ಸುಳ್ಳು ಸುದ್ದಿಯನ್ನೇ ನಿಜ ಮಾಡಿದ್ರು ರಾಕಿಂಗ್ ಸ್ಟಾರ್ ಯಶ್!

ಬೆಂಗಳೂರು, ಶುಕ್ರವಾರ, 7 ಡಿಸೆಂಬರ್ 2018 (08:58 IST)

ಬೆಂಗಳೂರು: ಕೆಜಿಎಫ್ ಕ್ರೇಜ್ ನಲ್ಲಿ ಮುಳುಗಿದ್ದಾಗ ರಾಕಿಂಗ್ ಸ್ಟಾರ್ ಯಶ್ ಮುಂದೆ ‘ಬಾಹುಬಲಿ’ ಖ್ಯಾತಿಯ ರಾಜಮೌಳಿ ಜತೆ ಸಿನಿಮಾ ಮಾಡುತ್ತಾರೆ ಎಂದೆಲ್ಲಾ ಸುಳ್ಳು ಸುದ್ದಿ ಹರಿದುಬಂದಿತ್ತು.


 
ಕೊನೆಗೆ ಸ್ವತಃ ಯಶ್ ಆ ಸುದ್ದಿ ಎಲ್ಲಾ ಸುಳ್ಳು. ನಾನು ರಾಜಮೌಳಿ ಜತೆ ಸಿನಿಮಾ ಮಾಡುತ್ತಿಲ್ಲ. ಈ ಸುದ್ದಿಗಳನ್ನೆಲ್ಲಾ ನಂಬಬೇಡಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.
 
ಆದರೆ ಈಗ ಮತ್ತೆ ಯಶ್ ರಾಜಮೌಳಿ ಜತೆ ಕಾಣಿಸಿಕೊಳ್ಳುವ ಸುದ್ದಿ ಬಂದಿದೆ. ಈ ಬಾರಿ ಇದು ಸುಳ್ಳಲ್ಲ, ನಿಜವಾದ ಸುದ್ದಿ. ಆದರೆ ರಾಜಮೌಳಿ ಜತೆ ಯಶ್ ಸಿನಿಮಾ ಮಾಡುತ್ತಿಲ್ಲ, ಬದಲಾಗಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಯಶ್ ಅಭಿನಯ ಕೆಜಿಎಫ್ ಸಿನಿಮಾದ ಪ್ರಿರಿಲೀಸ್ ಈವೆಂಟ್ ಡಿಸೆಂಬರ್ 9 ರಂದು ಹೈದರಾಬಾದ್ ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜಮೌಳಿ ಆಗಮಿಸುತ್ತಿದ್ದಾರೆ. ಹೀಗಾಗಿ ಯಶ್-ರಾಜಮೌಳಿ ವೇದಿಕೆ ಹಂಚಿಕೊಳ್ಳುತ್ತಿರುವುದು ಕನ್ ಫರ್ಮ್ ಆಗಿದೆ.
 
ಯಶ್ ಇಂತಹದ್ದೊಂದು ಸುದ್ದಿಯನ್ನು ಪ್ರಕಟಿಸಿದ್ದೇ ತಡ, ಅಭಿಮಾನಿಗಳು ಭಾರೀ ಖುಷಿಯಾಗಿದ್ದು, ಒಂದು ವೇಳೆ ಕೆಜಿಎಫ್ ನೋಡಿ ಇಂಪ್ರೆಸ್ ಆಗಿ ನಿಮ್ಮ ಜತೆ ಸಿನಿಮಾ ಮಾಡ್ತೀನಿ ಎಂದು ರಾಜಮೌಳಿ ಹೇಳಿದರೆ ಛಾನ್ಸ್ ಬಿಡಬೇಡಿ ಸಾರ್.. ಎಂದು ಪುಕ್ಸಟೆ ಸಲಹೆಯನ್ನು ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಿಚ್ಚ ಸುದೀಪ್ ಗೆ ‘ದಿ ವಿಲನ್’ನಂತಹಾ ಸಿನಿಮಾ ಇನ್ಮುಂದೆ ಮಾಡ್ಬೇಡಿ ಎಂದವರು ಯಾರು ಗೊತ್ತೇ?!

ಬೆಂಗಳೂರು: ವಿಲನ್ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗಿದ್ದು ನೋಡಿ ಜನ ಏನೋ ಇದೆ ಎಂದು ಕುತೂಹಲದಿಂದ ...

news

ನನ್ನ ಮದುವೆಗೆ ಬರುವವರೂ ಬೆತ್ತಲೆಯಾಗಿ ಬರಬೇಕು- ನಟಿ ರಾಖಿ ಸಾವಂತ್

ಮುಂಬೈ : ಬಾಲಿವುಡ್ ನ ಹಾಟ್ ನಟಿ ರಾಖಿ ಸಾವಂತ್ ತಮ್ಮ ಮದುವೆಗೆ ಬರುವವರಿಗೆ ಕಂಡೀಷನ್ ವೊಂದನ್ನು ...

news

ಪ್ರಿಯಾಂಕ ಚೋಪ್ರಾಳನ್ನು 'ಜಾಗತಿಕ ವಂಚನೆಯ ನಟಿ' ಎಂದು ಹೇಳಿದ್ಯಾರು ಗೊತ್ತಾ?

ನವದೆಹಲಿ : ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಅಮೆರಿಕದ ...

news

ಟ್ರೋಲಿಗರ ಬಾಯಿಗೆ ಆಹಾರವಾದ ಕೆ.ಜಿ.ಎ.ಫ್ ಚಿತ್ರದ 'ಸಲಾಂ ರಾಕಿ ಭಾಯ್' ಹಾಡು

ಮುಂಬೈ : ಇತ್ತೀಚೆಗೆ ಬಿಡುಗಡೆಯಾದ ನಟ ಯಶ್ ಅಭಿನಯದ ಕೆ.ಜಿ.ಎ.ಫ್ ಚಿತ್ರದ ಮೊದಲ ಹಾಡೊಂದು ಇದೀಗ ಟ್ರೋಲಿಗರ ...

Widgets Magazine