ನವ ತಂತ್ರಜ್ಞಾನಗಳಿಂದ ಮನ ಸೆಳೆಯಲಿರೋ ರಾಂಧವ!

ಬೆಂಗಳೂರು, ಮಂಗಳವಾರ, 13 ಆಗಸ್ಟ್ 2019 (16:05 IST)

ಸದ್ಯದ ವಾತಾವರಣದಲ್ಲಿ ಸಿನಿಮಾವೊಂದು ಜನರನ್ನು ಸೆಳೆಯಬೇಕೆಂದರೆ ತಾಂತ್ರಿಕವಾಗಿಯೂ ಹೊಸತನ ಅಳವಡಿಸಿಕೊಳ್ಳಲೇ ಬೇಕೆಂಬಂಥಾ ವಾತಾವರಣವಿದೆ. ಅದರಲ್ಲಿಯೂ ಪರಭಾಷಾ ಚಿತ್ರಗಳಿಗೇ ಸೆಡ್ಡು ಹೊಡೆದು ಬೇರೆ ಭಾಷೆಗಳಲ್ಲಿಯೂ ಮಿರುಗಬೇಕೆಂದರೆ ತಾಂತ್ರಿವಾಗಿ ಹೊಸತನ ಬೇಕೇ ಬೇಕು. ಇಂಥಾ ಅಪ್ಡೇಟೆಡ್ ಮನಸ್ಥಿತಿಯೊಂದಿಗೇ ನಿರ್ಮಾಣಗೊಂಡಿರೋ ಅದ್ದೂರಿ ಚಿತ್ರ ರಾಂಧವ. ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ಬಿಡುಗಡೆಗೊಳ್ಳಲಿರೋ ಈ ಚಿತ್ರ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ.
randhava
ನಿರ್ದೇಶನ ಮಾಡಿರತೋ ಈ ಚಿತ್ರದಲ್ಲಿ ಕಾಣಿಸಿಕೊಂಡಿರೋ ವಿವಿಧ ಗೆಟಪ್ಪುಗಳು ಈಗಾಗಲೇ ಜನಪ್ರಿಯಗೊಂಡಿವೆ. ಇದು ಪೌರಾಣಿಕ ಹಾಗೂ ಆಧುನಿಕ ಕಥಾಹಂದರ ಸಮಾಗಮಿಸಿರೋ ಚಿತ್ರವೆಂಬುದೂ ಸ್ಪಷ್ಟವಾಗಿವೆ. ಇದರಲ್ಲಿ ಶೇಖಡಾ ನಲವತ್ತರಷ್ಟು ಭಾಗ ಗ್ರಾಫಿಕ್ಸ್ ಇದೆಯಂತೆ. ಕನ್ನಡ ಚಿತ್ರಗಳ ಮಟ್ಟಿಗೆ ಇದೊಂದು ದಾಖಲೆಯೇ. ಅಂದಹಾಗೆ ಈ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಪರಭಾಷಾ ಚಿತ್ರರಂಗದಲ್ಲಿ ಗೆಲುವಿನ ಛಾಪು ಮೂಡಿಸಿರೋ ತಂಡವೊಂದು ನಿರ್ವಹಿಸಿದೆ.
 
ತೆಲುಗಿನ ಸೂಪರ್ ಹಿಟ್ ಚಿತ್ರ ಮಗಧೀರಕ್ಕೆ ಗ್ರಾಫಿಕ್ಸ್ ಟಚ್ ನೀಡಿದ್ದ ತಂಡ ರಾಂಧವನಿಗಾಗಿಯೂ ಶ್ರಮಿಸಿದೆ. ಆ ತಂಡದ ಕಡೆಯಿಂದ ಅರ್ಧ ಭಾಗದಷ್ಟು ಕೆಲಸ ಮಾಡಿಸಿರೋ ನಿರ್ದೇಶಕರು ಮಿಕ್ಕಿದ್ದನ್ನು ಹಾಲಿವುಡ್ ತಂತ್ರಜ್ಞರ ಕಡೆಯಿಂದ ಮಾಡಿಸಿದ್ದಾರಂತೆ. ಹಾಲಿವುಡ್ ಮಟ್ಟದಲ್ಲಿ ತರಬೇತಿ ಪಡೆದುಕೊಂಡಿರೋ ಶಿವು ರಾಂಧವನಿಗೂ ಕ್ಯಾಮೆರಾ ಕಣ್ಣಾಗಿದ್ದಾರೆ. ಈ ಚಿತ್ರ ತಾಂತ್ರಿಕವಾಗಿ ಅದೆಷ್ಟು ಬಲಿಷ್ಟವಾಗಿದೆ ಎಂಬುದಕ್ಕೆ ಇವಿಷ್ಟಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಇಲ್ಲಿನ ಬಹುತೇಕ ದೃಷ್ಯಗಳು ಬೇರೆಯದ್ದೇ ಫೀಲ್ ಕೊಡುವಂತಿವೆ. ಹಿನ್ನೆಲೆ ಸಂಗೀತವಂತೂ ಬೇರೆಯದ್ದೇ ರೀತಿಯಲ್ಲಿ ಈ ಚಿತ್ರವನ್ನು ಎತ್ತರಕ್ಕೆ ಕೊಂಡೊಯ್ಯುವಂತಿದೆಯಂತೆ. ಇದೆಲ್ಲದರ ನಿಗೂಢಗಳೂ ಇದೇ ಇಪ್ಪತ್ಮೂರನೇ ತಾರೀಕಿನಂದು ಜಾಹೀರಾಗಲಿವೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಲವರ್ ಬಾಯ್ ಆಗಲೊಲ್ಲದ ರಗಡ್ ರಾಂಧವ!

ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ತೆರೆಗೆ ಬರಲು ಮಹೂರ್ತ ...

news

ಅಭಿಮಾನಿಯ ಮಾತಿನಿಂದ ಕಿಚ್ಚ ಸುದೀಪ್ ಗೆ ಬೇಸರ

ಬೆಂಗಳೂರು: ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳ ಜನರ ನೆರವಿಗೆ ಸ್ಯಾಂಡಲ್ ವುಡ್ ತಾರೆಯ ಸಾಕಷ್ಟು ಸಹಾಯ ...

news

ಹೊಸ ಆರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಮತ್ತೊಂದು ಸಿನಿಮಾ ತೆರೆಗೆ ಬರಲು ...

news

ಗಾಳಿ ಸುದ್ದಿ ನಂಬಬೇಡಿ ಎನ್ನುತ್ತಲೇ ದರ್ಶನ್ ಪತ್ನಿ ಮಾಡಿದ ಈ ಕೆಲಸದಿಂದ ಅನುಮಾನವೊಂದು ಶುರುವಾಗಿದೆ!

ಬೆಂಗಳೂರು: ಕುರುಕ್ಷೇತ್ರ ಯಶಸ್ಸಿನ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕ ಬದುಕಿನಲ್ಲಿ ...