ಟಿಸರ್‌ನಲ್ಲಿ ಧೂಳೆಬ್ಬಿಸಿರುವ ಪ್ರಣಾಮ್ ದೇವರಾಜ್...!

ಬೆಂಗಳೂರು, ಮಂಗಳವಾರ, 9 ಜನವರಿ 2018 (18:30 IST)

ಸ್ಯಾಂಡಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರತಿಭೆಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಪುತ್ರ ಹೊಸ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕುಮಾರಿ 21 ಎಫ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿರುವ ಪ್ರಣಾಮ್ ದೇವರಾಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ನಿಧಿ ಕುಶಾಲಪ್ಪ ಅವರು ನಾಯಕಿಯಾಗಿದ್ದಾರೆ. ಕುಮಾರಿ 21 ಎಫ್ ಚಿತ್ರವು ತೆಲುಗು ಸಿನೇಮಾದ ರಿಮೇಕ್ ಆಗಿದ್ದು, ಪಕ್ಕಾ ರೋಮ್ಯಾಂಟಿಕ್ ಆಗಿದೆ. ಇದು ಹದಿಹರೆಯದ ಮಯಸ್ಸಿನಲ್ಲಿ ಮೂಡುವ ಭಾವನೆಗಳ ಒಳಗೆ ಸಿಲುಕಿದ ಯುವಕ ಯುವತಿಯ ನಡುವೆ ಸುತ್ತೋ ಕಥೆಯಾಗಿದೆ ಅಂತಾರೆ ನಿರ್ದೇಶಕರು.
 
ಈಗಾಗಲೇ ಈ ಚಿತ್ರದ ಹಾಡಿನ ಟೀಸರ್ ಬಿಡುಗಡೆಯಾಗಿದ್ದು, ಪ್ರಣಾಮ್ ದೇವರಾಜ್ ಡಾನ್ಸ್‌ ಮೋಡಿಗೆ ಸ್ಯಾಂಡಲ್‌ವೂಡ್ ಮಂದಿ ಭೇಷ್ ಅಂದಿದ್ದಾರೆ. ಅಷ್ಟೇ ಅಲ್ಲ ಯುಟ್ಯೂಬ್‌ನಲ್ಲೂ ಸಹ ಈ ಟೀಸರ್ ಸಕತ್ ಸೌಂಡು ಮಾಡ್ತಾ ಇದೆ.
 
ಈ ಚಿತ್ರವನ್ನು ಜಿ. ಶೀಧರ್ ಮತ್ತು ಎ. ಸಂಪತ್ ನಿರ್ಮಿಸುತ್ತಿದ್ದರೆ ಶ್ರೀಮಾನ್ ವೆಮೂಲಾ ಚಿತ್ರ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ ಸಾಗರ್ ಮಹತಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರವು ಜನವರಿ 12, 2018 ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಎಂಗೇಜ್ ಆದ ಅನಿಕಾ-ಸಚಿನ್ ಜೋಡಿ ಮದುವೆ ಮುರಿದುಬಿದ್ದಿದ್ದಕ್ಕೆ ಕಾರಣ ಯಾರು ಗೊತ್ತಾ...?

ಬೆಂಗಳೂರು : ಕಿರುತೆರೆ ನಟಿ ಅನಿಕಾ ಹಾಗು ಸಚಿನ್ ಅವರ ನಡುವೆ ಮದುವೆ ನಿಶ್ಚಯವಾಗಿದ್ದು, ಈಗ ಅದು ಕಾರುಣ್ಯ ...

news

ಬಲು ಜೋರಾಗಿತ್ತು ಯಶ್ ಬರ್ತ್ ಡೇ! ಯಶ್-ರಾಧಿಕಾ ಪಾರ್ಟಿಗೆ ಯಾರೆಲ್ಲಾ ಬಂದಿದ್ದರು ಗೊತ್ತಾ? (ಫೋಟೋ ಗ್ಯಾಲರಿ)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಸ್ಯಾಂಡಲ್ ...

news

ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯಕ್ಕೆ ಇಳಿಯುತ್ತಿರುವುದರ ಬಗ್ಗೆ ...

news

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಜಗನ್ ಹೋಗಿದ್ದೆಲ್ಲಿಗೆ?

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ತನ್ನ ಮುಂಗೋಪದಿಂದಲೇ ...

Widgets Magazine