ರಾಜ್ ಕುಮಾರ್, ಶಿವಣ್ಣ, ಪುನೀತ್ ಲಕ್ಕಿ@42..!

ಬೆಂಗಳೂರು, ಗುರುವಾರ, 6 ಏಪ್ರಿಲ್ 2017 (10:54 IST)

Widgets Magazine

ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಅಭೂತಪೂರ್ವ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರದಲ್ಲಿ ಪುನೀತ್ ಪಾತ್ರ ಮತ್ತು ಅಭಿನಯ ಅಣ್ಣಾವ್ರ ಕಸ್ತೂರಿ ನಿವಾಸವನ್ನ ನೆನಪಿಸುತ್ತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ರಾಜಕುಮಾರ ಸಿನಿಮಾ ನೋಡಿ ಸಹ ಭಾವುಕರಾಗಿ ಕಣ್ಣೀರು ಹಾಕಿದ್ದರು.


ಪುನೀತ್ ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ರಾಜ್ ಕುಮಾರ್, ಶಿವಣ್ನ ಮತ್ತು ಪುನೀತ್ ನಡುವೆ ಕೆಲ ಸಾಮ್ಯತೆಗಳು ಅಭಿಮಾನಿಗಳ ಮನದಲ್ಲಿ ಮೂಡಿವೆ. 42ನೇ ವಯಸ್ಸಿಗೆ ಕಾಲಿಟ್ಟಾಗ ಈ ಮೂವರೂ ಕನ್ಡಡದ ಕಣ್ಮಣಿಗಳು ಜನಮೆಚ್ಚುವ ತಮ್ಮ ವೃತ್ತಿ ಜೀವನದ ಮೈಲಿಗಲ್ಲಾಗುವಂತಹ ಚಿತ್ರಗಳನ್ನ ಕೊಟ್ಟಿದ್ದಾರೆ.

ಕಸ್ತೂರಿ ನಿವಾಸ ರಿಲೀಸ್ ಆದಾಗ ಅಣ್ಣಾವ್ರಿಗೆ 42 ವರ್ಷ: 1971ರಲ್ಲಿ ಕಸ್ತೂರಿ ನಿವಾಸ ಚಿತ್ರ ರಿಲೀಸ್ ಆದಾಗ ಅಣ್ಣಾವ್ರಿಗೆ 42 ವರ್ಷ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಮಾಡಿತು. ಅಣ್ಣಾವ್ರ ಅಭಿಮಾನಿಗಳ್ಯಾರೂ ಕಸ್ತೂರಿ ನಿವಾಸವನ್ನ ಎಂದೆಂದಿಗೂ ಮರೆಯುವುದಿಲ್ಲ. ಬಾಕ್ಸ್ ಆಫೀಸ್`ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಸಮಾಜಕ್ಕೆ ನೆರವಿನ ಸಂದೇಶ ಸಾರಿದ್ದ  ಈ ಚಿತ್ರ ಜನರಿಗೆ ಹತ್ತಿರವಾಗಿತ್ತು.

ಜೋಗಿ ರಿಲೀಸ್ ಆದಾಗ ಶಿವಣ್ಣನಿಗೆ 42 ವರ್ಷ: 2005ರಲ್ಲಿ ಪ್ರೇಮ್ ನಿರ್ದೇಶನದ ಜೋಗಿ ರಿಲೀಸ್ ಆದಾಗ ಶಿವಣ್ಣನಿಗೆ 42 ವರ್ಷ. ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಚಿತ್ರ ಜೋಗಿ. ಚಿತ್ರದಲ್ಲಿನ ಅಮ್ಮ-ಮಗನ ಸೆಂಟಿಮೆಂಟ್, ಹಾಡುಗಳು, ಶಿವಣ್ಣನ ಅಭಿನಯ ಅಭಿಮಾನಿಗಳನ್ನ ಹುಚ್ಚೆಬ್ಬಿಸಿತ್ತು. ಚಿತ್ರದ ಕಥೆ, ಸಂಭಾಷಣೆ ಎಲ್ಲವೂ ಪ್ರೇಕ್ಷಕರನ್ನ ರಂಜಿಸಿತ್ತು. ಕೋಟಿ ಕೋಟಿ ಬಾಚಿದ ಈ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಿತು. 

