ಮಂಡ್ಯ ಜನರಿಗಾಗಿ ಒಂದು ತೀರ್ಮಾನಕ್ಕೆ ಬಂದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್!

ಬೆಂಗಳೂರು, ಸೋಮವಾರ, 10 ಜೂನ್ 2019 (10:10 IST)

ಬೆಂಗಳೂರು: ಈ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ಅಂಬರೀಶ್ ಗೆಲುವಿನಲ್ಲಿ ಯಶ್, ದರ್ಶನ್‍ ‍ಜತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡಾ ಅಷ್ಟೇ ಶ್ರಮವಹಿಸಿದ್ದರು.


 
ಸುಮಲತಾ ಏನೇ ಮಾಡಿದರೂ ಅವರ ಜತೆಗೆ ರಾಕ್ ಲೈನ್ ಅಣ್ಣನಂತೆ ಬೆಂಗಾವಲಾಗಿ ಇದ್ದೇ ಇರುತ್ತಾರೆ. ಚುನಾವಣೆ ಪ್ರಚಾರದಿಂದ ಹಿಡಿದು ಮತ ಎಣಿಕೆ ದಿನವೂ ರಾಕ್ ಲೈನ್ ವೆಂಕಟೇಶ್ ಜತೆಗೇ ಇದ್ದರು. ಈಗಲೂ ಸುಮಲತಾ ಕುಟುಂಬ ಸದಸ್ಯರಂತೇ ಇರುವ ರಾಕ್ ಲೈನ್ ಮಂಡ್ಯ ಜನರ ಪ್ರೀತಿಯ ಋಣ ತೀರಿಸಲು ಮಹತ್ವದ ನಿರ್ಧಾರವೊಂದನ್ನು ಮಾಡಿದ್ದಾರೆ.
 
ಈ ವಿಚಾರವನ್ನು ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನು ಮುಂದೆ ರಾಕ್ ಲೈನ್ ನಿರ್ಮಾಣ ಮಾಡುವ ಎಲ್ಲಾ ಸಿನಿಮಾಗಳ ಪೋಸ್ಟರ್, ಟೈಟಲ್ ಕಾರ್ಡ್ ಗಳಲ್ಲಿ ‘ಮಂಡ್ಯ ಜಿಲ್ಲೆಯ ಸ್ವಾಭಿಮಾನ ಮತ್ತು ಜನರ ಆಶೀರ್ವಾದ’ ಎಂದು ಹಾಕಿಸುತ್ತಾರಂತೆ. ಆ ಮೂಲಕ ಮಂಡ್ಯ ಜನರ ಪ್ರೀತಿಯ ಋಣ ತೀರಿಸಲು ಮುಂದಾಗುವುದಾಗಿ ರಾಕ್ ಲೈನ್ ಹೇಳಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪುತ್ರನ ಆಸೆ ನೆರವೇರಿಸಲು ಲಂಡನ್ ಗೆ ಹಾರಿದ ನಟ ಮಹೇಶ್ ಬಾಬು

ಲಂಡನ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ಲಂಡನ್ ನಲ್ಲಿ ರಜಾ ಮಜಾ ಮಾಡುತ್ತಿದ್ದಾರೆ. ಮಹರ್ಷಿ ...

news

ಕ್ರಿಕೆಟ್ ಪ್ರೇಮಿ ಕಿಚ್ಚ ಸುದೀಪ್ ಈಗ ಲಂಡನ್ ನಲ್ಲಿ!

ಲಂಡನ್: ಇಂಗ್ಲೆಂಡ್ ನಲ್ಲಿ ವಿಶ್ವಕಪ್ 2019 ಕಳೆ ರಂಗೇರಿದ್ದು, ನಿನ್ನೆ ಟೀಂ ಇಂಡಿಯಾ ಆಸ್ಟ್ರೇಲಿಯಾ ನಡುವಿನ ...

news

ರಕ್ಷಿತಾ ಪ್ರೇಮ್ ಸಹೋದರನಿಗೆ ರಚಿತಾ ರಾಮ್ ನಾಯಕಿ

ಬೆಂಗಳೂರು: ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಸಹೋದರ ಅಭಿಷೇಕ್ ಗಾಗಿ ಮಾಡುತ್ತಿರುವ ‘ಏಕಲವ್ಯ’ ಸಿನಿಮಾಗೆ ...

news

ವಿಜಯ್ ದೇವರಕೊಂಡಗೆ ದಿಗಂತ್ ಏನಾಗ್ಬೇಕು?

ಬೆಂಗಳೂರು: ವಿಜಯ್ ದೇವರಕೊಂಡ ಜತೆಗೆ ದೂದ್ ಪೇಡಾ ದಿಗಂತ್ ಹೀರೋ ಸಿನಿಮಾದಲ್ಲಿ ಪಾತ್ರ ಮಾಡುತ್ತಿರುವ ಬಗ್ಗೆ ...