ಸಲ್ಮಾನ್‌ಖಾನ್ ಬಾಡಿಗಾರ್ಡ್‌ನಿಂದ ಮಹಿಳೆಗೆ ಅತ್ಯಾಚಾರದ ಬೆದರಿಕೆ

ಮುಂಬೈ, ಸೋಮವಾರ, 23 ಅಕ್ಟೋಬರ್ 2017 (19:27 IST)

ಬಿಗ್‌ಬಾಸ್ ಸ್ಪರ್ಧಾಳುವಾಗಿದ್ದ ಜುಬೇರ್ ಖಾನ್‌‌ಗೆ ನೆರವು ನೀಡಿದ್ದಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಎಂಬಾತ ಎನ್‌ಜಿಓ ಸಂಚಾಲಕಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಿಯಾಲಿಟಿ ಶೋ ಬಿಗ್‌ಬಾಸ್‌‌ನಿಂದ ಹೊರಬಿದ್ದ ಎರಡು ವಾರಗಳ ನಂತರ ಪೊಲೀಸ್ ಠಾಣೆಯಲ್ಲಿ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಿಸಿದ್ದಾನೆ. ಪ್ರಕರಣದಲ್ಲಿ ಜುಬೇರ್ ಖಾನ್‌ಗೆ ನೆರವು ನೀಡಿದಲ್ಲಿ ಅತ್ಯಾಚಾರವೆಸಗುವುದಾಗಿ ಸಲ್ಮಾನ್ ಬಾಡಿಗಾರ್ಡ್ ಶೇರಾ ಅಲಿಯಾಸ್ ಗುರ್ಮಿತ್ ಸಿಂಗ್ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 
 
ಕಳೆದ ಆಕ್ಟೋಬರ್ 9 ರಂದು ಜುಬೇರ್, ಸಲ್ಮಾನ್ ಖಾನ್ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಹಿಯ್ಯಾಳಿಸಿರುವ ಬಗ್ಗೆ ಆನ್‌ಟಾಪ್ ಹಿಲ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಲೋನಾವಾಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ನಿರ್ದೇಶನ ನೀಡಲಾಗಿದೆ. ಲೋನಾವಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಲ್ಮಾನ್ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. 
 
ಸಲ್ಮಾನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಮೇಲೆ ಒತ್ತಡ ಹೇರಿದಲ್ಲಿ ಗ್ಯಾಂಗ್‌ರೇಪ್ ಮಾಡಿಸುವುದಾಗಿ ಎನ್‌ಜಿಒ ಸಂಚಾಲಕಿಗೆ ಸಲ್ಮಾನ್ ಬಾಡಿಗಾರ್ಡ್ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಜುಬೇರ್ ಖಾನ್ ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಆತನ ಸಹೋದರಿ ಹಸೀನಾ ಪಾರ್ಕರ್ ಸಂಬಂಧಿಯಾಗಿದ್ದು. ಅತಿರೇಕದ ವರ್ತನೆಯಿಂದಾಗಿ ಆತನನ್ನು ಬಿಗ್‌ಬಾಸ್‌ನಿಂದ ಹೊರಹಾಕಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ಅಗ್ನಿಸಾಕ್ಷಿ’ ಬಿಟ್ಟು ಸಿದ್ಧಾರ್ಥ ಹೋಗಿದ್ದೆಲ್ಲಿಗೆ ಗೊತ್ತಾ?

ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರವಾಹಿಯ ನಾಯಕ ನಟ ವಿಜಯ್ ಸೂರ್ಯ ...

news

ಬರ್ತ್ ಡೇಗೆ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟ ಬಾಹುಬಲಿ ಪ್ರಭಾಸ್

ಹೈದರಾಬಾದ್: ಬಾಹುಬಲಿ ಸಿನಿಮಾ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿದ ಪ್ರಭಾಸ್ ...

news

ಇನ್ನೂ ಮುಗಿದಿಲ್ಲ ವಿಜಯ್ ‘ಮರ್ಸೆಲ್’ ವಿವಾದ

ಮುಂಬೈ: ವಿಜಯ್ ಅಭಿನಯದ ಮರ್ಸೆಲ್ ಚಿತ್ರದ ಸುತ್ತ ಹೊತ್ತಿಕೊಂಡಿದ್ದ ವಿವಾದದ ಕಿಡಿ ಇನ್ನೂ ಆರಿಲ್ಲ. ಜಿಎಸ್ ...

news

ಅಣ್ಣ ಚಿರು ಸರ್ಜಾ ನಿಶ್ಚಿತಾರ್ಥಕ್ಕೆ ಧ್ರುವ ಸರ್ಜಾ ಸಂಭ್ರಮ

ಬೆಂಗಳೂರು: ಅಣ್ಣ ಚಿರು ಸರ್ಜಾ ಮತ್ತು ಭಾವೀ ಅತ್ತಿಗೆ ಮೇಘನಾ ರಾಜ್ ನಿಶ್ಚಿತಾರ್ಥದ ಸಂಭ್ರಮವನ್ನು ಸಹೋದರ, ...

Widgets Magazine
Widgets Magazine