ಹುಚ್ಚ ವೆಂಕಟ್ ನಟ ಶಿವರಾಜ್ ಕುಮಾರ್ ಮೇಲೆ ಸಿಟ್ಟಾಗಿ ಏನು ಹೇಳಿದ್ದು ಗೊತ್ತಾ…?

ಬೆಂಗಳೂರು, ಬುಧವಾರ, 14 ಮಾರ್ಚ್ 2018 (07:19 IST)

ಬೆಂಗಳೂರು : ಒಂದಲ್ಲ ಒಂದು ಅವಾಂತರಗಳನ್ನು ಮಾಡಿ ವಿವಾದ ಸೃಷ್ಟಿಸುವ ಹುಚ್ಚ ವೆಂಕಟ್ ಇದೀಗ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್  ಮೇಲೆ ಆರೋಪ ಮಾಡಿದ್ದಾರೆ.


ಅದೇನೆಂದರೆ ಹುಚ್ಚ ವೆಂಕಟ್ ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದಾಗ ಸೆಕ್ಯೂರಿಟಿ ಒಳಗೆ ಬಿಡದೆ ಆಚೆಯೇ ನಿಲ್ಲಿಸಿ ಸ್ವಲ್ಪ ಹೊತ್ತು ಕಾಯಿಸಿ ಕಳುಹಿಸಿದ್ದಾನಂತೆ. ಅಲ್ಲದೇ ಶಿವರಾಜ್ ಕುಮಾರ್ ಅವರ ಜೊತೆ ಮಾತನಾಡಲು ಅವರ ಡ್ರೈವರ್ ಗೆ ಫೋನ್ ಮಾಡಿದ್ರೆ ಆತ ‘ಶಿವಣ್ಣನಿಗೆ ನಿಮ್ಮ ನಂಬರ್ ಕೊಟ್ಟಿದ್ದೇನೆ. ಅವರೇ ಕಾಲ್ ಮಾಡ್ತಾರೆ’ ಎಂದು ಹೇಳಿದ್ದಾನಂತೆ. ಆದರೆ ಅವರು  ಫೋನ್ ಮಾಡಲಿಲ್ಲವಂತೆ. ಇದರಿಂದ ಬೇಸರಗೊಂಡ ಹುಚ್ಚ ವೆಂಕಟ್ ಅವರು,’ಶಿವಣ್ಣ ನನಗೆ ಅವಮಾನ ಮಾಡಿದ್ದಾರೆ. ನಾನು ಇನ್ನು ಮುಂದೆ ನಿಮ್ಮನ್ನ ಇಷ್ಟ ಪಡಲ್ಲ. ನನಗೆ ಒಂದು ಗ್ಲಾಸ್ ನೀರು ಕೊಡ್ಲಿಲ್ಲ ನಿಮ್ ಸೆಕ್ಯುರಿಟಿ. ಇನ್ಯಾವತ್ತೂ ನಾನು ನಿಮ್ ಮನೆ ಹತ್ರ ಬರಲ್ಲ. ಮನೆವರೆಗೆ ಯಾರಾದ್ರೂ ಬಂದ್ರೆ ಕನಿಷ್ಟ ಒಂದು ಗ್ಲಾಸ್ ನೀರು ಕೊಡೋದಕ್ಕೆ ನಿಮ್ ಸೆಕ್ಯುರಿಟಿ ಗಾರ್ಡ್ ಗೆ ಹೇಳಿ. ನೀರಿಗೆ ಬರ ಇದ್ರೆ ಈ ಹುಚ್ಚ  ವೆಂಕಟ್ ನಂಬರ್ ಗೆ ಕಾಲ್ ಮಾಡೋಕೆ ಹೇಳಿ. ಟ್ಯಾಂಕರ್ ಗಟ್ಟಲೆ ಕಳುಹಿಸ್ತಿನಿ. ಒಬ್ಬ ಅಭಿಮಾನಿಗೆ ನೀರು ಕೊಡ್ಲಿಲ್ಲ ಅಂದ್ರೆ ಏನ್ ಅರ್ಥ. ನೀವ್ ಫೋನ್ ಮಾಡಿಲ್ಲ ಅಂದ್ರೆ ಹುಚ್ಚ ವೆಂಕಟ್ ವ್ಯಾಲ್ಯೂ ಕಮ್ಮಿ ಆಗಲ್ಲ’ ಎಂದು ಇನ್ನೂ ಏನೇನೊ ಹೇಳಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.ಇದನ್ನು ನೋಡಿದ ಶಿವರಾಜ್ ಕುಮಾರ್ ಅಭಿಮಾನಿಗಳು ಹುಚ್ಚ ವೆಂಕಟ್ ಅವರನ್ನು ತರಾಟೆಗೆ ತೆಗೆದುಕೊಂಡು ಶಿವಣ್ಣನ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಮೊದಲು ಒಪ್ಪದ ಹುಚ್ಚ ವೆಂಕಟ್ ಅವರು ಕೊನೆಗೆ ತಲೆಬಾಗಿ ಕ್ಷಮೆ ಕೆಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶ್ರೀದೇವಿ ಅವರು ನಟಿಸಬೇಕಾಗಿದ್ದ ‘ಶಿದ್ದತ್’ ಚಿತ್ರಕ್ಕೆ ಈಗ ಈ ನಟಿ ಆಯ್ಕೆಯಾಗಿದ್ದಾರೆ!

ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ಅವರು ನಟಿಸಬೇಕಾಗಿದ್ದ ‘ಶಿದ್ದತ್’ ಚಿತ್ರದಲ್ಲಿ ಅವರ ...

news

ನಟಿ ಇಲಿಯಾನಾರಿಂದ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ಮೇಲೆ ಆರೋಪ; ಚಿಕ್ಕ ಚಿಕ್ಕ ಬಟ್ಟೆ ತೊಟ್ಟುಕೊಳ್ಳುವುದಕ್ಕೆ ಹೇಳಿದ್ದಕ್ಕೆ ನಟಿ ಪುಲ್ ಗರಂ!

ಮುಂಬೈ : ಸಿನಿಮಾ ರಂಗದಲ್ಲಿ ತಾರೆಯರು, ನಿರ್ದೇಶಕರ ಮೇಲೆ ಆರೋಪ ಮಾಡಿರುವುದನ್ನು ನಾವು ಅನೇಕ ಬಾರಿ ...

news

ನಟಿ ಶ್ರೀದೇವಿ ಸಾವನ್ನಪ್ಪಿದ ದುಬೈನ ಹೋಟೆಲ್ ರೂಂನಲ್ಲಿ ಇರುವುದಕ್ಕೆ ಯಾರೂ ಒಪ್ಪುತ್ತಿಲ್ಲವಂತೆ, ಇದಕ್ಕೆ ಕಾರಣವೇನು ಗೊತ್ತಾ…?

ಮುಂಬೈ : ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಅವರು ಮದುವೆಯ ನಿಮಿತ್ತ ದುಬೈಗೆ ತೆರಳಿ ಅಲ್ಲಿ ತಂಗಿದ್ದ ಹೋಟೆಲ್ ...

news

ಕೆ.ಮಂಜು ಅವರ 'ಪಡ್ಡೆ ಹುಲಿ' ಚಿತ್ರಕ್ಕೆ ಈ ನಟನೇ ಸ್ಪೂರ್ತಿಯಂತೆ!

ಬೆಂಗಳೂರು : ಇತ್ತಿಚೆಗಷ್ಟೇ ‘ಪಡ್ಡೆಹುಲಿ’ ಚಿತ್ರದ ಮುಹೂರ್ತ ಸಮಾರಂಭ ನೆರೆವೇರಿದ್ದು, ಈ ಸಂದರ್ಭದಲ್ಲಿ ...

Widgets Magazine
Widgets Magazine