ರಜನಿಕಾಂತ್ ಅಭಿಮಾನಿಗಳಿಗೆ ಪೊಲೀಸರಿಂದಲೇ ಚಿತ್ರಮಂದಿರದಿಂದ ಹೊರ ಹೋಗುವಂತೆ ಮನವಿ

ಬೆಂಗಳೂರು, ಗುರುವಾರ, 7 ಜೂನ್ 2018 (10:51 IST)

ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲಾ ಚಿತ್ರ ವ್ಯಾಪಕ ವಿರೋಧದ ನಡುವೆಯೂ ಇಂದು ಕರ್ನಾಟಕದಲ್ಲಿ ತೆರೆ ಕಾಣಬೇಕಿತ್ತು. ಆದರೆ ಹಲವೆಡೆ ಕನ್ನಡ ಪರ ಸಂಘಟನೆಗಳ ಹೋರಾಟದಿಂದಾಗಿ ಪ್ರದರ್ಶನ ಸ್ಥಗಿತಗೊಂಡಿದೆ.
 
ಬೆಂಗಳೂರಿನ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಇಂದು ಪ್ರದರ್ಶನವಿಲ್ಲ. ಮಂತ್ರಿ ಮಾಲ್ ಸಿನಿಮಾ ಮಂದಿರದಲ್ಲಿ ಚಿತ್ರ ವೀಕ್ಷಣೆಗೆ ಬಂದಿದ್ದ ರಜನಿ ಅಭಿಮಾನಿಗಳಿಗೆ ಸ್ವತಃ ಪೊಲೀಸರೇ ಸ್ಥಳ ಬಿಟ್ಟು ತೆರಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
 
ಆದರೆ ಮಂಗಳೂರಿನಲ್ಲಿ ಮಧ್ಯಾಹ್ನ 12.45 ಕ್ಕೆ ಕಾಲಾ ಮೊದಲ ಪ್ರದರ್ಶನ ಕಾಣಲಿದ್ದು, ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಕರ್ನಾಟಕದ ಉತ್ತರ ಭಾಗದಲ್ಲೂ ಹಲವೆಡೆ ಚಿತ್ರಪ್ರದರ್ಶನ ರದ್ದುಗೊಳಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಜನಿ ಕಾಲಾ ಬಿಡುಗಡೆ: ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ?

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ...

news

ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿದ ಹೈಕೋರ್ಟ್

ಚೆನ್ನೈ : ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಬಾರೀ ವಿರೋಧ ವ್ಯಕ್ತವಾಗಿದ್ದರೂ ಕೂಡ ಇದೀಗ ಹೈಕೋರ್ಟ್ ...

news

ಕನ್ನಡಿಗರಿಗೆ ಸವಾಲೆಸೆದಿದ್ದಕ್ಕೆ ಕ್ಷಮೆ ಕೇಳಿದ ನಟ ಗಿರೀಶ್

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ...

news

ನಟ ಧರ್ಮೆಂದ್ರ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?

ಮುಂಬೈ : ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಅವರು ತಮ್ಮ ನಟನಾ ಜೀವನಕ್ಕೆ ಕೊಂಚ ವಿರಾಮ ಹೇಳಿ ಇದೀಗ ಮಹತ್ವ ...

Widgets Magazine