ಭಾವನಾ ಹಾಗೂ ನವೀನ್ ಆರತಕ್ಷತೆಯಲ್ಲಿ ಶುಭ ಹಾರೈಸಿದ ಸ್ಯಾಂಡಲ್ ವುಡ್ ತಾರೆಯರು

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (05:31 IST)

ಬೆಂಗಳೂರು : ಜನವರಿ 22 ರಂದು ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಭಾವನಾ ಹಾಗೂ ನವೀನ್ ಜೋಡಿ ಕೇರಳದ ಚಿತ್ರರಂಗದ ಗಣ್ಯರಿಗೆ ಹಾಗೂ ಸ್ನೇಹಿತರಿಗಾಗಿ ಅದ್ಧೂರಿ ಆರತಕ್ಷತೆಯನ್ನ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದರು.


ಸ್ನೇಹಿತರು ಹಾಗೂ ಸಿನಿಮಾರಂಗದ ಗಣ್ಯರಿಗಾಗಿ ಅದ್ಧೂರಿಯಾಗಿ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಆಯೋಜಿಸಿದ ಆರತಕ್ಷತೆ ಸಮಾರಂಭಕ್ಕೆ ಭಾವನಾ ಅಭಿನಯಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದವರು, ನವೀನ್ ಕುಟುಂಬಸ್ಥರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.


ಆರತಕ್ಷತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್,  ಪ್ರಿಯಾಮಣಿ, ಪಾರೂಲ್ ಯಾದವ್, ಮಾನ್ವಿತಾ, ಮಾಳವಿಕಾ, ಅವಿನಾಶ್, ಹರೀಶ್ ಸೇರಿದಂತೆ ಸ್ಯಾಂಡಲ್‍ವುಡ್ ಸ್ಟಾರ್ ಗಳು ಬಂದು ನವ ವಧು-ವರರಿಗೆ ಶುಭಾ ಹಾರೈಸಿದ್ದಾರೆ. ಆರತಕ್ಷತೆಗೆ ಇಡೀ ಟಗರು ಸಿನಿಮಾತಂಡವನ್ನ ಆಹ್ವಾನ ಮಾಡಲಾಗಿತ್ತು. ಕಲಾವಿದರು ಸೇರಿದಂತೆ ಇಡೀ ಟಗರು ತಂಡದ ತಂತ್ರಜ್ಞರು ಭಾವನಾ ಮತ್ತು ನವೀನ್ ಅವರಿಗೆ ಶುಭ ಹಾರೈಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸುತ್ತಿರುವ ಪದ್ಮವತ್‌ಗೆ ಫೀದಾ ಆದ ಪ್ರೇಕ್ಷಕ...!

ಮುಂಬೈ: ಇತ್ತೀಚಿಗೆ ಹಲವಾರು ಸಂಕಷ್ಟಗಳನ್ನು ಎದುರಿಸಿ ತೆರೆಕಂಡಿದ್ದ ಬಾಲಿವೂಡ್ ಬಿಗ್ ಮೂವಿ ಪದ್ಮಾವತ್ ಇಂದು ...

news

ಪ್ಯಾಡ್‌ಮ್ಯಾನ್ ಚಾಲೆಂಜ್‌ಗೆ ಸ್ಯಾನಿಟರಿ ನ್ಯಾಪ್ಕಿನ್ ಹಿಡಿದು ಫೋಟೋ ಪ್ರಕಟಿಸಿದ ಸ್ಟಾರ್‌ಗಳು

ಇದು ಭಾರತದಲ್ಲಿ ಇದೀಗ ನಡೆಯುತ್ತಿರುವ ಟ್ರೆಂಡಿಂಗ್ ಸವಾಲಾಗಿದೆ. ನಟಿಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ...

news

'ಆಶಿಕ್ ಬನಾಯಾ ಆಪ್‌ನೆ' ಹಾಡಿನಲ್ಲಿ ಹಾಟ್ ಆಗಿ ಮಿಂಚುತ್ತಿರುವ ಊರ್ವಶಿ ರೌಟೇಲಾ..!!

ತನ್ನ ಮಾದಕ ಸೌಂದರ್ಯದಿಂದ ಹಲವಾರು ಅಭಿಮಾನಿಗಳನ್ನು ಹೊಂದಿರುವ ಬೆಕ್ಕಿನ ಕಣ್ಣಿನ ಈ ಸುಂದರಿ ಈಗ ಮತ್ತೆ ...

news

ಪ್ರಕಾಶ್ ರೈಗೆ ಕಿಚ್ಚ ಸುದೀಪ್ ಈ ಬಿರುದು ಕೊಟ್ಟಿದ್ದೇಕೆ?!

ಬೆಂಗಳೂರು: ಸದಾ ಬಲಪಂಥೀಯ ವಿರೋಧಿ ಹೇಳಿಕೆಗಳಿಂದಲೇ ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಪ್ರಕಾಶ್ ರೈ ಇದೀಗ ...

Widgets Magazine
Widgets Magazine