ರಾಜಕೀಯಕ್ಕೆ ಬರುವ ಬಗ್ಗೆ ಅಭಿಮಾನಿಗಳ ಎದುರೇ ಘೊಷಿಸಿದ ರಜಿನಿಕಾಂತ್

ಚೆನ್ನೈ, ಶುಕ್ರವಾರ, 19 ಮೇ 2017 (10:48 IST)

Widgets Magazine

ಅಂತೂ ಇಂತೂ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯಕ್ಕೆ ಬರುವುದು ಬಹುತೇಕ ಖಚಿತಗೊಂಡಿದೆ. ಚೆನ್ನೈನಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ತಮಿಳುನಾಡು ರಾಜಕೀಯಕ್ಕೆ ಬದಲಾವಣೆ ಬೇಕಿದೆ. ಯುದ್ಧಕ್ಕೆ ಸಿದ್ಧರಾಗಿ ಎನ್ನುವ ಮೂಲಕ ಶೀಘ್ರ ರಾಜಕೀಯಕ್ಕೆ ಬರುವ ಸೂಚನೆ ಕೊಟ್ಟಿದ್ದಾರೆ.
 


ಸದ್ಯದ ರಾಜಕೀಯದಲ್ಲಿ ಜನರ ಬಗ್ಗೆ ಯೋಚಿಸುವ ಪರಿಸ್ಥಿತಿ ಇಲ್ಲ. ಜನರಿಗಾಗಿ ಏನನ್ನೂ ಮಾಡುತ್ತಿಲ್ಲ.  ಇದು ಬದಲಾಗಬೇಕಿದೆ. ನನಗೀಗ ಕೆಲ ಜವಾಬ್ದಾರಿ ಮತ್ತು ಕೆಲಸಗಳಿವೆ. ನಿಜವಾದ ಯುದ್ಧ ಎದುರಾದಾಗ ಯುದ್ಧ ಎದುರಿಸೋಣ ಎಂದಿದ್ದಾರೆ.
 
ಕೋಡಂಬಾಂಕಂನಲ್ಲಿ ನಡೆದ ಅಭಿಮಾನಿಗಳ ಮೀಟ್ ಅಂಡ್ ಗ್ರೀಟ್ ಕಾರ್ಕ್ರಮದ ಕೊನೆಯ ದಿನ ರಜಿನಿಕಾಂತ್ ಈ ಘೋಷಣೆ ಮಾಡಿದ್ದಾರೆ.  ನಾನೊಬ್ಬ ತಮಿಳಿಗ ಎನ್ನುವುದಕ್ಕೆ ಹೆಮ್ಮೆ ಇದೆ. ನನ್ನನ್ನ ತಮಿಳಿಗನಾಗಿ ಮಾಡಿದ್ದು ನನ್ನ ಅಭಿಮಾನಿಗಳು ಎನ್ನುವ ಮೂಲಕ ರಜಿನಿ ವಿಷಯ ಬಂದಾಗ ತಮಿಳು ಮೂಲದ ಪ್ರಶ್ನೆ ಎತ್ತುತ್ತಿದ್ದ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
 
ರಜಿನಿಕಾಂತ್ ರಾಜಕೀಯಕ್ಕೆ ಬಂದರೆ ಅದು ದುರಂತ, ಅವರು ಹೊರಗಿನವರು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ನೀಡಿದ್ದರು. 24 ಗಂಟೆಯೊಳಗೆ ಈ ಮಾತಿಗೆ ರಜಿನಿ ಉತ್ತರ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಚಿತ್ರ ನಟ ದೊಡ್ಡಣ್ಣಗೆ ಅನಾರೋಗ್ಯ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ದೊಡ್ಡಣ್ಣ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ...

news

ವಾರಸ್ದಾರ ಧಾರವಾಹಿಯಿಂದ ಯಜ್ಞಾ ಶೆಟ್ಟಿ ಔಟ್!

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ ...

news

ಸಚಿನ್ ತೆಂಡುಲ್ಕರ್ ಸಿನಿಮಾಗೆ ತೆರಿಗೆ ವಿನಾಯ್ತಿ

ಮುಂಬೈ: ಸಚಿನ್ ತೆಂಡುಲ್ಕರ್ ಅದೆಷ್ಟೋ ಕ್ರಿಕೆಟಿಗನಾಗ ಬಯಸುವ ಯುವಕರಿಗೆ ಆದರ್ಶ. ಅಂತಹ ಆದರ್ಶಮೂರ್ತಿಯ ಜೀವನ ...

news

ರಜಿನಿಕಾಂತ್ ರಾಜಕೀಯ ಪ್ರವೇಶದ ಡೇಟ್ ಫಿಕ್ಸ್..?

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ ಕಾಲ ಕೂಡಿಬಂದಂತೆ ಕಾಣುತ್ತಿದೆ. ...

Widgets Magazine