Widgets Magazine
Widgets Magazine

ಮುಂದಿನ ವರ್ಷದಿಂದ ಪಠ್ಯ ವಿಷಯದಲ್ಲಿ ಡಾ. ರಾಜ್ ಕುಮಾರ್ ಜೀವನ ಚರಿತ್ರೆ: ಜಿ. ಪರಮೇಶ್ವರ್

ಬೆಂಗಳೂರು, ಸೋಮವಾರ, 24 ಏಪ್ರಿಲ್ 2017 (10:29 IST)

Widgets Magazine

ಇವತ್ತು ವರನಟ ಡಾ. ರಾಜ್ ಕುಮಾರ್ ಅವರ 89ನೇ ಜನ್ಮದಿನ. ಡಾ. ರಾಜ್ ಕುಮಾರ್ ಸಮಾಧಿ ಬಳಿಯಲ್ಲಿ ಅಭಿಮಾನಿಗಳ ದಂಡೇ ನೆರೆದಿದೆ. ಅನ್ನದಾ, ನೇತ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ನಡೆಸಲಾಗುತ್ತಿದೆ. ಈ ಮಧ್ಯೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಹ ಯಶವಂತಪುರದ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು.


ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಡಾ.ರಾಜ್ ಕುಮಾರ್ ಅಪ್ರತಿಮ ಕಲಾವಿದರು. ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟರಲ್ಲಿ ಡಾ. ರಾಜ್ ಕುಮಾರ್ ಸಹ ಒಬ್ಬರು. ರಂಗಭೂಮಿ ಮತ್ತು ಚಿತ್ರರಂಗಕ್ಕೆ ರಾಜ್ ಕುಮಾರ್ ಕೊಡುಗೆ ಅಪಾರ. ಯುವ ಪೀಳಿಗೆಗೆ ಡಾ. ರಾಜ್ ಕುಮಾರ್ ಮಾದರಿ. ಹೀಗಾಗಿ, ಮುಂದಿನ ವರ್ಷದಿಂದ ಡಾ. ರಾಜ್ ಕುಮಾರ್ ಜೀವನ ಚರಿತ್ರೆಯನ್ನ ಪಠ್ಯ ವಿಷಯದಲ್ಲಿ ಅಳವಡಿಸಲಾಗುವುದೆಂದು ಪರಮೇಶ್ವರ್ ಹೇಳಿದ್ದಾರೆ. ಅಣ್ಣಾವ್ರ ಕುಟುಂಬ ಮತ್ತು ಅವರ ಮಕ್ಕಳ ಜೊತೆ ಸರ್ಕಾರ ಸದಾ ಇರುತ್ತದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. 

ಇದೇವೇಳೆ, ಅಣ್ಣಾವ್ರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಅಣ್ಣಾವ್ರ ಸಮಾಧಿಗೆ ನಮನ ಸಲ್ಲಿಸಿದರು. ಶಿವರಾಜ್ ಕುಮಾರ್ ಅಭಿನಯದ ಬಂಗಾರ ಸನ್ ಅಫ್ ಬಂಗಾರದ ಮನುಷ್ಯ ಚಿತ್ರದ ಟೀಸರ್ ಕೂಡ ಅಣ್ಣಾವ್ರ ಸಮಾಧಿ ಬಳಿಯೇ ಬಿಡುಗಡೆಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಜ್ ಕುಮಾರ್ ಶಿವಣ್ಣ ಪರಮೇಶ್ವರ್ Rajkumar Shivarajkumar Parameshwar

Widgets Magazine

ಸ್ಯಾಂಡಲ್ ವುಡ್

news

ಡಾ. ರಾಜ್ ಹುಟ್ಟುಹಬ್ಬಕ್ಕೆ ರಾಜಕುಮಾರ ಚಿತ್ರತಂಡದ ವಿಶಿಷ್ಟ ಕೊಡುಗೆ

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ತಂಡ, ವರ ನಟ ಡಾ. ರಾಜಕುಮಾರ್ ಗೆ ...

news

ಮತ್ತೆ ವಿವಾದಾತ್ಮಕ ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ

ಮುಂಬೈ: ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಗಾಗ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿ ...

news

ಗೂಗಲ್ ಮುಖಪುಟದಲ್ಲೂ ಡಾ. ರಾಜ್!

ಬೆಂಗಳೂರು: ಇಂದು ಕನ್ನಡಿಗರಿಗೆ ಹಬ್ಬವೆಂದೇ ಹೇಳಬೇಕು. ಕನ್ನಡದ ವರನಟ ಡಾ. ರಾಜ್ ಕುಮಾರ್ ಜನುಮ ದಿನ ಇಂದು. ...

news

ಬಾಹುಬಲಿ-2 ಚಿತ್ರದ ಸಾಹೋರೆ ಅದ್ದೂರಿ ವಿಡಿಯೋ ಸಾಂಗ್ ರಿಲೀಸ್

ಬಹು ನಿರೀಕ್ಷಿತ ಬಾಹುಬಲಿ-2 ಚಿತ್ರ ರಿಲೀಸ್`ಗೆ 4 ದಿನ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ, ಬಾಹುಬಲಿ ...

Widgets Magazine Widgets Magazine Widgets Magazine