ಜರ್ಮನಿಯಲ್ಲಿ ಒಂದು ಮೊಟ್ಟೆಯ ಕಥೆ

ಬೆಂಗಳೂರು, ಸೋಮವಾರ, 10 ಜುಲೈ 2017 (11:33 IST)

ಬೆಂಗಳೂರು:`ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರಾಜ್ ಬಿ. ಶೆಟ್ಟಿ ನಿರ್ದೇಶನದ ಈ ಚಿತ್ರ ಬಿಡುಗಡೆಯಾದಾಗಿನಿಂದ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ.
 
ಈ ನಡುವೆ ಚಿತ್ರ ಜರ್ಮನಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜುಗೊಂಡಿರುವುದು ವಿಶೇಷ. `ಒಂದು ಮೊಟ್ಟೆಯ ಕಥೆ' ಚಿತ್ರ ಮೊದಲು ಬಿಡುಗಡೆಯಾಗಿದ್ದೇ ಹೊರದೇಶದಲ್ಲಿ. ಮೇನಲ್ಲಿ ನಡೆದ ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ಇತ್ತು. ಅಮೆರಿಕಾ ನಂತರ ಲಂಡನ್ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿತ್ತು `ಒಂದು ಮೊಟ್ಟೆಯ ಕಥೆ'. 
 
ಜುಲೈ 15ರಂದು `ಒಂದು ಮೊಟ್ಟೆಯ ಕಥೆ' ಚಿತ್ರವು ಜರ್ಮನಿಯ ಲಿವರ್‍ಕುಸನ್‍ನ ಸ್ಕಾಲಾ ಸಿನಿಮಾದಲ್ಲಿ ಮೊದಲು ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಫ್ರಾಂಕ್‍ಫರ್ಟ್, ಮ್ಯೂನಿಚ್, ಬರ್ಲಿನ್, ಹ್ಯಾಂಬರ್ಗ್ ಮುಂತಾದ ಕಡೆ ಬಿಡುಗಡೆಯಾಗಿ ಪ್ರದರ್ಶನ ಕಾಣಲಿದೆ. ಇದಾದ ನಂತರ ಆಗಸ್ಟ್‌ನಲ್ಲಿ ಗಾಲ್ಫ್‌‌‌‌ನಲ್ಲಿ ಬಿಡುಗಡೆಯಾಗಲಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

ಹಾಟ್ ಲುಕ್ ನಲ್ಲಿ ಹುಡುಗರ ನಿದ್ದೆಗೆಡಿಸುತ್ತಿದ್ದಾಳೆ ಆಮಿ

ಸದಾಕಾಲ ಸುದ್ದಿಯಲ್ಲಿರಲು ಸೆಲೆಬ್ರಿಟಿಗಳು ಹೊಸ ಹೊಸ ಅವತಾರಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಗಮನ ...

news

ಶ್ರೀದೇವಿ ಬಗ್ಗೆ ಹಾಗೇಕೆ ಹೇಳಿದೆ? ಬಾಹುಬಲಿ ನಿರ್ದೇಶಕ ರಾಜಮೌಳಿ ಸ್ಪಷ್ಟನೆ

ನವದೆಹಲಿ: ಬಾಹುಬಲಿ ಸಿನಿಮಾದಲ್ಲಿ ಶ್ರೀದೇವಿ ನಟಿಸದೇ ಇರುವುದಕ್ಕೆ ಕಾರಣಗಳ ಬಗ್ಗೆ ...

news

ಕಪಿಲ್ ಶೋ ಆರಂಭಕ್ಕೂ ಮುನ್ನವೇ ಶಾರೂಖ್, ಅನುಷ್ಕಾ ಹೊರಹೋಗಿದ್ದೇಕೆ..?

ಬಾಲಿವುಡ್ ಬಾದ್ ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ತಮ್ಮ ಜಬ್ ಹರಿ ಮೆಟ್ ಸೆಜೋಲ್ ಚಿತ್ರದ ...

news

ಕ್ರೇಜಿಸ್ಟಾರ್ ಗೆ ನಾಯಕಿಯಾಗಿ ರಾಧಿಕಾ..

ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಟ್ಟದ ಲೋಕಕ್ಕೆ ಅಡಿಯಿತ್ಟಿದ್ದಾರೆ. ರುದ್ರತಾಂಡವ ಚಿತ್ರದ ಬಳಿಕ ಎರಡು ...

Widgets Magazine