ರಶ್ಮಿಕಾ ಮಂದಣ್ಣಗೆ ಕೊನೆಗೂ ಸಿಕ್ಕಿತು ಜಾಕ್ ಪಾಟ್!

ಬೆಂಗಳೂರು, ಗುರುವಾರ, 4 ಜುಲೈ 2019 (09:46 IST)

ಬೆಂಗಳೂರು: ತೆಲುಗಿನ ಸೂಪರ್ ಸ್ಟಾರ್ ಗಳಿಗೆ ನಾಯಕಿಯಾದ ಕೊಡಗಿನ ಬೆಡಗಿ ತಮಿಳು ಸೂಪರ್ ಸ್ಟಾರ್ ವಿಜಯ್ ಜತೆ ಯಾವಾಗ ನಟಿಸುತ್ತಾರೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಲೇ ಇದ್ದರು.


 
ಆ ಪ್ರಶ್ನೆಗೆ ಈಗ ರಶ್ಮಿಕಾ ಉತ್ತರ ನೀಡುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಬರ್ತ್ ಡೇ ದಿನ ರಶ್ಮಿಕಾ ಟ್ವಿಟರ್ ನಲ್ಲಿ ಶುಭ ಹಾರೈಸಿದ್ದಾಗಲೂ ಅಭಿಮಾನಿಗಳು ನಿಮ್ಮಿಬ್ಬರ ಜೋಡಿಯನ್ನು ಶೀಘ್ರದಲ್ಲೇ ತೆರೆಯಲ್ಲಿ ನೋಡುವ ಭಾಗ್ಯ ನಮ್ಮದಾಗಲಿ ಎಂದು ಆಶಿಸಿದ್ದರು.
 
ಅದೀಗ ನನಸಾಗುತ್ತಿದೆ. ಹೌದು. ರಶ್ಮಿಕಾ ವಿಜಯ್ ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ. ವಿಜಯ್ ರ ಮುಂದಿನ ಚಿತ್ರಕ್ಕೆ ರಾಶಿ ಖನ್ನಾ ಮತ್ತು ರಶ್ಮಿಕಾ ನಾಯಕಿಯರಾಗಲಿದ್ದಾರೆ. ಲೋಕೇಶ್ ಕನಗರಾಜ್ ರ ತಳಪತಿ 64 ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಅಲ್ಲಿಗೆ ಅಭಿಮಾನಿಗಳ ಆಸೆ ಕೊನೆಗೂ ನೆರವೇರುತ್ತಿದೆ. ಇತ್ತ ರಶ್ಮಿಕಾಗೆ ತಮಿಳು ಇಳಯದಳಪತಿಗೆ ನಾಯಕಿಯಾಗುವ ಅದೃಷ್ಟ ಕೂಡಿಬಂದಿದೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಾಲೆಂಜಿಂಗ್ ಸ್ಟಾರ್ ಕುರುಕ್ಷೇತ್ರ ಬಿಡುಗಡೆ ದಿನಾಂಕ ಬದಲಾಯ್ತು

ಬೆಂಗಳೂರು: ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಬಿಡುಗಡೆ ದಿನಾಂಕ ಈಗ ಬದಲಾಗಿದೆ. ಬಹುತಾರಾಗಣವಿರುವ ...

news

ಸ್ಯಾಂಡಲ್ ವುಡ್ ಗೂ ಕಾಲಿಟ್ಟ ಬಾಟಲ್ ಓಪನ್ ಚಾಲೆಂಜ್!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲಿ ನೋಡಿದರೂ ಬಾಟಲ್ ಓಪನ್ ಚಾಲೆಂಜ್ ನದ್ದೇ ಸದ್ದು. ...

news

ಈ ವಾರ ವೀಕೆಂಡ್ ವಿತ್ ರಮೇಶ್ ನ ಅತಿಥಿ ಯಾರು ಗೊತ್ತೇ?

ಬೆಂಗಳೂರು: ಕಳೆದ ವಾರ ರಾಜ್ಯ ಕಂಡ ಇಬ್ಬರು ಮಹಾನ್ ಪೊಲೀಸ್ ಅಧಿಕಾರಿಗಳ ಜೀವನಗಾಥೆಯನ್ನು ವೀಕೆಂಡ್ ವಿತ್ ...

news

ನಟಿ ಮಲ್ಲಿಕಾ ಶೆರಾವತ್ ಹಾಟ್ ಸೊಂಟದ ಮೇಲೆ ಹೀಗೆ ಮಾಡಲು ಬಯಸಿದ್ದನಂತೆ ಆ ನಿರ್ಮಾಪಕ!

ಮುಂಬೈ: ನಟಿಯರು ತಮ್ಮ ವೃತ್ತಿ ಜೀವನದಲ್ಲಿ ಎಂತೆಂತಹಾ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದರ ಬಗ್ಗೆ ಆಗಾಗ ...