ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕನ್ನಡ ಸಿನಿಮಾ ಮಾಡ್ತಾರಂತೆ!

ಅತಿಥಾ 

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (16:21 IST)

Widgets Magazine

ಇತ್ತೀಚಿನ ದಿನಗಳಲ್ಲಿ ಟಾಪ್ ಹಿರೋಯಿನ್‌ಗಳನ್ನು ಹಿಂದಿಕ್ಕಿ ದೇಶಾದ್ಯಂತ ಯುವಕರ ನಿದ್ದೆ ಗೆಡಿಸಿ ಏಕಾಏಕಿ ಸ್ಟಾರ್ ಆದವರು ಪ್ರಿಯಾ ಪ್ರಕಾಶ್ ವಾರಿಯರ್. ಒಂದೇ ದಿನದಲ್ಲಿ ನ್ಯಾಷನಲ್ ಕ್ರಶ್ ಅಂತ ಪರಿಚಯಿಸಿಕೊಂಡಿರುವ ಈಕೆ ಬೇರೆಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.
ಸದ್ಯ ಕಣ್ಸನ್ನೆ ಹುಡುಗಿ ಪ್ರಿಯಾಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಿಂದ ಸಿನಿಮಾ ಆಫರ್‌ಗಳು ಬರುತ್ತಿವೆ. ಆದರೆ ಪ್ರಿಯಾ ವಾರಿಯರ್ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆಂಬುವ ಸುದ್ದಿ ಕೇಳಿಬರುತ್ತಿದೆ.
 
ಕನ್ನಡದ ಯುವ ನಿರ್ದೇಶಕ, ಯೋಗಿ ತಮ್ಮ ಮೊದಲ ಸಿನಿಮಾಗೆ ಪ್ರಿಯಾ ವಾರಿಯರ್ ಅವರನ್ನು ಕರೆ ತರುವ ತಯಾರಿ ನಡೆಸಿದ್ದಾರೆ. ಈ ಚಿತ್ರಕ್ಕೆ 'ಯೋಗಿ ಲವ್ಸ್ ಸುಪ್ರಿಯಾ' ಎಂದು ನಾಮಕರಣ ಮಾಡಲಾಗಿದೆಯಂತೆ. 
 
ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಟನೆಯನ್ನು ಯೋಗಿ ಅವರೇ ಮಾಡಲಿದ್ದಾರೆ. ಚಿತ್ರದಲ್ಲಿ ನಾಯಕಿಯ ಪಾತ್ರ ಒಬ್ಬ ಮಿಡಲ್ ಕ್ಲಾಸ್ ಕುಟುಂಬದ ಮುಗ್ಧ ಹುಡುಗಿಯ ಪಾತ್ರವಾಗಿದೆಯಂತೆ. ಹೊರಗಡೆ ಪ್ರಪಂಚದ ಬಗ್ಗೆ ಏನು ತಿಳಿಯದ ಒಂದು ಹುಡುಗಿಯ ಪಾತ್ರವನ್ನು ಪ್ರಿಯಾ ನಿಭಾಯಿಸಲಿದ್ದಾರೆ.
 
ಕಥೆಯನ್ನು ಹೇಳಿದಾಗ ಆಕೆಯೂ ಖುಷಿಯಾಗಿಯೇ ಒಪ್ಪಿಕೊಂಡಿದ್ದಾರಂತೆ. ಇನ್ನು ಅಂತಿಮ ಮಾತುಕತೆಯಷ್ಟೇ ಬಾಕಿ ಉಳಿದಿದೆ ಎಂದು ನಿರ್ದೇಶಕ ಯೋಗಿ ಹೇಳಿದ್ದಾರೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ತೆಲುಗು ಚಿತ್ರದಲ್ಲಿ ಅಲೆ ಎಬ್ಬಿಸುತ್ತಾರಾ ಕಿಯಾರಾ...!!!!

ಬಾಲಿವೂಡ್ ಬೆಡಗಿ ಕಿಯಾರಾ ತನ್ನ ಇತ್ತೀಚಿನ ಚಿತ್ರವಾದ ಎಮ್‌ಎಸ್ ಧೋನಿ ಚಿತ್ರದಲ್ಲಿ ತನ್ನ ಮೋಹಕ ನಟನೆಯಿಂದ ...

news

ರಾಣಿ ಮುಖರ್ಜಿ ಆಕಸ್ಮಿಕವಾಗಿ ಆ್ಯಕ್ಟರ್ ಆಗಿದ್ದಾರಂತೆ..!

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಣಿ ಮುಖರ್ಜಿ, ನಾನು ಆಕಸ್ಮಿಕವಾಗಿ ಆ್ಯಕ್ಟರ್ ಆದೆ. ನಾನು ...

news

ಬಿಗ್ ಬಾಸ್ ಸೀಸನ್ 5 ಮನೆಗೆ ಬೆಂಕಿ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 5 ...

news

ಕಂಗನಾ ರಣಾವತ್ ರಾಜಕೀಯ ಎಂಟ್ರಿ ಬಗ್ಗೆ ನಟಿಯ ಮ್ಯಾನೇಜರ್ ಹೇಳಿದ್ದೇನು....?

ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ...

Widgets Magazine