ತಮ್ಮ ಊರಿನಲ್ಲೊಂದು ಒಳ್ಳೆ ಕೆಲಸ ಮಾಡಿದ ಒಳ್ಳೆ ಹುಡುಗ ಪ್ರಥಮ್

ಬೆಂಗಳೂರು, ಮಂಗಳವಾರ, 29 ಮೇ 2018 (07:59 IST)

ಬೆಂಗಳೂರು : ರ ವಿನ್ನರ್ ಆದ ಒಳ್ಳೆ ಹುಡುಗ ಪ್ರಥಮ್ ಅವರು ಇದೀಗ ತಮ್ಮ ಊರಿನಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ.


ಬಿಗ್ ಬಾಸ್ ಸೀಸನ್ 4 ರ ಸ್ಪರ್ಧಿಯಾದ ಪ್ರಥಮ್ ಅವರು ಬಿಗ್ ಬಾಸ್ ನ ವಿನ್ನರ್ ಆದ್ರೆ ಆ ಹಣದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅಂದು ಹೇಳಿದಂತೆ ಇದೀಗ ಅವರು ತಮ್ಮ ಊರಿನಲ್ಲೊಂದು ಶಿವಲಂಕಾರೇಶ್ವರ ದೇವಸ್ಥಾನವನ್ನು ಕಟ್ಟಿಸಿದ್ದು, ಅದರ ಪೂಜೆ ಪುನಸ್ಕಾರಗಳೂ ಕೂಡ ಆರಂಭವಾಗಿವೆ.


ಈ ಬಗ್ಗೆ ಮಾತನಾಡಿದ ಪ್ರಥಮ್ ‘ಕೆಲವು ಕೆಲಸ ತುಂಬಾ ಆತ್ಮತೃಪ್ತಿ ಕೊಡುತ್ತೆ. ಅವತ್ತು ಹೇಳಿದ್ದೆ. ಬಿಗ್ಬಾಸ್ ಗೆದ್ದ ದುಡ್ಡಲ್ಲಿ ಏನಾದ್ರು ಮಾಡ್ಬೇಕು ಅಂತ. ನಮ್ಮೂರಲ್ಲಿ ಹಿರಿಯರ ಜೊತೆ ಸೇರಿ ಶಿವಾಲಂಕಾರೇಶ್ವರ ಕಟ್ಟುವ ಪ್ರಯತ್ನಕ್ಕೆ ಸಣ್ಣದಾಗಿ ಕೈಜೋಡಿದಿದೆ.ಇತ್ತೀಚೆಗೆ ಅದರ ಉದ್ಘಾಟನೆ ಆಯ್ತು. ನನ್ನನ್ನೇ ಮುಖ್ಯ ಅತಿಥಿಯಾಗಿ ಕರೆದಿದ್ರು. ತುಂಬಾ ಹೆಮ್ಮೆ ಅನ್ನುಸ್ತು. ಕೆಲವು ಕೆಲಸಗಳು ಕೊಡೋ ಆತ್ಮತೃಪ್ತಿ ಇನ್ನೆಲ್ಲೂ ಸಿಗಲ್ಲ! ಯಾಕೋ ನನ್ನೂರಲ್ಲಿ ದೊಡ್ಡವರ ಮುಂದೆ stage ಮೇಲೆ ಕೂತ್ಕೊಳ್ಳೋಕೆ ಒಂಥರಾ. ಒಂದೆರಡು ದಿನ ಆದ್ಮೇಲೆ ನಾನೇ ಹೋಗಿ ನಮ್ ದೇವಸ್ಥಾನ ನೋಡಿ ಖುಷಿಯಿಂದ ಬಂದೆ. ಆದಷ್ಟು ಬೇಗ ಬೋರ್ ಹಾಕಿಸ್ಬೇಕು ದೇವಸ್ಥಾನಕ್ಕೆ ಅಂತ ಮಾಡಿದ್ದೀನಿ. ನಿಜಕ್ಕೂ ಇವತ್ ಸಕ್ಕತ್ ಖುಷಿ ಆಗ್ತಿದೆ. ನನ್ನೂರು ನನಗೆ ಹೆಮ್ಮೆ’  ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಥಮ್ ಬಿಗ್ ಬಾಸ್ ಸೀಸನ್ 4 ವಿನ್ನರ್ ದೇವಸ್ಥಾನ ನಿರ್ಧಾರ Pratham Winner Temple Decide Big Boss Season 4

ಸ್ಯಾಂಡಲ್ ವುಡ್

news

ಓಲಾ ಚಾಲಕನ ವಿರುದ್ಧ ಕಿಡಿಕಾರಿದ ನಟಿ ಪಾರೂಲ್ ಯಾದವ್

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಪಾರೂಲ್ ಯಾದವ್ ಅವರು ಅಪ್ರಾಮಾಣಿಕ ಓಲಾ ಚಾಲಕನ ವಿರುದ್ಧ ...

news

ನಿಫಾ ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ನಟ ಮೋಹನ್‌ ಲಾಲ್

ಕೇರಳ: ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ನಿಫಾ ವೈರಸ್‌ ಬಗ್ಗೆ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ...

news

ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡ ನಟ ಹರ್ಷವರ್ಧನ್

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಹರ್ಷವರ್ಧನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ ...

news

ಅಭಿಮಾನಿಗಳ ಮುನಿಸಿಗೆ ಕಾರಣವಾಗಲು ನಟಿ ದೀಪಿಕಾ ಪಡುಕೋಣೆ ಮಾಡಿದ್ದಾದರೂ ಏನು?

ಮುಂಬೈ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್ ನಡೆಯುತ್ತಿದ್ದ ಕಾರಣ ಇದನ್ನು ...

Widgets Magazine
Widgets Magazine