ಬಾಹುಬಲಿ ರೀತಿಯ ಮತ್ತೊಂದು ಚಿತ್ರ ಮಾಡಿದರೆ ಸತ್ತೇ ಹೋಗ್ತೀನಿ: ಪ್ರಭಾಸ್

ಹೈದ್ರಾಬಾದ್, ಬುಧವಾರ, 19 ಏಪ್ರಿಲ್ 2017 (10:45 IST)

Widgets Magazine

ತೆಲುಗು ನಟ ಪ್ರಭಾಸ್ ಅವರನ್ನ ನ್ಯಾಶನಲ್ ಐಕಾನ್ ಮಾಡಿದ ಚಿತ್ರ ಬಾಹುಬಲಿ. ರಾಜಮೌಳಿ ನಿರ್ದೇಶನದ ಈ ಚಿತ್ರದ ಪಾರ್ಟ್-2 ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಚಿತ್ರದ ಪ್ರಚಾರದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ.


ಇದೇ ಜನಪ್ರಿಯತೆ ಬಳಸಿಕೊಮಡು ರಾಜಕೀಯಕ್ಕೆ ಪ್ರವೇಶ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರಭಾಸ್, ಖಂಡಿತಾ ಇಲ್ಲ. ರಾಜಕೀಯಕ್ಕೆ ನಾನು ಸರಿಹೋಗುವುದಿಲ್ಲ. ರಾಜಕೀಯದ ಅಭಿಲಾಷೆ ಇಂದಿಗೂ ಇಲ್ಲ ಎಂದೆಂದಿಗೂ ಇಲ್ಲ ಎಂದಿದ್ದಾರೆ.

ಬಾಹುಬಲಿಯಂತಹ ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು, ನಿಜಕ್ಕೂ ಸಂತಸದ ವಿಷಯ. ಇದರ ಸಂಪೂರ್ಣ ಶ್ರೇಯ ರಾಜಮೌಳಿಗೆ ಸಲ್ಲಬೇಕು. ಇದು ರಾಜಮೌಳಿಯ ಕನಸು. ಅದನ್ನ ಸಾಕಾರಗೊಳಿಸಲು ಸಹಕಾರ ಕೊಟ್ಟಿದ್ದೇನೆ. ನೀವು ಬಾಹುಬಲಿ ರೀತಿಯ ಮತ್ತೊಂದು ಚಿತ್ರ ಮಾಡ್ತೀರಾ ಎಂದು ಕೇಳಿದ್ದಕ್ಕೆ ನಗುತ್ತಾ ಉತ್ತರಿಸಿದ ಪ್ರಭಾಸ್, ಬಾಹುಬಲಿ ರೀತಿಯ ಮತ್ತೊಂದು ಚಿತ್ರವನ್ನ ಟ್ರೈ ಮಾಡಲು ಹೋದರೆ ನಾನು ಸತ್ತೇ ಹೋಗ್ತೀನಿ. ಅಷ್ಟು ಸುಲಭವಾಗಿ ಪ್ರತಿಕೃತಿ ನಿರ್ಮಿಸಬಹುದಾದ ಚಿತ್ರ ಅದಲ್ಲ.  ಅಷ್ಟೊಂದು ದೊಡ್ಡ ಪ್ರಮಾಣದ ಚಿತ್ರವನ್ನ ಹ್ಯಾಂಡಲ್ ಮಾಡುವ ಅನುಭವ ಮತ್ತು ದೃಷ್ಟಿಕೋನ ರಾಜಮೌಳಿಗೆ ಮಾತ್ರವಿದೆ ಎಂದಿದ್ದಾರೆ.
 
ಬಾಹುಬಲಿ-2 ರಿಲೀಸ್ ಬಳಿಕ ಸಾಹೂ ಎಂಬ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರಂತೆ. 150 ಕೋಟಿ ರೂ. ಬಜೆಟ್`ನ ಈ ಚಿತ್ರವನ್ನ ಸುಜೀತ್ ನಿರ್ದೇಶನ ಮಾಡುತ್ತಿದ್ದಾರಂತೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಾಹುಬಲಿ ಪ್ರಭಾಸ್ ಟಾಲಿವುಡ್ Baahubali Prabhas Tollywood

Widgets Magazine

ಸ್ಯಾಂಡಲ್ ವುಡ್

news

ಅಮೆರಿಕದಲ್ಲಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್

ಕನ್ನಡದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್ ಮಾಡಿರುವ ಈಗ ಆನ್ ...

news

1000 ಕೋಟಿ ವೆಚ್ಚದಲ್ಲಿ ಸಿನಿಮಾ.. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು

ದುಬೈನ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಭಾರತದ ಅತಿ ದೊಡ್ಡ ಮೋಶನ್ ಪಿಲ್ಚರ್ ಮಹಾಭಾರತಕ್ಕಾಗಿ ...

news

ಭೂಕಂಪನದ ಅನುಭವ ಬಿಚ್ಚಿಟ್ಟ ನಟಿ ರಕ್ಷಿತಾ ಪ್ರೇಮ್

ರಾಜ್ಯದ ಹಲವೆಡೆ ಭೂಕಂಪನದ ಅನುಭವವಾಗಿದೆ. ರಾಜರಾಜೇಶ್ವರಿನಗರದ ತಮ್ಮ ಮನೆಯಲ್ಲಿ ಭೂಮಿ ಕಂಪಿಸಿದ ಬಗ್ಗೆ ...

news

ಸ್ಯಾಂಡಲ್ ವುಡ್ ನಲ್ಲಿ ಕುರುಕ್ಷೇತ್ರ ಯುದ್ಧವೇ ನಡೆಯಲಿದೆ!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯದಲ್ಲೇ ಕುರುಕ್ಷೇತ್ರ ಕಾಳಗ ನಡೆಯಲಿದೆ! ಹಾಗಂತ ಗಾಬರಿಯಾಗಬೇಕಿಲ್ಲ. ...

Widgets Magazine