Widgets Magazine

ಚೆನೈ ನಲ್ಲಿ ಈ ಕಾರಣಕ್ಕೆ ಪ್ರತಿಭಟನೆ ನಡೆಸಿದ ರಜನೀಕಾಂತ್ ಅಭಿಮಾನಿಗಳು

ಚೆನ್ನೈ| pavithra| Last Modified ಮಂಗಳವಾರ, 12 ಜನವರಿ 2021 (13:47 IST)
ಚೆನ್ನೈ : ಅನಾರೋಗ್ಯದ ಕಾರಣದಿಂದ ರಜನೀಕಾಂತ್ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಜಿಂದೆ ಅನ್ನಾಥಾ ಚಿತ್ರತಂಡದ ಕೆಲವು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಚಿತ್ರದ ಶೂಟಿಂಗ ನಿಲ್ಲಿಸಲಾಗಿದೆ. ಈ ವೇಳೆ ಕೊರೊನಾ ಪರೀಕ್ಷೆಗೆ ಒಳಗಾದ ರಜನೀಕಾಂತ್ ಗೆ ನೆಗೆಟಿವ್ ಬಂದ ಕಾರಣ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ್ದರು. ಆದರೆ ಅವರ ದೈಹಿಕ ಸ್ಥಿತಿ ಸರಿಯಾಗಿರದ ಕಾರಣ ಅವರು ರಾಜಕೀಯದಿಂದ ದೂರ ಸರಿಯುವುದಾಗಿ ತಿಳಿಸಿ ಕ್ಷಮೆ ಕೋರಿದ್ದಾರೆ.

ಈ ಹಿನ್ನಲೆಯಲ್ಲಿ ರಜನೀಕಾಂತ್ ಅವರನ್ನು ಮತ್ತೆ ರಾಜಕೀಯಕ್ಕೆ ತರಲು  ಪಣತೊಟ್ಟ ಅವರ ಅಭಿಮಾನಿಗಳು ರಜನಿ ರಾಜಕೀಯಕ್ಕೆ ಬರಬೇಕು ಎಂದು ಘೋಷಣೆ ಕೂಗುತ್ತಾ ನಾನಾ ಕಡೆಯಿಂದ ಬಂದು ಅಭಿಮಾನಿಗಳು ಚೆನ್ನೈ ವಲ್ಲುವರ್ ಕೊಟ್ಟಂನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :