Widgets Magazine
Widgets Magazine

ಪೂಜಾ ಗಾಂಧಿ ಕಾಣೆಯಾಗಿದ್ದು ನಿಜಾನಾ?!

ಬೆಂಗಳೂರು, ಸೋಮವಾರ, 21 ಆಗಸ್ಟ್ 2017 (09:31 IST)

Widgets Magazine

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ ಕಣ್ಮರೆಯಾಗಿದ್ದಾರಂತೆ. ಅವರು ಮೊಬೈಲ್ ಫೋನ್ ಗೂ ರೀಚ್ ಆಗುತ್ತಿಲ್ಲ.. ಎಂದು ಇತ್ತೀಚೆಗೆ ಇದ್ದಕ್ಕಿದ್ದಂತೆ ಕಾಡ್ಗಿಚ್ಚಿನಂತೆ ಸುದ್ದಿ ಹಬ್ಬಿತ್ತು. ಆದರೆ ಇದೆಲ್ಲಾ ನಿಜಾನಾ?


 
ಅದಕ್ಕೆ ಸ್ವತಃ ಪೂಜಾ ಗಾಂಧಿ ಮಾಧ್ಯಮದ ಎದುರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ಇಂತಹದ್ದೊಂದು ಸುದ್ದಿ ಹಬ್ಬಿಸಿದವರ ವಿರುದ್ಧ ಗರಂ ಆಗಿದ್ದಾರೆ.
 
‘ನಾನು ಎಲ್ಲು ಹೋಗಿಲ್ಲ. ಪೂನಾಗೆ ಹೋಗಿದ್ದೆ. ಪೂನಾದಿಂದ 10 ಕಿ. ಮೀ. ದೂರದಲ್ಲಿ ಯೋಗ ಕೇಂದ್ರವೊಂದಕ್ಕೆ ಹೋಗಿದ್ದೆ. ಆಗಾಗ ನಾನು ಅಲ್ಲಿಗೆ ಹೋಗುತ್ತೇನೆ. ಆದರೆ ಈ ಬಾರಿ ಮಾತ್ರ ಯಾರೋ ನಾನು ಕಾಣೆಯಾಗಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ’ ಎಂದು ಪೂಜಾ ಸ್ಪಷ್ಟನೆ ನೀಡಿದ್ದಾರೆ.
 
ಹಾಗಿದ್ದರೆ ಫೋನ್ ಗೂ ಯಾಕೆ ಸಿಕ್ಕಿಲ್ಲ? ಎಂದು ಕೇಳಿದಾಗ ‘ಅಲ್ಲಿ ನೆಟ್ ವರ್ಕ್ ಸಮಸ್ಯೆ ಇತ್ತು. ಫೋನ್ ರೀಚ್ ಆಗುತ್ತಿರಲಿಲ್ಲ. ಅಷ್ಟಕ್ಕೇ ನಾನು ಕಾಣೆಯಾಗಿದ್ದೀನಿ ಎಂದು ಸುದ್ದಿ ಹಬ್ಬಿಸುವುದು ಸರಿಯಾ?’ ಎಂದು ಗರಂ ಆಗಿ ಕೇಳಿದ್ದಾರೆ.
 
ಇದನ್ನೂ ಓದಿ.. ‘ಭಾರತಕ್ಕೂ ನಾವು ಬೇಡ ಎಂದಾದರೆ ಕೊಂದು ಬಿಡಿ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಎಲ್.ಎನ್. ಶಾಸ್ತ್ರೀಗೆ ನೆರವು ನೀಡಲು ಮುಂದಾದ ನಟ ಜಗ್ಗೇಶ್

ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಾಡಲು ಆರಂಭಿಸಿದ ಖ್ಯಾತ ಹಿನ್ನೆಲೆ ಗಾಯಲ ಎಲ್.ಎನ್. ಶಾಸ್ತ್ರೀ ...

news

ನಟಿ ಸಂಜನಾಗೆ 26 ಲಕ್ಷ ರೂ. ವಂಚಿಸಿದ ಚಿಟ್ ಫಂಡ್ ಕಂಪನಿ

ಚಿಟ್ ಫಂಡ್ ಕಂಪನಿಯೊಂದು ಸ್ಯಾಂಡಲ್ ವುಡ್ ನಟಿ ಸಂಜನಾಗೆ 26 ಲಕ್ಷ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.

news

ಗಾಯಕ ಎಲ್ ಎನ್ ಶಾಸ್ತ್ರಿ ನೆರವಿಗೆ ಬಂದ ಜಗ್ಗೇಶ್

ಬೆಂಗಳೂರು: ಕರುಳಿನ ಕ್ಯಾನ್ಸರ್ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಒದ್ದಾಡುತ್ತಿರುವ ಖ್ಯಾತ ಗಾಯಕ ...

news

ಖ್ಯಾತ ಹಿನ್ನಲೆ ಗಾಯಕ ಎಲ್ ಎನ್ ಶಾಸ್ತ್ರಿಗೆ ಕ್ಯಾನ್ಸರ್

ಬೆಂಗಳೂರು: ಲಾಲಿ ಸುವ್ವಾಲಿ ಹಾಡೆಲ್ಲಾ ಲಾಲಿ.. ಎಂಬ ಜೋಡಿ ಹಕ್ಕಿ ಸಿನಿಮಾದ ಹಾಡನ್ನು ಮೆಚ್ಚದವರು ಯಾರು? ...

Widgets Magazine Widgets Magazine Widgets Magazine