ದರ್ಶನ್- ಸುದೀಪ್ ಕುಚಿಕು ಸ್ನೇಹ ಅಂತ್ಯ?

ಸೋಮವಾರ, 6 ಮಾರ್ಚ್ 2017 (07:26 IST)

ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಗಳಾದ  ಸುದೀಪ್- ದರ್ಶನ್ ಮುರಿದು ಬಿದ್ದಿದೆ. ನಮ್ಮ ನಡುವೆ ಯಾವುದೇ ಸ್ನೇಹವಿಲ್ಲ ಎಂದು ಸ್ವತಃ ದರ್ಶನ್ ಟ್ವೀಟ್ ಮಾಡಿದ್ದಾರೆ.
 
ನಾನು  ಹಾಗೂ ಸುದೀಪ್ ಇನ್ನು ಸ್ನೇಹಿತರಲ್ಲ. ಕೇವಲ ಕನ್ನಡ ಚಿತ್ರರಂಗದ ನಟರಷ್ಟೇ. ನಮ್ಮ ನಡುವಿನ ಸ್ನೇಹದ ಕುರಿತು ಯಾವುದೇ ಊಹಾಪೋಹಗಳು ಇಂದಿನಿಂದ ಕೊನೆಗೊಳ್ಳಲಿ, ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
 
ತಮ್ಮ ಈ ನಡೆಗೆ ಸಿನಿಪ್ರಿಯರು ಆಘಾತ ವ್ಯಕ್ತಪಡಿಸುತ್ತಿದ್ದಂತೆ ದರ್ಶನ್ ತಮ್ಮ ಕೋಪಕ್ಕೆ ಕಾರಣವಾಗಿರುವ ವಿಡಿಯೋವೊಂದನ್ನು ಸಹ ಟ್ವೀಟ್ ಮಾಡಿದ್ದು, ಇದೇ ಮೊದಲ ಬಾರಿಗೆ ಈ ವಿಡಿಯೋ ನೋಡಿದಾಗ ನನಗೆ ನೋವಾಗಿದೆ. ಈ ಹೇಳಿಕೆ ನೀಡಿದ್ದೇಕೆ? ಈ ಕುರಿತು ಸುದೀಪ್ ಕ್ಲಾರಿಟಿ ನೀಡಲಿ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
 
ದರ್ಶನ್ ಅವರ ಈ ಮುನಿಸಿಗೆ ಕಾರಣ, ಸುದೀಪ್  ಅವರು ಕೆಲ ವರ್ಷಗಳ ಹಿಂದೆ ನೀಡಿರುವ ಹೇಳಿಕೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಾ, ಮೆಜೆಸ್ಟಿಕ್‌( ದರ್ಶನ್‌ಗೆ ಬ್ರೇಕ್ ನೀಡಿದ ಚಿತ್ರ)ನಲ್ಲಿ ನಟಿಸಲು ಬಂದ ಅವಕಾಶವನ್ನು ನಾನು ನಿರಾಕರಿಸಿದ್ದೆ. ಅಲ್ಲದೇ ಈ ಅವಕಾಶವನ್ನು ದರ್ಶನ್ ಅವರಿಗೆ ನೀಡುವಂತೆ ಸೂಚಿಸಿದ್ದೆ ಎಂದು ಹೇಳುವುದರ ಮೂಲಕ ದರ್ಶನ್ ಅವರಿಗೆ ಅವಕಾಶ ಸಿಗಲು ತಾವೇ ಕಾರಣ ಎಂದು ಪ್ರತಿಪಾದಿಸಿದ್ದರು.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚೊಚ್ಚಲ ಮಗು ನಿರ್ರೀಕ್ಷೆಯಲ್ಲಿ ನಟಿ ಶ್ವೇತಾ ಶ್ರೀವಾಸ್ತವ್

ಚೊಚ್ಚಲ ಮಗು ನಿರ್ರೀಕ್ಷೆಯಲ್ಲಿ ನಟಿ ಶ್ವೇತಾ ಶ್ರೀವಾಸ್ತವ್

news

13 ವರ್ಷದಲ್ಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳಂತೆ ಬಾಲಿವುಡ್ ನಟಿ

ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ಪ್ರಖ್ಯಾತ ನಟಿ ನಟಿಯೋರ್ವಳು ಲೈಂಗಿಕ ದೌರ್ಜನ್ಯಕ್ಕೊಳಗಾದ ಸುದ್ದಿ ...

news

ಶೀಘ್ರದಲ್ಲೇ ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್‌

ಸದಭಿರುಚಿಯ ಕಾರ್ಯಕ್ರಮ ಎಂದೇ ಬಿಂಬಿತವಾಗಿದ್ದ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ವೀಕೆಂಡ್ ...

news

ಫೇಸ್‌ಬುಕ್‌ನಲ್ಲೂ ಅಸಮಧಾನ ಹೊರ ಹಾಕಿದ ದರ್ಶನ್

ನಿನ್ನೆ ಟ್ವಿಟರ್‌ನಲ್ಲಿ ತಮ್ಮ ಮತ್ತು ಸುದೀಪ್ ನಡುವಿನ ಸ್ನೇಹ ಅಂತ್ಯವಾಗಿದೆ ಎಂದು ಟ್ವೀಟ್ ಮಾಡಿದ್ದ ...

Widgets Magazine