Widgets Magazine

ಸುಮಲತಾ ಅಂಬರೀಶ್ ಗೆ ನನ್ನ ಪಕ್ಷದ ಬೆಂಬಲ ಇಲ್ಲ ಎಂದ ರಿಯಲ್ ಸ್ಟಾರ್ ಉಪೇಂದ್ರ

ಬೆಂಗಳೂರು| Krishnaveni K| Last Modified ಭಾನುವಾರ, 10 ಮಾರ್ಚ್ 2019 (09:23 IST)
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಿರುವ ಸುಮಲತಾ ಅಂಬರೀಶ್ ಗೆ ತಮ್ಮ ಪಕ್ಷದ ಬೆಂಬಲ ಇಲ್ಲ ಎಂದು ರಿಯಲ್ ಸ್ಟಾರ್ ಹೇಳಿದ್ದಾರೆ.
 
ಪ್ರಜಾಕೀಯ ಪಕ್ಷದ ನೇತಾರರಾಗಿರುವ ಉಪೇಂದ್ರ ಬಳಿ ಪತ್ರಕರ್ತರು ಸುಮಲತಾ ಬಗ್ಗೆ ಪ್ರಶ್ನೆ ಕೇಳಿದಾಗ ನಾನು ನನ್ನದೇ ಸಿದ್ಧಾಂತ ಇರುವ ಪಕ್ಷ ಕಟ್ಟಿಕೊಂಡು, ನನ್ನದೇ ಪಕ್ಷದವರನ್ನು ಚುನಾವಣೆಗೆ ನಿಲ್ಲಿಸುತ್ತಿರುವಾಗ ಸುಮಲತಾ ಅವರಿಗೆ ಹೇಗೆ ಬೆಂಬಲ ಕೊಡಲಿ ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.
 
ಮಂಡ್ಯದಲ್ಲಿ ಒಂದೆಡೆ ಸುಮಲತಾ ಇನ್ನೊಂದೆಡೆ ನಟ, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ನಡುವೆ ಸ್ಪರ್ಧೆ ಗ್ಯಾರಂಟಿಯಾಗಿದೆ. ಹೀಗಾಗಿ ಸ್ಯಾಂಡಲ್ ವುಡ್ ಯಾರ ಪರವಾಗಿ ನಿಲ್ಲಲಿದೆ ಎಂಬುದು ಜನರ ಕುತೂಹಲವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :