ಧರ್ಮಸ್ಥಳದಲ್ಲಿ ರಾಧಿಕಾ ಪಂಡಿತ್ ಭಾವುಕರಾಗಿದ್ದು ಯಾಕೆ?

Bangalore, ಶನಿವಾರ, 13 ಮೇ 2017 (11:06 IST)

Widgets Magazine

ಮಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಫೇವರಿಟ್ ಜೋಡಿ ಯಶ್-ರಾಧಿಕಾ ಪಂಡಿತ್ ಜೋಡಿ ತಮ್ಮ ವೈವಾಹಿಕ ಜೀವನದ ಐದು ತಿಂಗಳು ಪೂರೈಸಿದ ಹಿನ್ನಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.


 
ಈ ವೇಳೆ ದಂಪತಿ ದೇವರ ದರ್ಶನ ಮಾಡಿದುದಲ್ಲದೆ, ಇಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲೂ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಧಿಕಾ ‘ಇದು ಯಶ್ ಫೇವರಿಟ್ ಜಾಗ. ಇಲ್ಲಿಗೆ ಬರುವುದೆಂದರೆ ನಮಗೆ ಪುಣ್ಯ ಭಾವ ಬರುತ್ತದೆ. ಮದುವೆಯಾದ ನಂತರ ಎರಡನೇ ಬಾರಿ ಬರುತ್ತಿದ್ದೇನೆ.
 
ನನ್ನ ಕಡ್ಡಿಪುಡಿ ಚಿತ್ರದ ಮದುವೆ ಸೀನ್ ಕೂಡಾ ಇಲ್ಲೇ ಶೂಟಿಂಗ್ ಆಗಿತ್ತು. ನಮಗಿಬ್ಬರಿಗೂ ಇದು ವಿಶೇಷವಾದ ಸ್ಥಳ’ ಎಂದರು. ಇದರ ನಡುವೆ ವಿಶಿಷ್ಟ ಸಂಗತಿಯೊಂದನ್ನು ಹೇಳಿಕೊಂಡು ಭಾವುಕರಾದರು.
 
ಇಲ್ಲಿನ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಯಾಕೆಂದರೆ ಈ ಕಾರ್ಯಕ್ರಮದಲ್ಲಿ ವರನಟ ರಾಜ್ ಕುಮಾರ್ ದಂಪತಿ ಬಿಟ್ಟರೆ ಸಿನಿಮಾ ತಾರಾ ಜೋಡಿಯೊಂದು ಭಾಗವಹಿಸುತ್ತಿರುವುದು ಯಶ್ ಮತ್ತು ರಾಧಿಕಾ ಅಂತೆ. ಈ ವಿಷಯವನ್ನು ಸ್ವತಃ ರಾಧಿಕಾ ಭಾವುಕರಾಗಿ ಹೇಳಿಕೊಂಡರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವೀಕೆಂಡ್ ವಿತ್ ರಮೇಶ್ ನಲ್ಲಿ ಗುರು ಕಾಶೀನಾಥ್ ಬಗ್ಗೆ ಉಪೇಂದ್ರ ಹೇಳಿದ ಕತೆ

ಬೆಂಗಳೂರು: ಅಭಿಮಾನಿಗಳ ಬಹುದಿನದ ಬೇಡಿಕೆಯನ್ನು ಝಿ ಕನ್ನಡ ವಾಹಿನಿ ಪೂರೈಸಿದೆ. ಇಂದು ವೀಕೆಂಡ್ ವಿತ್ ರಮೇಶ್ ...

news

ಸುದೀಪ್ ಲಂಡನ್ ಗೆ ಹೋಗಿದ್ಯಾಕೆ ಗೊತ್ತಾ?

ಬೆಂಗಳೂರು: ಕಿಚ್ಚ ಸುದೀಪ್ ಕೆಲವು ದಿನಗಳಿಂದ ಲಂಡನ್ ನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿ ಅವರೇನು ...

news

ಮಾಸ್ತಿ ಗುಡಿ ಸಿನಿಮಾ ಪೋಸ್ಟರ್ ಹರಿದು ಹಾಕಿದ ದುಷ್ಕರ್ಮಿಗಳು

ಬೆಂಗಳೂರು: ದುನಿಯಾ ವಿಜಿ ಅಭಿನಯದ ಮಾಸ್ತಿ ಗುಡಿ ಚಿತ್ರ ನಿನ್ನೆ ರಾ್ಜ್ಯಾದ್ಯಂತ ಬಿಡುಗಡೆಯಾಗಿದೆ. ಆದರೆ ...

news

ಅಮಿತಾಬ್ ಮೊಮ್ಮಗಳ ಸೆಕ್ಸಿ ಡ್ಯಾನ್ಸ್ ವೈರಲ್

ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಬಾಲಿವುಡ್ ಎಂಟ್ರಿ ದೂರವೇ ಇರಬಹುದು. ಆದರೆ, ಸೋಶಿಯಲ್ ...

Widgets Magazine