ಭುವನ್ ವಿರುದ್ಧ ಪ್ರತಿ ದೂರು ದಾಖಲಿಸಿದ ಪ್ರಥಮ್

ಬೆಂಗಳೂರು, ಮಂಗಳವಾರ, 25 ಜುಲೈ 2017 (13:30 IST)

ಭುವನ್ ತೊಡೆಗೆ ಕಚ್ಚಿ ಗಾಯಗೊಳಿಸಿದ ಆರೋಪಕ್ಕೆ ಸಿಲುಕಿರುವ ಪ್ರಥಮ್, ಭುವನ್ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ನೀಡಿದ್ದಾರೆ.


ಮೊದಲು ಜಗಳ ತೆಗೆದಿದ್ದು ಭುವನ್, ನನ್ನ ಮೇಲೆ ಹಲ್ಲೆ ನಡೆಸಿ ಕುತ್ತಿಗೆಗೆ ಗಾಯಗೊಳಿಸಿರುವುದಾಗಿ ಪ್ರಥಮ್ ದೂರು ನೀಡಿದ್ದಾರೆ. ನಿನ್ನೆ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದಿದ್ದ ಪ್ರಥಮ್, ರಾತ್ರಿ 12.30ರ ಸುಮಾರಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಿನ್ನೆ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕೇಳಿದಾಗ ದೂರು ನೀಡುವುದಾಗಿ ಪ್ರಥಮ್ ಹೇಳಿದ್ದರು.

ಪೊಲೀಸ್ ಠಾಣೆಗೆ ಭೇಟಿ ನೀಡಿದ ವೇಲೆ ಪ್ರಥಮ್ ಕುತ್ತಿಗೆಗೆ ಮೆಡಿಕಲ್ ಬೆಲ್ಟ್ ಸುತ್ತಿಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಥಮ್ ಸಹಚರರು, ಧಾರಾವಾಹಿ ಚಿತ್ರೀಕರಣದ ವೇಳೆ ನಡೆದ ಚಿಕ್ಕ ಜಗಳ ದೊಡ್ಡದು ಮಾಡುವುದು ಬೇಡವೆಂದು ಸುಮ್ಮನಿದ್ದೆವು. ಇದೀಗ, ಭುವನ್ ದೂರು ಕೊಟ್ಟಿರುವುದರಿಂದ ನಾವು ಸಹ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕುರುಕ್ಷೇತ್ರದ ಭೀಮನಾಗಿ ಆಯ್ಕೆಯಾಗಿದ್ದಾರೆ ಡ್ಯಾನಿಶ್ ಅಖ್ತರ್

ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ...

news

ಡ್ರಗ್ಸ್ ಹಗರಣ: ಕಾಜಲ್ ಅಗರ್ವಾಲ್ ಮ್ಯಾನೇಜರ್ ಬಂಧನ

ತನಿಖೆ ಮುಂದುವರೆದಂತೆ ಆಂಧ್ರಪ್ರದೇಶದ ಡ್ರಗ್ಸ್ ಮಾಫಿಯಾದಲ್ಲಿ ಮತ್ತಷ್ಟು ಸಿನಿಮಾ ಮಂದಿಯ ಹೆಸರುಗಳು ಕೇಳಿ ...

news

ಡ್ರಗ್ಸ್ ಹಗರಣ: ಹೈಕೋರ್ಟ್ ಮೆಟ್ಟಿಲೇರಿದ ನಟಿ ಚಾರ್ಮಿ ಕೌರ್

ತಿಂಗಳ ಹಿಂದಷ್ಟೇ ಬೆಳಕಿಗೆ ಬಂದ ಆಂಧ್ರಪ್ರದೇಶದ ಬೃಹತ್ ಡ್ರಗ್ಸ್ ಮಾಫಿಯಾದಲ್ಲಿ ವಿಚಾರಣೆ ಎದುರಿಸುತ್ತಿರುವ ...

news

ನಾನು ಒಳ್ಳೆ ಹುಡುಗ ಎನ್ನಲು ಹೊರಟ ಪ್ರಥಮ್ ಮೇಲೆ ನ್ಯಾಯಾಧೀಶರು ಗರಂ

ಬೆಂಗಳೂರು: ಸಹನಟ ಭುವನ್ ಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾದ ನಟ ಪ್ರಥಮ್ ಗೆ ...

Widgets Magazine