾ ಖಾನ್ ಜತೆ ಹೋಟೆಲ್ ಒಂದರಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಧಮ್ ...

news

‘ರಾಮ್ ರಹೀಂ ಹತ್ತಿರ ಸುಳಿಯಲೂ ಹನಿಪ್ರೀತ್ ನನ್ನನ್ನು ಬಿಟ್ಟಿರಲಿಲ್ಲ’

ನವದೆಹಲಿ:ವಿವಾದಿತ ಬಾಬಾ ರಾಮ್ ರಹೀಂ ಸಿಂಗ್ ಕುರಿತಾಗಿ ಸಿನಿಮಾ ಮಾಡಲು ಹೊರಟಿದ್ದ ಬಾಲಿವುಡ್ ಹಾಟ್ ಬೆಡಗಿ ...

news

ಡ್ರಾಮಾ ಜ್ಯೂನಿಯರ್ಸ್ ಗೆ ತೀರ್ಪು ನೀಡಲು ಬರಲಿದ್ದಾರೆ ‘ಮುಖ್ಯಮಂತ್ರಿ’!

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ...

Widgets Magazine
Widgets Magazine