ಸರ್ಕಾರಕ್ಕೆ ರಾಕಿಂಗ್ ಸ್ಟಾರ್ ಯಶ್ ಸವಾಲು

ಬೆಂಗಳೂರು, ಸೋಮವಾರ, 20 ನವೆಂಬರ್ 2017 (09:03 IST)

ಬೆಂಗಳೂರು: ರಾಜನರಸಿಂಹ ಚಿತ್ರದ ಅಡಿಯೋ ಬಿಡುಗಡೆ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಜ್ಯ ಸರ್ಕಾರಕ್ಕೇ ಸವಾಲೆಸೆದಿದ್ದಾರೆ.
 

ಅನಿರುದ್ಧ್ ಅಭಿನಯದ ರಾಜನರಸಿಂಹ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ರಿಕ್ರಿಯೇಟ್ ಮಾಡಿ ತೋರಿಸಲಾಗಿದೆ. ಈ ಚಿತ್ರದ ಅಡಿಯೋ ಬಿಡುಗಡೆಗೆ ಬಂದಿದ್ದ ಯಶ್, ವಿಷ್ಣುವರ್ಧನ್ ರನ್ನು ಸ್ಮರಿಸಿಕೊಂಡರು.
 
ಯಾವತ್ತಿದ್ದರೂ ಕರ್ನಾಟಕಕ್ಕೆ ಒಬ್ಬರೇ ‘ರಾಮಚಾರಿ’. ಅವರು ವಿಷ್ಣು ದಾದ. ನಾನು ರಾಮಚಾರಿ ಹೆಸರಿನಲ್ಲಿ ಸಿನಿಮಾ ಮಾಡಿರಬಹುದು. ಆದರೆ ಯಾವ ಕಾರಣಕ್ಕೂ ರಾಮಚಾರಿ ಅಲ್ಲ ಎಂದರು.
 
ಇದೆಲ್ಲದರ ನಡುವೆ ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯಶ್ ಸರ್ಕಾರಕ್ಕೇ ಸವಾಲೆಸೆದರು. ವಿಷ್ಣುವರ್ಧನ್ ಅವರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಅವರ ಸ್ಮಾರಕ ನಿರ್ಮಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಮ್ಮ ಕೈಲಾಗದಿದ್ದರೆ ಹೇಳಿ. ನಾವು ಅಭಿಮಾನಿಗಳೇ ಸೇರಿಕೊಂಡು ನಿರ್ಮಿಸುತ್ತೇವೆ ಎಂದು ಯಶ್ ಗುಡುಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹರ್ಯಾಣದ ಚೆಲುವೆಗೆ ವಿಶ್ವಸುಂದರಿ ಕಿರೀಟ ಸಿಕ್ಕಿದ್ದು ಹೇಗೆ?

ನವದೆಹಲಿ: ಹರ್ಯಾಣದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಮನೂಷಿ ಚಿಲ್ಲರ್ 2017 ರ ವಿಶ್ವಸುಂದರಿ ಸ್ಪರ್ಧೆ ...

news

ಬಿಗ್ ಬಾಸ್: ಕೃಷಿ ತಾಪಂಡ ಎಲಿಮಿನೇಟ್ ಆಗಿದ್ದಕ್ಕೆ ಜನ ಏನಂತಾರೆ?

ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಿಂದ ಈ ವಾರ ಕೊಡಗಿನ ಬೆಡಗಿ ಕೃಷಿ ತಾಪಂಡ ಎಲಿಮಿನೇಟ್ ಆಗಿ ...

news

‘ಅದೇನಾಗುತ್ತೋ ನೋಡೇ ಬಿಡ್ತೀನಿ’ ಬಾಲಿವುಡ್ ಬೆಡಗಿಯ ಸವಾಲ್!

ಮುಂಬೈ: ಪದ್ಮಾವತಿ ಸಿನಿಮಾ ಬಿಡುಗಡೆ ವಿವಾದ ಈಗ ತಾರಕಕ್ಕೇರಿದೆ. ಸಿನಿಮಾ ಬಿಡುಗಡೆಗೆ ವಿಚಾರದಲ್ಲಿ ದೀಪಿಕಾ ...

news

‘ಪಕ್ಷಕ್ಕೆ ದೇಣಿಗೆ ಕೊಟ್ಟವರ ಹಣ ವಾಪಸ್ ಮಾಡಿದ್ದೇನೆ’

ಚೆನ್ನೈ: ರಾಜಕೀಯಕ್ಕೆ ಎಂಟ್ರಿಯಾಗುತ್ತಿರುವ ಕಮಲ್ ಹಾಸನ್ ತಮ್ಮದೇ ಪಕ್ಷ ಕಟ್ಟಿಕೊಳ್ಳಲು ತಯಾರಿ ...

Widgets Magazine
Widgets Magazine