ಉಪೇಂದ್ರ ನಮಗಷ್ಟೇ ಸೀಮಿತವಲ್ಲ, ಅವರು ಕರ್ನಾಟಕದ ಮಗ: ಪ್ರಿಯಾಂಕಾ ಉಪೇಂದ್ರ

ಬೆಂಗಳೂರು, ಶನಿವಾರ, 12 ಆಗಸ್ಟ್ 2017 (15:45 IST)

ರಾಜಕೀಯ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಪತ್ನಿ ಪ್ರಿಯಾಂಕಾ ಉಪೇಂದ್ರ, ನಾವು ಖಂಡಿತಾ ಅವರನ್ನ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ, ಅವರು ನಮ್ಮ ಮನೆಗೆ ಸೀಮಿತವಲ್ಲ ಕರ್ನಾಟಕದ ಮಗ ಎಂದು ಹೇಳಿದ್ದಾರೆ.  


ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ಇದು ನಿಜಕ್ಕೂ ಹೆಮ್ಮೆ ಎನಿಸುತ್ತೆ. ಖಾಕಿ ಬಟ್ಟೆ ಹಾಕಿಕೊಂಡು ಸುದ್ದಿಗೋಷ್ಠಿ ನಡೆಸಿದರು.ಖಾಕಿ ಬಟ್ಟೆ ಕೆಲಸದ ಪ್ರತೀಕ. ಕಾಯಕವೇ ಕೈಲಾಸ ಎಂಬುದು ಅವರ ನಂಬಿಕೆ ಎಂದಿದ್ದಾರೆ.

ಇದೇವೇಳೆ, ಸಿನಿಮಾ ಮತ್ತು ಎರಡನ್ನೂ ಹೇಗೆ ಸಮತೋಲನ ಮಾಡುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ರಾಜಕೀಯದಲ್ಲಿ ತೊಡಗಿಸಿಕೊಂಡು ಸಿನಿಮಾ ಮಾಡುವುದು ಕಷ್ಟ. ಎರಡೂ ಫುಲ್ ಟೈಂ ಕೆಲಸವಾಗಿರುವುದರಿಂದ ಎರಡರಲ್ಲೂ ಮುಂದುವರೆಯುವುದು ಕಷ್ಟ. ಒಂದೆರಡು ಸಿನಿಮಾಗಳನ್ನ ಮಾಡುತ್ತಿದ್ದಾರೆ. ಅವುಗಳನ್ನ ಮುಗಿಸಿ ಸಂಪೂರ್ಣ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸುದ್ದಿಗೋಷ್ಠಿಯಲ್ಲಿ ಪ್ರಜಾಕೀಯದ ಪರಿಕಲ್ಪನೆ ಬಿಚ್ಚಿಟ್ಟ ನಟ ಉಪೇಂದ್ರ

ಅಂತೂ ಇಂತೂ ತಮ್ಮ ಸಿನಿಮಾಗಳ ಮೂಲಕ ರಾಜಕೀಯ ವ್ಯವಸ್ಥೆಯ ವಿಡಂಬನೆ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ...

news

ಶೂಟಿಂಗ್ ನಲ್ಲಿ ಗಾಯ ಮಾಡಿಕೊಂಡ ಬಿಗ್ ಬಿ ಅಮಿತಾಭ್ ಬಚ್ಚನ್

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ಶೂಟಿಂಗ್ ವೇಳೆ ...

news

ಇಂದು ಮಹತ್ವದ ಸುದ್ದಿ ಸ್ಪೋಟಿಸುತ್ತಾರಾ ಉಪೇಂದ್ರ?!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಸೇರುವುದು ನಿಶ್ಚಿತವಾಗಿದೆ. ಹೀಗಿರುವಾಗ ಅವರು ಯಾವ ಪಕ್ಷ ...

Widgets Magazine