ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ; ಕಿಡಿಗೇಡಿಗಳ ಮೇಲೆ ನಟ ಜಗ್ಗೇಶ್ ಆಕ್ರೋಶ

ಬೆಂಗಳೂರು, ಗುರುವಾರ, 5 ಜುಲೈ 2018 (13:24 IST)

ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಆಗಿತ್ತು. ಅದೇರೀತಿ ಇದೀಗ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಫೇಕ್ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಮಾಡಿರುವ ಕಿಡಿಗೇಡಿಯೊಬ್ಬ ಸಿಕ್ಕಿಬಿದ್ದಿದ್ದು,  ಈ ಬಗ್ಗೆ  ನಟ ನವರಸನಾಯಕ ಜಗ್ಗೇಶ್ ಅವರು ಮಾಹಿತಿ ನೀಡಿದ್ದಾರೆ.


ಈ ಕಿಡಿಗೇಡಿ ಕ್ರಿಯೆಟ್ ಮಾಡಿದ್ದ ಫೇಕ್ ಅಕೌಂಟ್ ನ್ನು ಪುನೀತ್ ಅಫೀಶಿಯಲ್ ಆಕೌಂಟ್ ಎಂದು ಸಾಕಷ್ಟು ನಟ ನಟಿಯರು ಫೋಟೋಗಳನ್ನು ಟ್ಯಾಗ್ ಮಾಡುತ್ತಿದ್ದರು. ಅಲ್ಲದೇ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಅದು  ಪುನೀತ್ ಅವರ ಅಫೀಶಿಯಲ್ ಅಕೌಂಟ್ ಎಂದು ತಿಳಿದು ಫಾಲೋ ಮಾಡುತ್ತಿದ್ದರು.


ಈ ಬಗ್ಗೆ ನಟ ಜಗ್ಗೇಶ್ ಅವರು, ’ಸೆಲಿಬ್ರಿಟಿಗಳ ಬದುಕು ಎಷ್ಟು ಕಷ್ಟ ಅನ್ನೋದು ಇದಕ್ಕೆ. ಕಷ್ಟಪಟ್ಟು ನೋವು ಅಪಮಾನ ಸಹಿಸಿ ಬೆಳೆದ ಮೇಲೆ ಇಂತಹ  ಸಮಯ ಸಾಧಕರ ಆಗಮನ ಶ್ರಮವಿಲ್ಲದೆ ಸಾಧಕನ ಹೆಸರು ಬಳಸಿ ಬೆಳೆಯಲು. ಸ್ವತಃ ಪುನೀತನೆ ಹೇಳಬೇಕಾಯಿತು ಅಭಿಮಾನಿಗಳಿಗೆ. ಜಾಲತಾಣ ದುರ್ಬಳಕೆ ಅಂದರೆ ಇದೆ ಅದಕ್ಕೆ ಜನ ಯಾರನ್ನು ನಂಬೋಲ್ಲಾ. ಇದಕ್ಕಿಂತ ಮೈಬಗ್ಗಿಸಿ ದುಡಿದು ತಿನ್ನಿ ಸ್ವಾಭಿಮಾನದಿಂದ’ ಎಂದು ಟ್ವೀಟ್ ಮಾಡಿ ಕಿಡಿಗೇಡಿಗಳ ಮೇಲೆ  ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಸೊನಾಲಿ ಬೇಂದ್ರೆಗೆ ಬಂದಿರುವುದು ಯಾವ ಖಾಯಿಲೆ ಗೊತ್ತೇ...?

ಮುಂಬೈ : ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಅವರು ಕ್ಯಾನ್ಸರ್‌ ನಿಂದ ಬಳಲುತ್ತಿದ್ದು ನ್ಯೂಯಾರ್ಕ್‌ನಲ್ಲಿ ...

news

ಮಿಲ್ಕಿ ಬ್ಯೂಟಿ ತಮನ್ನಾ ಫಿಟ್ ಅಂಡ್ ಪರ್ಫೆಕ್ಟ್ ಪರ್ಸನಾಲಿಟಿ ಸಿಕ್ರೇಟ್ ಇಲ್ಲಿದೆ ನೋಡಿ

ಹೈದರಾಬಾದ್ : ಮಿಲ್ಕಿ ಬ್ಯೂಟಿ ತಮನ್ನಾ ಅವರ ದೇಹ ಸೌಂದರ್ಯ ನೋಡಿದರೆ ತಮಗೂ ಅದೇರೀತಿಯಾದ ಪರ್ಸನಾಲಿಟಿ ಬೇಕು ...

news

ಸಹೋದರ ಅರ್ಬಾಜ್ ಖಾನ್ ಐಪಿಲ್ ಬೆಟ್ಟಿಂಗ್ ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?

ಮುಂಬೈ : ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರು ಐಪಿಲ್ ಬೆಟ್ಟಿಂಗ್ ...

news

‘ಭಾರತ್’ ಚಿತ್ರಕ್ಕಾಗಿ ನಟಿ ಪ್ರಿಯಾಂಕ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಮುಂಬೈ : ಹಾಲಿವುಡ್ ನಲ್ಲಿ ನಟಿಸಿದ ನಂತರ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಸಂಭಾವನೆ ಕೂಡ ...

Widgets Magazine
Widgets Magazine