ನಾಳೆ ನನ್ನ ಬರ್ತ್ ಡೇ ಆಚರಿಸ್ಬೇಡಿ ಎಂದ ರಾಕಿಂಗ್ ಸ್ಟಾರ್ ಯಶ್: ಕಾರಣ ಕೇಳಿದ್ರೆ ಶಾಕ್!

ಬೆಂಗಳೂರು, ಸೋಮವಾರ, 7 ಜನವರಿ 2019 (11:14 IST)

ಬೆಂಗಳೂರು: ಕೆಜಿಎಫ್ ಯಶಸ್ಸಿನಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್ ಗೆ ನಾಳೆ ಜನ್ಮ ದಿನದ ಸಂಭ್ರಮ. ಆದರೆ ಯಾವುದೇ ಕಾರಣಕ್ಕೂ ನಾಳೆ ನಮ್ಮ ಮನೆಗೆ ಬಂದು, ಬರ್ತ್ ಡೇ ಆಚರಿಸ್ಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.


 
ಫೇಸ್ ಬುಕ್ ಮುಖಾಂತರ ಯಶ್ ಅಭಿಮಾನಿಗಳಿಗೆ ವಿಡಿಯೋ ಸಂದೇಶ ನೀಡಿದ್ದು, ಈ ವರ್ಷ ನನಗೆ ಬರ್ತ್ ಡೇ ಆಚರಿಸಿಕೊಳ್ಳಲು ಇಷ್ಟವಿಲ್ಲ. ನೀವೂ ನನ್ನ ಬರ್ತ್ ಡೇ ಆಚರಿಸಬೇಡಿ. ನಾನು ಈ ಬಾರಿ ಯಾರನ್ನೂ ಭೇಟಿಯಾಗಲ್ಲ. ಬೇಜಾರು ಮಾಡ್ಕೊಳ್ಬೇಡಿ ಎಂದು ಮನವಿ ಮಾಡಿದ್ದಾರೆ.
 
ಅದಕ್ಕೆ ಕಾರಣ ರೆಬಲ್ ಸ್ಟಾರ್ ಅಂಬರೀಶ್. ಅಂಬರೀಶ್ ರನ್ನು ತಮ್ಮ ತಂದೆ ಸಮಾನರಾಗಿ ನೋಡುವ ಯಶ್, ಅವರ ನಿಧನದ ಹಿನ್ನಲೆಯಲ್ಲಿ ಅವರ ಗೌರವಾರ್ಥ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅಭಿಮಾನಿಗಳೂ ತಮ್ಮ ಮನೆ ಬಳಿ ಬಂದು ಕೇಕ್, ಹಾರ ತುರಾಯಿ ಹಿಡಿದು ಬರ್ತ್ ಡೇ ಆಚರಿಸುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
 
ಈ ನಡುವೆ ತಮ್ಮನ್ನು ಕಷ್ಟದ ಸಂದರ್ಭದಲ್ಲಿಯೂ, ಎಷ್ಟೇ  ಅಡೆತಡೆಗಳಿದ್ದರೂ ಬೆಂಬಲಿಸುವ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿರುವ ಯಶ್, ಸದ್ಯದಲ್ಲೇ ಯಶೋ ಯಾತ್ರೆ ಎಂಬ ಕಾರ್ಯಕ್ರಮದ ಮೂಲಕ ಪ್ರತೀ ಊರುಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜತೆ ಕಳೆಯುವುದಾಗಿ ಪ್ರಾಮಿಸ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ಪೈಲ್ವಾನ್’ ಬಗ್ಗೆ ಹೊಸ ಸುದ್ದಿ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಈಗಾಗಲೇ ...

news

ಪುನೀತ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರಾಕಿಂಗ್ ಸ್ಟಾರ್ ಯಶ್! ಕಾರಣವೇನು ಗೊತ್ತಾ?!

ಬೆಂಗಳೂರು: ಐಟಿ ದಾಳಿ ಹಿನ್ನಲೆಯಲ್ಲಿ ಎರಡು ದಿನ ಅಕ್ಷರಶಃ ಗೃಹಬಂಧನದಲ್ಲಿದ್ದ ರಾಕಿಂಗ್ ಸ್ಟಾರ್ ಯಶ್, ಅದಾದ ...

news

ಸ್ಯಾಂಡಲ್ ವುಡ್ ತಾರೆಯರಿಗೆ ಇಂದಿನಿಂದ ಮತ್ತೆ ಐಟಿ ಡ್ರಿಲ್

ಬೆಂಗಳೂರು: ಮೊನ್ನೆಯಷ್ಟೇ ಸತತ ಎರಡು ದಿನ ಐಟಿ ಅಧಿಕಾರಿಗಳ ತಪಾಸಣೆಯಿಂದಾಗಿ ಗೃಹ ಬಂಧನ ಅನುಭವಿಸಿದ್ದ ...

news

ಬೆಂಗಳೂರು ಬುಲ್ಸ್ ಗೆ ಜೈ ಎಂದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಫೈನಲ್ ನಲ್ಲಿ ಗುಜರಾತ್ ವಿರುದ್ಧ ಗೆಲುವು ಸಾಧಿಸಿ ಚೊಚ್ಚಲ ಕಪ್ ...