ಶಿವರಾಜ್ ಕುಮಾರ್ ರವರು ಈ ನಟನನ್ನು ತಬ್ಬಿಕೊಂಡಾಗ ಮೂರು ದಿನ ಸ್ನಾನವೇ ಮಾಡಲಿಲ್ಲವಂತೆ!

ಬೆಂಗಳೂರು, ಗುರುವಾರ, 12 ಏಪ್ರಿಲ್ 2018 (06:55 IST)

ಬೆಂಗಳೂರು : ಅಪಾರ ಅಭಿಮಾನಿಗಳ ಮನಗೆದ್ದ  ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಒಂದಲ್ಲ ಒಂದು ವಿಷಯಕ್ಕೆ ಆಗಾಗ  ಸುದ್ದಿಯಾಗುತ್ತಿದ್ದು, ಇದೀಗ ಅವರು  ತಮ್ಮ ಕುರಿತಾದ ಆಶ್ಚರ್ಯಕರ ಸಂಗತಿಯೊಂದನ್ನು ತಿಳಿಸುವ ಮೂಲಕ ಸುದ್ದಿಯಾಗಿದ್ದಾರೆ.

ಆ ಸುದ್ದಿ ಏನಪ್ಪಾ ಅಂದರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ನಟ ಕಮಲ್ ಹಾಸನ್ ಅಂದರೆ ತುಂಬಾ ಇಷ್ಟವಂತೆ. ಕಮಲ್ ಹಾಸನ್ ರವರ ಎಲ್ಲ ಚಿತ್ರಗಳನ್ನೂ ಮಿಸ್ ಮಾಡದೆ ಫಸ್ಟ್  ಡೇ ಫಸ್ಟ್ ಶೋ ನೋಡುತ್ತಿದ್ದರಂತೆ. ಅವರು 14 -15 ವರ್ಷ ವಯಸ್ಸಿನವರಾಗಿದ್ದಾಗ ಕಮಲ್ ಹಾಸನ್ ಸಿನಿಮಾ ರಿಲೀಸ್ ಆದ್ರೆ ಓಪನ್ನಿಂಗ್ ಡೇ ಅವರ ಆಫೀಸ್ ಗೆ ಫೋನ್ ಮಾಡಿ, ರಾಜ್ ಕುಮಾರ್ ಮನೆಗೆ ಟಿಕೆಟ್ ಬೇಕು ಅಂತ ಸುಳ್ಳು ಹೇಳಿ ಹದಿನೈದು ಟಿಕೆಟ್ ತರಿಸಿಕೊಂಡು ಸಿನಿಮಾ ನೋಡ್ತಿದ್ದರಂತೆ. ಅಷ್ಟೇ ಅಲ್ಲದೇ ಒಮ್ಮೆ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿ ತಬ್ಬಿಕೊಂಡಾಗ ಮೂರು ದಿನ ಶಿವಣ್ಣ ಸ್ನಾನವೇ ಮಾಡಿರಲಿಲ್ಲವಂತೆ. ಈ ಬಗ್ಗೆ ಬೇರೆ ಯಾರೋ ಹೇಳಿದ್ದಲ್ಲ. ಸ್ವತಃ ಶಿವಣ್ಣ ಅವರೇ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

’ರಾಝಿ’ ಚಿತ್ರದ ಟ್ರೇಲರ್ ನೋಡಿ ಆಲಿಯಾ ಭಟ್ ಪೋಷಕರು ಕಣ್ಣೀರು ಸುರಿಸಿದ್ದು ಯಾಕೆ…?

ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದ ’ರಾಝಿ’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ...

news

ನಿರ್ಮಾಪಕರೊಬ್ಬರ ಮಗನ ಅಸಲಿ ಮುಖವಾಡವನ್ನು ಬಯಲಿಗೆಳೆದ ನಟಿ ಶ್ರೀರೆಡ್ಡಿ

ಹೈದರಾಬಾದ್ : ಇತ್ತೀಚೆಗಷ್ಟೇ ತೆಲುಗು ನಟಿ ಶ್ರೀರೆಡ್ಡಿ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ...

news

ನಟ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಗಂಭೀರ!

ಮುಂಬೈ : ಇತ್ತೀಚೆಗಷ್ಟೇ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಅಪರೂಪದ ಕಾಯಿಲೆ ‘ನ್ಯೂರೋ ಎಂಡೋಕ್ರೈನ್ ...

news

ಚಿತ್ರದ ಶೂಟಿಂಗ್ ವೇಳೆ ನಟಿ ಪಾರುಲ್ ಯಾದವ್ ಮೇಲೆ ಜೇನು ದಾಳಿ

ಮೈಸೂರು : ಚಿತ್ರದ ಶೂಟಿಂಗ್ ವೇಳೆ ಜೇನುದಾಳಿ ಮಾಡಿ ನಟಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ...

Widgets Magazine
Widgets Magazine