ಬಾಹುಬಲಿ ವಿವಾದ: ಫೇಸ್ ಬುಕ್ ಪೋಸ್ಟ್ ವಿರುದ್ಧ ಸಾ ರಾ ಗೋವಿಂದು ದೂರು

Bangalore, ಶುಕ್ರವಾರ, 21 ಏಪ್ರಿಲ್ 2017 (11:12 IST)

Widgets Magazine

ಬೆಂಗಳೂರು: ಕನ್ನಡಿಗರಿಗೆ ಅವಹೇಳನ ಮಾಡಿ ಮಾತನಾಡಿದ್ದಾರೆಂಬ ಕಾರಣಕ್ಕೆ ತಮಿಳು ನಟ ಸತ್ಯರಾಜ್ ಕ್ಷಮೆ ಯಾಚಿಸುವವರೆಗೂ ಬಾಹುಬಲಿ 2 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಲ್ಲ ಎನ್ನುತ್ತಿರುವ ಕನ್ನಡ ಸಂಘಟನೆ ಬಗ್ಗೆ ಟೀಕಿಸಿದ ವ್ಯಕ್ತಿಯ ವಿರುದ್ಧ ನಿರ್ಮಾಪಕ ಸಾ ರಾ ಗೋವಿಂದು ದೂರು ನೀಡಿದ್ದಾರೆ.


 
ಪ್ರಶಾಂತ್ ಸಂಭರ್ಗಿ ಎನ್ನುವವರು, ಬಾಹುಬಲಿ ಸಿನಿಮಾ ಬಿಡುಗಡೆಗೆ ವಿರೋಧಿಸುತ್ತಿರುವ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾ ರಾ ಗೋವಿಂದು ಇಷ್ಟೆಲ್ಲಾ ಮಾಡುತ್ತಿರುವುದು ಹಣಕ್ಕಾಗಿ ಎಂದು ಫೇಸ್ ಬುಕ್ ನಲ್ಲಿ ಆರೋಪಿಸಿದ್ದರು.
 
ಈ ಬಗ್ಗೆ ಸಾ ರಾ ಗೋವಿಂದು ಹೈ ಗ್ರೌಂಡ್ ಠಾಣೆ ಪೊಲೀಸರಿಗೆ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳು ನಟ ಶರತ್ ಕುಮಾರ್ ಗೆ ರಾಜಕುಮಾರ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಅವರಿಗೆ ಯಾವುದೇ ತೊಂದರೆ ಮಾಡಲಿಲ್ಲವೆಂದ ಮೇಲೆ ಬಾಹುಬಲಿಗೆ ಯಾಕೆ ತಕರಾರು ಎಂದು ಪ್ರಶಾಂತ್ ಪ್ರಶ್ನಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಾಹುಬಲಿ 2 ಸಿನಿಮಾ ಸತ್ಯರಾಜ್ ವಾಟಾಳ್ ನಾಗರಾಜ್ ಸಾ ರಾ ಗೋವಿಂದು ಸ್ಯಾಂಡಲ್ ವುಡ್ ಸಿನಿಮಾ ಸುದ್ದಿಗಳು Sathyaraj Sandalwood Bahubali Film Vatal Nagaraj Film News Sa Ra Govindu

Widgets Magazine

ಸ್ಯಾಂಡಲ್ ವುಡ್

news

ಈಗಿನ ನಟಿಯರೇ ಲಕ್ಕಿ ಎಂದ ತೆಲುಗು ನಟಿ ರಾಶಿ

ನಮ್ಮ ಕಾಲದಲ್ಲಿ ನಟಿಯರಿಗೆ ಹೇಳಿಕೊಳ್ಳುವಂತಹ ಸೌಲಭ್ಯವಿರಲಿಲ್ಲ. ಎಲ್ಲೆಂದರಲ್ಲಿ ಬಟ್ಟೆ ಬದಲಿಸಬೇಕಿತ್ತು. ...

news

ಬ್ಲೂ ಫಿಲಂನಲ್ಲೂ ನಟಿಸಲು ರೆಡಿ ಎಂದ ತೆಲುಗು ನಟಿ

ಬಣ್ಣದ ಲೋಕದಲ್ಲಿ ಕೆಲವೊಮ್ಮೆ ಪ್ರತಿಭೆಯೊಂದೇ ಅಲ್ಲ ಲಕ್ ಕೂಡ ಕೆಲಸ ಮಾಡಿಬಿಡುತ್ತದೆ. ಪ್ರತಿಭೆ ಇದ್ದರೂ ...

news

`ಸತ್ಯರಾಜ್ ಕ್ಷಮೆ ಕೇಳಲೇಬೇಕು, ರಾಜಮೌಳಿ ಕ್ಷಮೆ ಕೇಳಬೇಕಿಲ್ಲ'

ಕಾವೇರಿ ನದಿ ಕುರಿತಂತೆ ಸತ್ಯರಾಜ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ಚಿತ್ರ ...

news

ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ

ಕಾವೇರಿ ನದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ...

Widgets Magazine