Widgets Magazine

ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ಗೆ ವಿಜಯ್ ದೇವರಕೊಂಡ ಮೇಲೆ ಮೂಡಿದ ಪ್ರೇಮ!

ಹೈದರಾಬಾದ್| Krishnaveni K| Last Modified ಶುಕ್ರವಾರ, 9 ಆಗಸ್ಟ್ 2019 (09:41 IST)
ಹೈದರಾಬಾದ್: ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಇನ್ ಸ್ಟಾಗ್ರಾಂ ಪೋಸ್ಟ್ ಒಂದು ಈಗ ಭಾರೀ ವೈರಲ್ ಆಗಿದೆ.

 
ಡಿಯರ್ ಕಾಮ್ರೇಡ್ ಸ್ಟಾರ್ ಜತೆಗೆ ತೆಗೆಸಿಕೊಂಡಿರುವ ಫೋಟೋ ಪ್ರಕಟಿಸಿರುವ ಪ್ರಿಯಾ ತೆಲುಗಿನಲ್ಲಿ ನುವ್ವಂಟೆ ನಾಕು ಚಾಲ ಇಷ್ಟಂ (ನೀವಂದ್ರೆ ನನಗೆ ತುಂಬಾ ಇಷ್ಟ) ಎಂದು ಬರೆದುಕೊಂಡಿದ್ದಾರೆ.
 
ಈ ಪೋಸ್ಟ್ ನೋಡಿದ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಕೆಲವರು ರಶ್ಮಿಕಾ ಮಂದಣ್ಣ ಆಯ್ತು, ಈಗ ಪ್ರಿಯಾ ಪ್ರಕಾಶ್ ಬಂದಳಾ ಎಂದು ಕಾಲೆಳೆದಿದ್ದಾರೆ. ಇಷ್ಟಕ್ಕೇ ಸುಮ್ಮನಾಗ ಪ್ರಿಯಾ ಡಿಯರ್ ಕಾಮ್ರೇಡ್ ಸಿನಿಮಾದ ಹಾಡಿನ ಸಾಲುಗಳನ್ನು ಸರಣಿ ಫೋಟೋ ಮೂಲಕ ಪ್ರಕಟಿಸಿ ವಿಜಯ್ ಅಂದರೆ ತಮಗೆ ಎಷ್ಟು ಇಷ್ಟ ಎಂದು ಬಹಿರಂಗಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :