ಶಿವಣ್ಣನ ಹುಟ್ಟುಹಬ್ಬಕ್ಕೆ ಡಾ.ರಾಜ್‌ಕುಮಾರ್ ಅಭಿಮಾನಿಗಳಿಂದ ‘ದೊಡ್ಮನೆ ಬಾಡೂಟ’

ಬೆಂಗಳೂರು, ಗುರುವಾರ, 12 ಜುಲೈ 2018 (12:41 IST)

ಬೆಂಗಳೂರು : ಇಂದು (ಜುಲೈ 12) ತಮ್ಮ 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಡಾ.ರಾಜ್‌ಕುಮಾರ್ ಅವರ ಅಭಿಮಾನಿಗಳು ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ.


ಅದೇನೆಂದರೆ ಡಾ.ರಾಜ್‌ಕುಮಾರ್ ಅಭಿಮಾನಿ ಶ್ರೀನಿವಾಸ್, ಗಿರೀಶ್ ಹಾಗೂ ಶಿವರಾಮ್ ಸೇರಿ ದೊಡ್ಮನೆ ಬಾಡೂಟ ಅಂತ ಹೊಸ ಹೋಟೆಲ್‌ವೊಂದನ್ನ ಆರಂಭಿಸುತ್ತಿದ್ದಾರೆ. ಇದು ನಟ ಯಶ್ ಅವರ ಮನೆಯ ಹತ್ತಿರದಲ್ಲಿದ್ದು, ಈ ಹೊಟೇಲ್‌ನ ಸೆಂಚುರಿ ಸ್ಟಾರ್ ಡಾ.ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ.


ದೊಡ್ಮನೆ ಜೊತೆ ಒಡನಾಟ ಹೊಂದಿರುವ ಶ್ರೀನಿವಾಸ್ ಈ ಹೊಟೇಲ್‌ನ ಮಾಲಿಕರಾಗಿದ್ದು, ಈ ಹೊಟೇಲ್‌ ನ್ನು  ಶಿವರಾಜ್ ಕುಮಾರ್ ಅವರೇ ಉದ್ಘಾಟನೆ ಮಾಡ್ತಾಇದ್ದರಂತೆ. ಈ ಹೊಟೇಲ್‌ನಲ್ಲಿ ಪಕ್ಕಾ ನಾಟಿ ಶೈಲಿಯ ಬಾಡೂಟವನ್ನ ಸೌದೇ ಒಲೆಯಲ್ಲಿ ತಯಾರಿಸೋದು ವಿಶೇಷವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು : ಇಂದು (ಜುಲೈ 12) ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ತಮ್ಮ 56 ನೇ ...

news

ರಾಜಕೀಯದತ್ತ ನಟ ರಿತೇಶ್ ದೇಶ್ ಮುಖ್ ಚಿತ್ತ

ಮುಂಬೈ : ಬಾಲಿವುಡ್ ನಟ, ನಿರ್ಮಾಪಕ ರಿತೇಶ್ ದೇಶ್ ಮುಖ್ ಅವರು ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ...

news

ರಜನೀಕಾಂತ್ ಅಭಿನಯದ ಕಾಲಾ ಚಿತ್ರದ ಬಗ್ಗೆ ನಿರ್ಮಾಪಕ ಧನುಷ್ ಹೀಗ್ಯಾಕೆ ಹೇಳಿದ್ರು

ಚೆನ್ನೈ : ತಮಿಳು ನಟ, ನಿರ್ಮಾಪಕ ಧನುಷ್ ಅವರು ತಮ್ಮ ನಿರ್ಮಾಣದಲ್ಲಿ ಮೂಡಿಬಂದ 'ಕಾಲಾ ಸಿನಿಮಾ ಕಲೆಕ್ಷನ್ ...

news

ಸಂಜು ಸಿನಿಮಾಕ್ಕೆ ಅನುಮತಿ ನೀಡಿದ್ದಕ್ಕೆ ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಮುಂಬೈ : ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿರುವ ‘ಸಂಜು’ ಚಿತ್ರ ಜೂನ್ 29ರಂದು ಬಿಡುಗಡೆಗೊಂಡು ಬಾಕ್ಸ್ ...

Widgets Magazine