Widgets Magazine

ಪ್ರಕಾಶ್ ರೈಗೆ ಸದಾನಂದ ಗೌಡರ ತಿರುಗೇಟು

ಬೆಂಗಳೂರು| Krishnaveni| Last Modified ಸೋಮವಾರ, 9 ಅಕ್ಟೋಬರ್ 2017 (09:51 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಬಹುಭಾಷಾ ನಟ ಪ್ರಕಾಶ್ ರೈಗೆ ಕೇಂದ್ರ ಸಚಿವ ತಿರುಗೇಟು ನೀಡಿದ್ದಾರೆ.

 
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಬೆಂಬಲಿಗರೇ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಆಚರಿಸುತ್ತಿದ್ದರೂ ಪ್ರಧಾನಿ ಮೌನ ವಹಿಸಿರುವುದು ನನಗೆ  ಅಚ್ಚರಿ ಮೂಡಿಸುತ್ತಿದೆ. ಅವರು ನನಗಿಂತಲೂ ದೊಡ್ಡ ನಟ, ನನಗೆ ಬಂದಿರುವ ಪ್ರಶಸ್ತಿಗಳನ್ನೆಲ್ಲಾ ಅವರಿಗೇ ಕೊಡಬೇಕೆನಿಸುತ್ತದೆ ಎಂದಿದ್ದರು ಪ್ರಕಾಶ್ ರೈ.
 
ಇದಕ್ಕೆ ಪ್ರತಿಕ್ರಿಯಿಸಿರುವ ಸದಾನಂದ ಗೌಡ, ವಾಪಸ್ ಮಾಡುವುದಾದರೆ, ಮೊದಲ ಸಾಲಿನಲ್ಲೇ ನಿಂತು ಪ್ರಶಸ್ತಿ ಸ್ವೀಕರಿಸುವುದು ಯಾಕೆ ಎಂದು ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :