ಚರ್ಚೆಗೆ ಗ್ರಾಸವಾಯಿತು ಒಳ್ಳೆ ಹುಡುಗ ಪ್ರಥಮ್ ಗೆ ಧರ್ಮಾದಿಕಾರಿ ವೀರೇಂದ್ರ ಹೆಗ್ಡೆ ಕೊಟ್ಟ ವಾಚ್!

ಬೆಂಗಳೂರು, ಶನಿವಾರ, 3 ಮಾರ್ಚ್ 2018 (08:41 IST)

Widgets Magazine

ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ತಾವು ಕೂತ ನಿಂತ ವಿಷಯವನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಾರೆ. ಇದೀಗ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರು ಉಡುಗೊರೆಯಾಗಿ ನೀಡಿದ ವಾಚ್ ಒಂದನ್ನು ಪ್ರಕಟಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
 
ಅಷ್ಟಕ್ಕೂ ಇದರಲ್ಲಿ ವಿವಾದವಾಗುವಂತದ್ದು ಏನಿದೆ ಎಂದು ನೀವು ಪ್ರಶ್ನಿಸಬಹುದು. ಅಲ್ಲಿಯೇ ಇರುವುದು ಟ್ವಿಸ್ಟ್. ಪ್ರಥಮ್ ಇದಕ್ಕೂ ಮೊದಲು ಫ್ಯಾಮಿಲಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ಪುನೀತ್ ರಾಜ್ ಕುಮಾರ್ ರಿಂದ ಅದಕ್ಕಿಂತ ಮೊದಲು ಕಿಚ್ಚ ಸುದೀಪ್ ರಿಂದ ಕೋಟ್ ಕೇಳಿ ಪಡೆದು ಅವರು ಕೊಟ್ಟಿದ್ದು ಎಂದು ಪೋಸ್ ಕೊಟ್ಟಿದ್ದರಂತೆ. ಇದನ್ನೂ ಯಾಕೆ ಹಾಗೇ ಮಾಡಿರಬಾರದು ಎಂದು ಫಾಲೋವರ್ ಗಳು ಪ್ರಶ್ನಿಸಿದ್ದಾರೆ.
 
ಹೀಗಾಗಿ ವೀರೇಂದ್ರ ಹೆಗ್ಡೆ ಚಿಕಾಗೋದಿಂದ ತರಿಸಿದ ವಾಚ್ ಉಡುಗೊರೆಯಾಗಿ ನೀಡುತ್ತಿರುವ ಫೋಟೋ ಜತೆಗೆ ಪ್ರಥಮ್ ಇದು ಆಸ್ಕರ್ ಗಿಂತಲೂ ದೊಡ್ಡ ಉಡುಗೊರೆ. ಅವರೇ ಕೊಟ್ಟರು. ದೇವ್ರಾಣೆ ನಾನು ಕೇಳಿ ಪಡೆದಿಲ್ಲ ಎಂದು ಬರೆದುಕೊಂಡಿದ್ದಾರೆ.
 
ಇದನ್ನು ಓದಿಯೇ ಅಭಿಮಾನಿಗಳಿಗೆ ಅನುಮಾನವಾಗಿದೆ. ಕ್ಯಾಮರಾ ಇದ್ದಿದ್ದರೆ ಗೊತ್ತಾಗ್ತಿತ್ತು. ನಿಜವಾಗಿಯೂ ಕೇಳಿ ಪಡೆದಿದ್ದಾ ಅಲ್ಲಾ ಅವರೇ ಕೊಟ್ಟಿದ್ದಾ ಅಂತ ಎಂದು ಕಾಲೆಳೆದಿದ್ದಾರೆ. ನನ್ನ ಬರ್ತ್ ಡೇ ಅಂತ ನೀವೇ ಕೇಳಿರ್ತೀರಾ ಎಂದು ಲೇವಡಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟಿ ಶ್ರೀದೇವಿ ತನಗೆ ಸಹೋದರಿ ಸಮಾನ; ಕಮಲ್ ಹಾಸನ್

ಚೆನ್ನೈ: ಶ್ರೀದೇವಿ ಹಾಗೂ ಕಮಲ್ ಹಾಸನ್ ಜೋಡಿ ಕಾಲಿವುಡ್ ನಲ್ಲಿ ಮೋಡಿ ಮಾಡಿತ್ತು. ಇದೇ ಕಾರಣದಿಂದ ...

news

ಅನುಷ್ಕಾ ಶರ್ಮಾ ‘ಪರಿ’ ಚಿತ್ರಕ್ಕೆ ಪಾಕಿಸ್ತಾನದಲ್ಲಿ ಬ್ರೇಕ್!

ಪಾಕಿಸ್ತಾನ: ಪಾಕಿಸ್ತಾನದಲ್ಲಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಚಿತ್ರಕ್ಕೆ ಬ್ರೇಕ್ ಬಿದ್ದಿದೆ. ಆ ...

news

ಸರಳವಾಗಿ ಹೋಳಿ ಹಬ್ಬ ಆಚರಿಸಿಕೊಂಡ ಬಿಗ್ ಬಿ ಕುಟುಂಬ

ಮುಂಬೈ: ನಟಿ ಶ್ರೀದೇವಿ ಮೃತಪಟ್ಟ ಹಿನ್ನೆಲೆ, ಬಾಲಿವುಡ್‍ನಲ್ಲಿ ಇನ್ನೂ ದುಃಖ ಮಡುಗಟ್ಟಿದೆ. ಇಂತಹ ಸಂದಿಗ್ಧ ...

news

ಟೀಸರ್ ಮೂಲಕ ಧೂಳೆಬ್ಬಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’

ಸೂಪರ್ ಸ್ಟಾರ್ ರಜನೀಕಾಂತ್​ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕಾಲಾ' ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ...

Widgets Magazine