ದೀಪಕ್ ರಾವ್ ಅವರ ಮನೆಗೆ ಭೇಟಿ ನೀಡಿದ ಒಳ್ಳೆ ಹುಡುಗ ಪ್ರಥಮ್ ಕಿಡಿಕಾರಿದ್ದು ಯಾರ ವಿರುದ್ಧ...?

ಮಂಗಳೂರು, ಸೋಮವಾರ, 8 ಜನವರಿ 2018 (07:59 IST)

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಮಂಗಳೂರಿನ ಹಿಂದೂಪರ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರ ಮನೆಗೆ ಭಾನುವಾರ ಬಿಗ್ ಬಾಸ್ ಸೀಸನ್ 4 ನ ವಿನ್ನರ್ ಪ್ರಥಮ್ ಅವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಹಾಗೆ ದೀಪಕ್ ಮನೆಯವರಿಗೆ ಪ್ರಥಮ್ ಅವರು ವೈಯಕ್ತಿಕವಾಗಿ 25 ಸಾವಿರ ರೂ. ಸಹಾಯಧನ  ನೀಡಿದರು.

 
ನಂತರ ಮನೆಯಿಂದ ಹೊರಬಂದ ಪ್ರಥಮ್ ಅವರು’ ಮಂಗಳೂರನ್ನು ಯಾಕೆ ಕ್ಲೀನ್ ಸಿಟಿ ಎನ್ನುತ್ತಿರಿ. ಇಲ್ಲಿ ನೆತ್ತರು ಹರಿದು ಕೆಂಪಾಗಿದೆ. ಇದು ಕ್ಲೀನ್ ಸಿಟಿಯೇ’ ಎಂದು ಪ್ರಶ್ನಿಸಿ ಕಿಡಿಕಾರಿದರು. ಹಾಗೆ ಸಚಿವ ಖಾದರ್ ವಿರುದ್ಧ ಕೋಪಗೊಂಡು ‘ಅವರು ಕೆಲ ಆರೋಪಿಗಳ ಜೊತೆ ಇರುವ ಫೋಟೋಗಳು ಹರಿದಾಡುತ್ತಿವೆ. ಎಲ್ಲರೂ ಕೇಳಿದಂತೆ ನಾನು ಅವರ ರಾಜೀನಾಮೆ ಕೇಳುವುದಿಲ್ಲ. ಅವರು ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ಒತ್ತಾಯಿಸುತ್ತೇನೆ ‘ ಎಂದು ಹೇಳಿದರು. ಹಾಗೆ ರಮಾನಾಥ ರೈ ವಿರುದ್ದ ಕೂಡ ಕಿಡಿಕಾರಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಮನೆಯೊಳಗೆ ಮುಖವಾಡ ಧರಿಸಿ ಬಂದ ಸುದೀಪ್ ಮಾಡಿದ್ದಾದರು ಏನು ಗೊತ್ತಾ…?

ಬೆಂಗಳೂರು : ಬಿಗ್ ಬಾಸ್ ನಲ್ಲಿ ಭಾನುವಾರದ ಕಿಚ್ಚನ್ ಟೈಮ್ ಸಂಚಿಕೆ ಈ ಸಲ ತುಂಬಾ ಡಿಫರೆಂಟ್ ಆಗಿತ್ತು. ...

news

‘ಲಗಾನ್’ ನಲ್ಲಿ ನಟಿಸಿದ ಶ್ರೀವಲ್ಲಭ ವ್ಯಾಸ್ ಅವರು ಇನ್ನಿಲ್ಲ

ಜೈಪುರ: ಅಮೀರ್ ಖಾನ್ ಅಭಿನಯದ ಹಿಂದಿ ಚಿತ್ರ ‘ಲಗಾನ್’ ನಲ್ಲಿ ಮುಖ್ಯ ಪ್ರಾತ್ರವೊಂದರಲ್ಲಿ ನಟಿಸಿದ್ದ ...

news

ಅನುಷ್ಕಾ ಶರ್ಮಾ ಪತಿ ವಿರಾಟ್ ಅವರನ್ನು ಬಿಟ್ಟು ಭಾರತಕ್ಕೆ ಮರಳಿದ್ದು ಯಾಕೆ ಗೊತ್ತಾ...?

ಮುಂಬೈ : ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ...

news

ಟಗರು ಚಿತ್ರದ ನಟಿ ಮಾನ್ವಿತಾ ಪೊಗರು ತೋರಿಸಿದ್ದು ಯಾಕಂತೆ...?

ಬೆಂಗಳೂರು : ನಟಿ ಮಾನ್ವಿತಾ ಹರೀಶ್ ಅವರು ಕೆಂಡಸಂಪಿಗೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ...

Widgets Magazine