ಸುದೀಪ್ ದಂಪತಿ ವಿಚ್ಛೇದನ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಂಗಳೂರು, ಗುರುವಾರ, 9 ಮಾರ್ಚ್ 2017 (18:00 IST)

Widgets Magazine

ಕಿಚ್ಚ ಸುದೀಪ್ - ಪ್ರಿಯಾ ದಂಪತಿ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇಂದು ಸಹ ಅವರಿಬ್ಬರು ಕೋರ್ಟ್ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. 
ನಗರದ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಸುದೀಪ್ ಸಹೋದರಿ ಸುಜಾತ ಹಾಗೂ ಅವರ ಪರ ವಕೀಲರು ಹಾಜರಿದ್ದರು. 
 
ದಂಪತಿ ಗೈರು ಹಾಜರಿ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಕೋರ್ಟ್ ರಾಜಿ ಸಂಧಾನ ಮಾಡಿಕೊಂಡಿದ್ದರೆ ತಿಳಿಸಿ.ಡಿವೋರ್ಸ್ ಅರ್ಜಿ ಹಿಂಪಡೆಯಿರಿ. ಇಲ್ಲವಾದರೆ ವಿಚ್ಛೇದನದ ಬಗ್ಗೆ ಕೋರ್ಟ್​ನಿಂದಲೇ ವಿಚಾರಣೆ ನಡೆಸಲಾಗುವುದು. ನಂತರ ನ್ಯಾಯಾಲಯವೇ ಈ ಬಗ್ಗೆ ತೀರ್ಮಾನಿಸಲಿದೆ. ಸ್ವತಃ ವಿಚಾರಣೆ ನಡೆಸಿ ತೀರ್ಮಾನಿಸಲು ಕೋರ್ಟ್​ಗೆ ಅಧಿಕಾರವಿದೆ' ಎಂದಿದೆ.
 
ಸುದೀಪ್ ಪರ ವಕೀಲ ಭಾಸ್ಕರ್ ಬಾಬು' ಮತ್ತಷ್ಟು ಕಾಲಾವಕಾಶ ಕೋರಿದರು. ಕೊನೆಯ‌ ಅವಕಾಶವೆಂದು ಹೇಳಿದ ಕೋರ್ಟ್ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತು.
 
2015ರ ಸೆಪ್ಟೆಂಬರ್ ನಲ್ಲಿ ಇಬ್ಬರು ಪರಸ್ಪರ ಸಹಮತದ ಮೇರೆಗೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ದಂಪತಿ ವಿಚಾರಣೆಗೆ ಹಾಜರಾಗಿಲ್ಲ. ಇಂದಿನ ವಿಚಾರಣೆಗೆ ಸಹ ಸುದೀಪ್, ಪತ್ನಿ ಪ್ರಿಯಾ, ಮತ್ತು ಪ್ರಿಯಾ ಅವರ ಪರ ವಕೀಲರು ಗೈರು ಹಾಜರಾಗಿದ್ದರು.
 
ಇತ್ತೀಚಿಗೆ ದಂಪತಿಗಳಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ಮಗಳ ಭವಿಷ್ಯದ ಹಿತದೃಷ್ಟಿಯಿಂದ ಇಬ್ಬರು ಒಂದಾಗಿದ್ದಾರೆ ಎಂದು ಸಹ ಸುದ್ದಿ ಹರಿದಾಡುತ್ತಿದೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿಚ್ಛೇದನ ಸುದೀಪ್- ಪ್ರಿಯಾ New Twist Sudeep Divorce Case

Widgets Magazine

ಸ್ಯಾಂಡಲ್ ವುಡ್

news

ರಾಮ್ ಗೋಪಾಲ್ ವರ್ಮಾ ಮೇಲೆ ದೂರು ದಾಖಲು

ಮಹಿಳಾ ದಿನಾಚರಣೆ ನಿಮಿತ್ತ ಟ್ವಿಟ್ಟರ್‌ನಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೊಟ್ಟಿರುವ ಹೇಳಿಕೆ ...

news

ಲಂಡನ್‌ಗೆ ಜೂಟ್ ಹೇಳಲಿರುವ ಗಾಯಕಿ ಸುಚಿತ್ರಾ

ಕೋಲಿವುಡ್ ತಾರೆಗಳ ವೈಯಕ್ತಿಕ ಸಂಬಂಧಗಳನ್ನು ಟ್ವಿಟ್ಟರ್‌ನಲ್ಲಿ ಲೀಕ್ ಮಾಡಿ ಸಂಚಲನ ಸೃಷ್ಟಿಸಿದ ಗಾಯಕಿ ...

news

ಎರಡನೇ ಮದುವೆ ಬಗ್ಗೆ ಮೌನ ಮುರಿದ ಅಮಲಾ ಪೌಲ್!

ಕಿಚ್ಚ ಸುದೀಪ್ ಅಭಿನಯದ ಕನ್ನಡದ ’ಹೆಬ್ಬುಲಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟ ಬೆಡಗಿ ಅಮಲಾ ...

news

ಇದು ಆರ್ಗಾನಿಕ್ ಲೆಹಂಗಾ ಅಂತೆ...ಕಣ್ತುಂಬಿಕೊಳ್ಳಿ!

ಮೊದಲೇ ಮಹಿಳಾ ದಿನಾಚರಣೆ ಸಂಭ್ರಮ ನಡೆಯುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಸ್ಟೈಲು. ತರಹೇವಾರಿ ಸೀರೆ, ...

Widgets Magazine