ಉಪ್ಪಿ ಅಣ್ಣನ ಮಗ ನಿರಂಜನ್ ರೊಮ್ಯಾನ್ಸ್ ಮಾಡಲಿರುವ ಬೆಡಗಿ ಇವರೇ!

ಬೆಂಗಳೂರು| Krishnaveni K| Last Modified ಬುಧವಾರ, 30 ಡಿಸೆಂಬರ್ 2020 (09:59 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಪುತ್ರ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಎಂಟ್ರಿಕೊಡುತ್ತಿರುವ ಸಿನಿಮಾ ‘ಸೂಪರ್ ಸ್ಟಾರ್’. ಈ ಸಿನಿಮಾದ ನಾಯಕಿ ಯಾರೆಂದು ಚಿತ್ರತಂಡ ಈಗ ಬಹಿರಂಗಪಡಿಸಿದೆ.

 
ಈ ಸಿನಿಮಾದಲ್ಲಿ ನಿರಂಜನ್ ಜೊತೆ ಅಸ್ಸಾಂ ಮೂಲದ ಚೆಲುವೆ, ಮಾಡೆಲ್ ಝಾರಾ ಯಾಶ್ಮಿನ್ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈಕೆ ಕೆಲವು ಟಿವಿ ಜಾಹೀರಾತುಗಳ ಮೂಲಕವೇ ಗಮನ ಸೆಳೆದವರು. ಈ ಬೆಡಗಿ ಈಗ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ. ರಮೇಶ್ ವೆಂಕಟೇಶ್ ಬಾಬು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :