ನಮ್ಮವರೇ ಆದ ದರ್ಶನ್, ಸುದೀಪ್, ಯಶ್ ಗಿಂತ ರಮ್ಯಾಗೆ ಪಕ್ಕದ ಧನುಷ್ ಹೆಚ್ಚಾದರೇ?!

ಬೆಂಗಳೂರು, ಸೋಮವಾರ, 21 ಜನವರಿ 2019 (09:23 IST)

ಬೆಂಗಳೂರು: ಇತ್ತೀಚೆಗೆ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಏನು ಮಾಡಿದರೂ ಅಭಿಮಾನಿಗಳಿಂದ ಟ್ರೋಲ್ ಗೊಳಗಾಗುತ್ತಿದ್ದಾರೆ. ಅಂಬರೀಶ್ ನಿಧನರಾದಾಗ ಕಾಲು ನೋವಿನ ನೆಪ ಹೇಳಿ ತಪ್ಪಿಸಿಕೊಂಡಿದ್ದಕ್ಕೆ ಟೀಕೆಗೊಳಗಾಗಿದ್ದ ರಮ್ಯಾ ಇದೀಗ ಮತ್ತೆ ಟ್ರೋಲ್ ಗೊಳಗಾಗಿದ್ದಾರೆ.


 
ಈಗ ತಮಿಳುನಟ ಧನುಷ್ ಗೆ ಅವರ ‘ರೌಡಿ ಬೇಬಿ’ ಹಾಡಿಗೆ 100 ಮಿಲಿಯನ್ ವೀಕ್ಷಣೆ ಪಡೆದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇ ರಮ್ಯಾಗೆ ಮುಳುವಾಗಿದೆ. ಟ್ವಿಟರ್ ನಲ್ಲಿ ಈ ರೀತಿಯಾಗಿ ಪಕ್ಕದ ರಾಜ್ಯದ ಸಿನಿಮಾ ನಟರಿಗೆ ಅಭಿನಂದಿಸಲು ರಮ್ಯಾಗೆ ಪುರುಸೊತ್ತಿದೆ. ಆದರೆ ನಮ್ಮದೇ ಸಿನಿಮಾ ಕೆಜಿಎಫ್ ಬಗ್ಗೆ ತುಟಿಪಿಟಕ್ ಅಂದಿರಲಿಲ್ಲ. ದರ್ಶನ್ ಯಜಮಾನ, ಸುದೀಪ್ ಪೈಲ್ವಾನ್ ಸಿನಿಮಾ ಬಗ್ಗೆ ಕಾಮೆಂಟ್ ಮಾಡಬೇಕು ಅನಿಸಲಿಲ್ವಾ? ಎಂದು ಟ್ವಿಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಅಷ್ಟೇ ಅಲ್ಲದೆ, ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದೊಳಗಿನ ವಿದ್ಯಮಾನಗಳ ಬಗ್ಗೆಯೂ ಮಾತಾಡಿ. ನಿಮ್ಮದೇ ಪಕ್ಷದವರು ರೆಸಾರ್ಟ್ ನಲ್ಲಿ ಗಲಾಟೆ ಮಾಡುತ್ತಿದ್ದಾರಲ್ಲಾ ಅದರ ಬಗ್ಗೆಯೂ ಒಂದೆರಡು ಕಾಮೆಂಟ್ ಬರೆಯಿರಿ ಎಂದು ಟ್ವಿಟರಿಗರು ಲೇವಡಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಡಾಕ್ಟರೇಟು ಪಡೆದ ಪತ್ನಿಯನ್ನು ಜಗ್ಗೇಶ್ ಕರೆದುಕೊಂಡು ಹೋಗಿದ್ದಾದರೂ ಎಲ್ಲಿಗೆ?!

ಬೆಂಗಳೂರು: ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಗೆ ಸಕ್ಕರೆ ಖಾಯಿಲೆ ನಿಯಂತ್ರಣ ಕುರಿತಾದ ...

news

ನಿಖಿಲ್ ಕುಮಾರಸ್ವಾಮಿ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಬೆಂಗಳೂರು: ಸೀತಾರಾಮ ಕಲ್ಯಾಣ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿರುವ ಸಂದರ್ಭದಲ್ಲಿ ಕಿಚ್ಚ ಸುದೀಪ್ ನಿಖಿಲ್ ...

news

ನನ್ನ ಪಡೀಬೇಕೆಂದೇ ಆ ನಿರ್ದೇಶಕ ಹೊಂಚು ಹಾಕಿದ್ದ ಎಂದ ಖ್ಯಾತ ನಟಿ

ಮುಂಬೈ: ಸಿನಿಮಾ ಲೋಕದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಮತ್ತು ತನಗಾದ ಅನುಭವದ ಬಗ್ಗೆ ಬಾಲಿವುಡ್ ನಟಿ ...

news

10 ಇಯರ್ಸ್ ಚಾಲೆಂಜ್ ಸ್ವೀಕರಿಸಿದ ಮಲೈಕಾ ಅರೋರಾಗೆ ಟ್ವಿಟರಿಗರು ಈ ಪರಿ ಬೆಂಡೆತ್ತಿದ್ದು ಯಾಕೆ ಗೊತ್ತಾ?!

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ 10 ಇಯರ್ಸ್ ಚಾಲೆಂಜ್ ನಲ್ಲಿ ಇದೀಗ ಸೆಲೆಬ್ರಿಟಿಗಳು ...

Widgets Magazine