ರಾಜಕುಮಾರ ಪುನೀತ್`ಗೆ 42 ವರ್ಷ: ಈಗ 2017ರಲ್ಲಿ ರಾಜಕುಮಾರ ರಿಲೀಸ್ ಆಗಿದ್ದು, ಪುನೀತ್ ರಾಜ್ ಕುಮಾರ್`ಗೆ 42 ವರ್ಷ. ಈಗಾಗಲೇ ಸಿನಿಮಾ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳೂ ಅಪ್ಪು ಅಭಿನಯಕ್ಕೆ ಫಿದಾ ಆಗಿದ್ದಾರೆ. ಆನ್`ಲೈನ್ ಸಮೀಕ್ಷೆ, ವಿಮರ್ಶೆಗಳಲ್ಲೂ ರಾಜಕುಮಾರನಿಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಈ ಚಿತ್ರ ಪುನೀತ್ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವತ್ತ ಮುನ್ನುಗ್ಗುತ್ತಿದೆ. ವೃದ್ಧ ತಂದೆ-ತಾಯಿಗಳನ್ನ ವೃದ್ಧಾಶ್ರಮಕ್ಕೆ ನೂಕುತ್ತಿರುವ ಅದೆಷ್ಟೋ ಜನ ಈ ಚಿತ್ರ ನೋಡಿ ಬುದ್ಧಿ ಕಲಿತಿದ್ದಾರೆ. ಸಾಮಾಜಿಕ ಸಂದೇಶ ಸಾರುವ ಈ ಮೂರೂ ಚಿತ್ರಗಳು ರಿಲೀಸ್ ಆದಾಗ ರಾಜ್ ಕುಮಾರ್, ಶಿವಣ್ಣ ಮತ್ತು ಪುನೀತ್`ಗೆ 42 ವರ್ಷ ವಯಸ್ಸು.

ಈ ಅಂಕಿ ಅಂಶ ಗಮನಿಸಿದರೆ ಅಣ್ಣಾವ್ರು, ಶಿವಣ್ಣ, ಪುನೀತ್ ಮೂವರಿಗೂ 42ನೇ ವಯಸ್ಸು ಲಕ್ಕಿ ಎನ್ನಬಹುದು. Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪುನೀತ್ ರಾಜ್ ಕುಮಾರ್ ಶಿವಣ್ಣ Rajkumar Shivanna Puneeth

Widgets Magazine

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಪ್ರಥಮ್ ಪ್ರಕರಣಕ್ಕೆ ಟ್ವಿಸ್ಟ್!

ಬೆಂಗಳೂರು: ಬಿಗ್ ಬಾಸ್ ವಿನ್ನರ್ ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ...

news

ನಾನು ಸಲ್ಮಾನ್ ಖಾನ್ ರಂತೆ ನಿರಪರಾಧಿ ಎಂದು ರಾಖಿ ಸಾವಂತ್

ಲುಧಿಯಾನ: ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ...

news

ಫೇಸ್ಬುಕ್ ಲೈವ್`ನಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಥಮ್

ಬಿಗ್ ಬಾಸ್ ಸೀಸನ್-4 ವಿನ್ನರ್ ಒಳ್ಳೆ ಹುಡುಗ ಪ್ರಥಮ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ...

news

ನಟಿ ರಾಖಿ ಸಾವಂತ್ ಬಂಧನ

ಮಹರ್ಷಿ ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟಿ ರಾಖಿ ಸಾವಂತ್ ಅವರನ್ನ ಪಂಜಾಬ್ ಪೊಲೀಸರು ...

Widgets Magazine