ಬಾಹುಬಲಿ ನಟ ಪ್ರಭಾಸ್ ಗೆ ಹೆಣ್ಣು ಕೊಡಿ ಎಂದು ಜಾಹೀರಾತು ನೀಡಿದ ರಾಣಾ!

Hyderabad, ಶನಿವಾರ, 20 ಮೇ 2017 (09:36 IST)

Widgets Magazine

ಹೈದರಾಬಾದ್: ಆನ್ ಸ್ಕ್ರೀನ್ ನಲ್ಲಿ ಎದುರು ಬದುರಾಗಿ ಜಿದ್ದಿಗೆ ಬಿದ್ದವರಂತೆ ನಟಿಸಿ ಪ್ರೇಕ್ಷಕರನ್ನು ಸೂರೆ ಮಾಡಿದ್ದ ಬಾಹುಬಲಿ ನಟರಾದ ಪ್ರಭಾಸ್ ಮತ್ತು ರಾಣಾ ದಗ್ಗುಬತಿ ಆಫ್ ಸ್ಕ್ರೀನ್ ನಲ್ಲಿ ಬೆಸ್ಟ್ ಫ್ರೆಂಡ್ಸ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.


 
ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ ರಾಣಾ ನಿಜ ಜೀವನದಲ್ಲಿ ಪ್ರಭಾಸ್ ಗೊಂದು ಹೆಣ್ಣು ಕೊಡಿ ಎಂದು ಟ್ವಿಟರ್ ನಲ್ಲಿ ತಮಾಷೆಯ ಜಾಹೀರಾತು ನೀಡಿದ್ದಾರೆ. ಇದನ್ನು ಓದಿ ಅಭಿಮಾನಿಗಳಿಗೆಲ್ಲಾ ನಗುತ್ತಿದ್ದಾರೆ.
 
ಬಾಹುಬಲಿಗೆ ವಧು ಬೇಕಾಗಿದೆ ಎಂದು ಒಕ್ಕಣೆ ಬರೆದು ವರ ಬಾಹುಬಲಿಯ ಸಾಮರ್ಥ್ಯ ಮತ್ತು ವಧು ಹೇಗಿರಬೇಕೆಂದು ತಮಾಷೆ ರೂಪದಲ್ಲಿ ಬರೆದುಕೊಂಡಿದ್ದಾರೆ. 36 ವರ್ಷದ ಗೌರವಾನ್ವಿತ ಕುಟುಂಬದ ಸೇನಾನಾಯಕ.  ಮನೆ ಕೆಲಸದಲ್ಲಿ ಎಲ್ಲಾ ರೀತಿಯ ಸಹಾಯ ಮಾಡುತ್ತಾನೆ. ಮದುವೆಯ ಸಂಬಂಧ ಕಂಡುಬಂದರೆ ಬೆಟ್ಟವನ್ನೂ ಹತ್ತುವ ಸಮರ್ಥ. ಮೇಕ್ ಅಪ್ ಮಾಡುವುದು ಚೆನ್ನಾಗಿ ಗೊತ್ತು. ವಧುವಿಗೂ ಮೇಕ್ ಅಪ್ ಮಾಡಬಲ್ಲ ಎಂದು ಗೆಳೆಯನ ಗುಣಗಾನ ಮಾಡಿದ್ದಾರೆ.
 
ಇನ್ನು ವಧುವಿಗೆ ವರ ಗುಡ್ಡ, ಬೆಟ್ಟ ಹತ್ತಿ ಓಡಿ ಬರುವಷ್ಟು ಸೌಂದರ್ಯವಿರಬೇಕು. ಶತ್ರುಗಳನ್ನು ಹೊಡೆದೋಡಿಸುವ ಸೇನಾ ಸಾಮರ್ಥ್ಯವಿರಬೇಕು. ಸದ್ಯ ಖೈದಿಯಾಗಿರುವ ಅತ್ತೆಯನ್ನು ಗೌರವಿಸಬೇಕು. ಮನೆಗೆಲಸದ ಜತೆಗೆ ಮಿಲಿಟರಿ ತರಬೇತಿ ಹೊಂದಿರಬೇಕು ಎಂದು ಬೇಡಿಕೆಗಳ ಪಟ್ಟಿ ಮಾಡಿದ್ದಾರೆ.
 
ಮದುವೆ, ಲವ್ ಲೈಫ್ ನ ಬಗ್ಗೆ ಗುಟ್ಟು ಬಿಟ್ಟುಕೊಡದ ಸ್ನೇಹಿತನಿಗೆ ರಾಣಾ ಈ ರೀತಿ ಕಾಲೆಳೆದಿದ್ದಾರೆ. ಪ್ರಭಾಸ್ ಗೆ ಜೋಡಿಯಾಗುವಂತಹ ಅಂಥಾ ಹುಡುಗಿ ಅದೆಲ್ಲಿದ್ದಾಳೋ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟಿ ಅಮೂಲ್ಯ ಮದುವೆ ಮಾಡಿಸಿ ವಿವಾದಕ್ಕೆ ಸಿಲುಕಿದ ನಟ ಗಣೇಶ್ ದಂಪತಿ

ಬೆಂಗಳೂರು: ಇತ್ತೀಚೆಗಷ್ಟೇ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ಪುತ್ರನ ಜತೆಗೆ ನಟಿ ಅಮೂಲ್ಯ ...

news

ಕನ್ನಡಿಗರನ್ನು ಕೆಣಕಿದ ರಾಮ್ ಗೋಪಾಲ್ ವರ್ಮಾ

ಮುಂಬೈ: ಸದಾ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿಯಾಗುವ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ಕನ್ನಡಿಗರ ...

news

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಅನುಷ್ಕಾ

ಉಡುಪಿ: ಬಾಹುಬಲಿ ಚಿತ್ರದ ಯಶಸ್ವದ ಖುಷಿಯಲ್ಲಿರುವ ಮಾದಕ ನಟಿ ಅನುಷ್ಕಾ ಇಂದು ಕೊಲ್ಲೂರು ಮೂಕಾಂಬಿಕೆ ದೇವಿಯ ...

news

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

ಅನಾರೋಗ್ಯದಿಂದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ...

Widgets Magazine Widgets Magazine