ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಚಂದ್ರು

ಅತಿಥಾ 

ಬೆಂಗಳೂರು, ಗುರುವಾರ, 1 ಮಾರ್ಚ್ 2018 (18:24 IST)

ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಪುತ್ರ ಶರತ್ ಚಂದ್ರು ಇದೀಗ ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಎಂಟ್ರಿ ಮಾಡುತ್ತಿದ್ದಾರೆ. ಈ ಹಿಂದೆ ಕೆಲವು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶರತ್ ಚಂದ್ರು, ಈಗ ಮೊದಲ ಬಾರಿಗೆ ಹೀರೋ ಆಗಿದ್ದಾರೆ.
ಶರತ್ ಈ ಹಿಂದೆ ನಟ ಕಿಚ್ಚ ಸುದೀಪ್ ಅವರ 'ರನ್ನ' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಈಗ "ದಿ ವಿಲನ್" ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
 
ಶಾರ್ಟ್ ಫಿಲಂ ಮಾಡುತ್ತಿದ್ದ ವಿನಯ್ ಭಾರದ್ವಾಜ್ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ತಮ್ಮ ಮೊದಲ ನಿರ್ದೇಶನದ ಸಿನಿಮಾಗೆ ಹೀರೋ ಆಗಿ ಶರತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅದರ ಪೈಕಿ ಸಿಹಿ ಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಕೂಡ ಒಬ್ಬರಾಗಿದ್ದಾರೆ.
 
ಈ ಚಿತ್ರಕ್ಕೆ ಇಂಚರ ರಾವ್ ಹಿನ್ನೆಲೆಯ ಗಾಯನ ಮಾಡಿದ್ದಾರೆ. 12 ನೇ ಶತಮಾನದ ಅಕ್ಕ ಮಹಾದೇವಿಯ ರಚನೆಯ ಕನಸ ಕಂಡೆ ವಚನವನ್ನು ಸಮಕಾಲೀನ ಶೈಲಿಗೆ ಹೊಂದಿಸಿದ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಚಿತ್ರವು ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ. ಮಾರ್ಚ್ 20 ರಿಂದ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಶುರುವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  
ಮುಖ್ಯಮಂತ್ರಿ ಚಂದ್ರು ಸ್ಯಾಂಡಲ್‌ವುಟ್ ಸಿನೆಮಾ ಶರತ್ ಚಂದ್ರು Sharatchandra Sandalwood Cinema Mukkyamantri Chandru

ಸ್ಯಾಂಡಲ್ ವುಡ್

news

ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ನಟ ಮಾಧವನ್

ಇತ್ತೀಚೆಗೆ ವೆಬ್ ಶೋ ಒಂದರಲ್ಲಿ ಕಾಣಿಸಿಕೊಂಡ ನಟ ಆರ್. ಮಾಧವನ್, ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಅವರ ...

news

ಶ್ರೀದೇವಿಗಾಗಿ 'ಕಬಿ ಅಲ್ವಿದಾ ನಾ ಕೆಹೆನಾ' ಎಂದು ಹಾಡಿರುವ ಪ್ರಿಯಾ ಪ್ರಕಾಶ್..!

ಭಾರತೀಯ ಸಿನೆಮಾ ಲೋಕದ ಸೌಂದರ್ಯ ದೇವತೆ ಎಂದೇ ಕರೆಯಲಾಗುವ ನಾಯಕಿ ಶ್ರೀದೇವಿಯವರ ಆಕಸ್ಮಿಕ ಸಾವು ದೇಶವನ್ನೇ ...

news

ಪತ್ನಿ ಶ್ರೀದೇವಿ ಬಗ್ಗೆ ಬೋನಿ ಕಪೂರ್ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ ಗೊತ್ತಾ?

ಮುಂಬೈ: ಕಳೆದ ಶನಿವಾರ ರಾತ್ರಿ ದುಬೈನಲ್ಲಿ ಸಾವನ್ನಪ್ಪಿದ ಬಾಲಿವುಡ್ ತಾರೆ ಶ್ರೀದೇವಿ ಅಂತ್ಯ ಸಂಸ್ಕಾರಗಳು ...

news

ಸಲ್ಮಾನ್ ಖಾನ್ ಮಾತ್ರ ಶ್ರೀದೇವಿ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತಾಡಲಿಲ್ಲ ಯಾಕೆ?

ಮುಂಬೈ: ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಂಡಿರುವ ಶ್ರೀದೇವಿ ಸಾವಿಗೆ ಬಾಲಿವುಡ್ ನ ಬಹುತೇಕ ...

Widgets Magazine