ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿಕೆಗೆ ಅಭಿಮಾನಿಗಳು ಶಾಕ್.....!!!!

ನಾಗಶ್ರೀ ಭಟ್ 

ಬೆಂಗಳೂರು, ಗುರುವಾರ, 25 ಜನವರಿ 2018 (17:45 IST)

ಟಾಲಿವೂಡ್‌ನಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟಾರ್ ಹೀರೋ ಪವನ್ ಕಲ್ಯಾಣ ಇತ್ತೀಚಿಗೆ ನೀಡಿರುವ ಹೇಳಿಕೆ ಅವರ ಇಡೀ ಅಭಿಮಾನಿ ವಲಯದಲ್ಲಿ ಬಾರಿ ಸಂಚಲನವನ್ನೂಂಟು ಮಾಡಿದೆ ಎಂದೇ ಹೇಳಬಹುದು. ಅದೇನಪ್ಪಾ ಅಂತಾ ಸ್ಟೇಟ್‌ಮೆಂಟ್ ಅಂತೀರಾ ಇಲ್ಲಿದೆ ವಿವರ..
ಫೇಮಸ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯ ಪ್ರವೇಶಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ, ಆದ್ರೆ ವಿಶ್ಯಾ ಏನಪ್ಪಾ ಅಂದ್ರೆ ಅವರು ಇನ್ನು ಮುಂದೆ ಸಿನೇಮಾ ಮಾಡಲ್ಲಾ ಅನ್ನೋ ಹೇಳಿಕೆ ನೀಡಿರೋದು.
 
ಹೌದು, ಇತ್ತೀಚಿಗೆ 3 ದಿನಗಳ ರಾಜಕೀಯ ಪ್ರವಾಸದಲ್ಲಿರುವ ಪವನ್ ತಮ್ಮ ಪ್ರವಾಸದ ಮೊದಲ ದಿನವೇ "ಸಿನೆಮಾ ನನ್ನ ತಲೆಯಿಂದ ಹೊರಬಂದಿದೆ. ಈಗ ಏನಿದ್ದರೂ ನನ್ನ ಗಮನ ಕೇವಲ ರಾಜಕೀಯದ ಕಡೆ" ಎನ್ನುವ ಹೇಳಿಕೆ ನೀಡಿದ್ದು, ಅಭಿಮಾನಿಗಳಿಗೆ ಈ ಹೇಳಿಕೆ ಬಾರಿ ನಿರಾಸೆ ಉಂಟುಮಾಡಿದೆ ಎಂದೇ ಹೇಳಬಹುದು ಅಷ್ಟೇ ಅಲ್ಲ, ಕಲ್ಯಾಣ್ ಇತ್ತೀಚಿಗೆ ನಟಿಸಿರುವ ಚಿತ್ರವಾದ 'ಅಜ್ನಾತವಾಸಿ' ಕೂಡಾ ಟಾಲಿವೂಡ್ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡದೇ ಇರೋದು ಸಹ ಅವರ ಈ ನಿರ್ಧಾರಕ್ಕೆ ಪುಷ್ಟಿ ನೀಡಿರಬಹುದು ಎನ್ನಲಾಗುತ್ತಿದೆ. 
 
ಈ ಹಿಂದೆ ಹಲವು ಬಾರಿ ಚಲನಚಿತ್ರ ಮತ್ತು ರಾಜಕೀಯದ ಕುರಿತು ಪವನ್ ಇಂತಹ ಹಲವು ಹೇಳಿಕೆಗಳನ್ನು ನೀಡಿದ್ದು ಅಭಿಮಾನಿಗಳು ಈ ಹೇಳಿಕೆಯಿಂದ ಹೆಚ್ಚು ಬೇಸರಪಡುವ ಅಗತ್ಯವಿಲ್ಲ. ಏಕೆಂದರೆ ಈಗಾಗಲೇ ಪವನ್ ಕಲ್ಯಾಣ್ ಹಲವು ಸ್ಕ್ರಿಪ್ಟ್‌ಗಳನ್ನು ಒಪ್ಪಿಕೊಂಡಿದ್ದು ಅದನ್ನು ಪೂರ್ಣಗೊಳಿಸಬೇಕಿದೆ ಹಾಗಾಗಿ ಅಭಿಮಾನಿಗಳು ಅವರ ಮುಂಬರುವ ಚಿತ್ರವನ್ನು ನೀರಿಕ್ಷಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪೋಲೀಸ್ ಲುಕ್‌ನಲ್ಲಿ ದೀಪಿಕಾ...!!

ಇತ್ತೀಚಿಗಷ್ಟೇ ದೇಸಿ ಲೆಹೆಂಗಾದಲ್ಲಿ ಆಭರಣಗಳನ್ನು ತೊಟ್ಟು ಪಕ್ಕಾ ದೇಸಿ ರಾಜಕುಮಾರಿಯ ಹಾಗೆ ಅಭಿಮಾನಿಗಳ ...

news

ವಿರಾಟ್ ಕೊಹ್ಲಿ ಇಲ್ಲದ ಮನೆಯಲ್ಲಿ ಅನುಷ್ಕಾ ಶರ್ಮಾಗೆ ಜತೆಯಾದವರು ಯಾರು ಗೊತ್ತಾ?!

ಮುಂಬೈ: ಪತಿ ವಿರಾಟ್ ಕೊಹ್ಲಿ ಇದೀಗ ದ.ಆಫ್ರಿಕಾದಲ್ಲಿ ಕ್ರಿಕೆಟ್ ಆಡಲು ತೆರಳಿದ ವೇಳೆ ಪತ್ನಿ ಅನುಷ್ಕಾ ...

news

ಬಿಗ್ ಬಾಸ್ ಕನ್ನಡ: ಫೈನಲ್ ಶೂಟಿಂಗ್ ಆಗ್ಲೇ ಶುರುವಾಯ್ತು!

ಬೆಂಗಳೂರು: ಬಿಗ್ ಬಾಸ್ ಫೈನಲ್ ನಲ್ಲಿ ಗೆಲ್ಲುವವರು ಯಾರು ಎಂಬ ಕುತೂಹಲ ಒಂದೆಡೆಯಾದರೆ ಹೊರ ಬಂದ ...

news

ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದ ನಟಿ ಹರಿಪ್ರಿಯಾ ಮಾಡಿದ್ದೇನು…?

ಬೆಂಗಳೂರು : ಸಾಮಾನ್ಯ ಜನರು ತಿರುಪತಿ ಬೆಟ್ಟವನ್ನು ಕಾಲನಡಿಗೆಯಲ್ಲಿ ಹತ್ತುವುದು ಸಹಜ. ಆದರೆ ...

Widgets Magazine
Widgets Magazine