Widgets Magazine

‘ಮಾಸ್ಟರ್’ ಸಿನಿಮಾ ಲೀಕ್ : ತಮಿಳು ಸಿನಿಮಾಗೆ ಪ್ರಶಾಂತ್ ನೀಲ್, ಸ್ಯಾಂಡಲ್ ವುಡ್ ಅಭಿಮಾನಿಗಳ ಸಾಥ್

ಬೆಂಗಳೂರು| Krishnaveni K| Last Modified ಮಂಗಳವಾರ, 12 ಜನವರಿ 2021 (10:45 IST)
ಬೆಂಗಳೂರು: ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಾದ ತುಣುಕುಗಳು ಆನ್ ಲೈನ್ ನಲ್ಲಿ ಲೀಕ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಒಗ್ಗಟ್ಟಾಗಿದ್ದಾರೆ.

 
ತಮಿಳು ಸಿನಿಮಾದ ದೃಶ್ಯಗಳು ಆನ್ ಲೈನ್ ನಲ್ಲಿ ಹರಿದಾಡಿದ್ದು ಚಿತ್ರತಂಡಕ್ಕೆ ಸಂಕಷ್ಟ ತಂದಿತ್ತು. ಈ ಬಗ್ಗೆ ಟ್ವೀಟ್ ಮಾಡಿದ ಪ್ರಶಾಂತ್ ನೀಲ್ ‘ಒಂದು ಸಿನಿಮಾ ಮಾಡಲು ಸಾಕಷ್ಟು ಜನರ ಪರಿಶ್ರಮವಿದೆ. ದಯಮಾಡಿ ಅದನ್ನು ಹಾಳುಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳೂ ಪೈರಸಿ ತಡೆಗೆ ಸಾಥ್ ನೀಡಿದ್ದು ‘ಯಾರೂ ಮಾಸ್ಟರ್ ಸಿನಿಮಾದ ವಿಡಿಯೋ ತುಣುಗಳನ್ನು ಶೇರ್ ಮಾಡಬೇಡಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :