Widgets Magazine
Widgets Magazine

“ಚೌಕಾಭಾರಾ” ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ

ಕೃಷ್ಣವೇಣಿ ಕೆ 

Bangalore, ಭಾನುವಾರ, 23 ಅಕ್ಟೋಬರ್ 2016 (10:07 IST)

Widgets Magazine

ಬೆಂಗಳೂರು:  ನೀನಾಸಂ ಸತೀಶ್ ಅವರ ಸತೀಶ್ ಪಿಕ್ಚರ್ ಹೌಸ್ ನಿರ್ಮಾಣದಲ್ಲಿ ತಯಾರಾದ ಚೌಕಾಭಾರ ಎನ್ನುವ ಕನ್ನಡ ಕಿರು ಚಿತ್ರಕ್ಕೆ 2015 ನೇ ಸಾಲಿನ ಅತ್ಯುತ್ತಮ ಕಿರು ಚಿತ್ರವೆಂಬ ರಾಜ್ಯ ಪ್ರಶಸ್ತಿ ಲಭಿಸಿದೆ.
 
ಎಂದರೆ ಎಲ್ಲೋ ಯೂ ಟ್ಯೂಬ್ ನಲ್ಲಿ ಬಂದು ಹೋಗುವ ಚಿತ್ರ ಎಂದುಕೊಳ್ಳಬೇಡಿ. ಇದು ರಾಜ್ಯಾದ್ಯಂತೆ 50 ಕ್ಕೂ ಹೆಚ್ಚು ಪ್ರದರ್ಶನ ಕಂಡ ಕಿರು ಚಿತ್ರ. ಮೊದಲ ಬಾರಿಗೆ ಕನ್ನಡ ಕಿರು ಚಿತ್ರವೊಂದು ಥಿಯೇಟರ್ ನಲ್ಲಿ ಪ್ರದರ್ಶನ ಕಂಡ ದಾಖಲೆಯನ್ನೂ ಮಾಡಿತ್ತು.
 
ಚಿತ್ರದ ಪ್ರಮುಖ ಪಾತ್ರಧಾರಿ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಚಿರಪರಿಚಿತರಾಗಿರುವ ಅಚ್ಯುತ್ ರಾವ್, ಶರತ್ ಲೋಹಿತಾಶ್ವ. ಇವರ ಜತೆಗೆ ಅಶ್ವಿನಿ ಗೌಡ, ನಂದಿನಿ ಪಟವರ್ಧನ್, ಕಿರಣ್ ನಾಯಕ್, ಮಂಜುನಾಥ್ ಹೆಗ್ಡೆ ಕೂಡಾ ಅಭಿನಯಿಸಿದ್ದಾರೆ. ಚಿತ್ರದ ನಿರ್ದೇಶಕರು. ಆಶ್ಲೇ ಮೆಂಡೋನ್ಸಾ ಸಂಗೀತವಿದೆ.
 
“ಮಾನಸಿಕ ಒತ್ತಡ ಎನ್ನುವುದು ಮನುಷ್ಯನ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ. ಅವನನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಎನ್ನುವುದು ಈ ಕಿರು ಚಿತ್ರದ ಸಾರಾಂಶ” ಎಂದಿದ್ದಾರೆ ನಿರ್ದೇಶಕ ರಘು ಶಿವಮೊಗ್ಗ. 
 
ಸಾಮಾನ್ಯವಾಗಿ ಕಿರು ಚಿತ್ರಗಳನ್ನು ಅದರಲ್ಲೂ ವಿಶೇಷವಾಗಿ ಕನ್ನಡ ಕಿರು ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆ ಇರುವಾಗ ಇದನ್ನು ಯೂ ಟ್ಯೂಬ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ ಎನ್ನುವುದು ವಿಶೇಷ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸೀತಾನದಿ ಹರಿದಿದೆ ನೋಡಿ

ಕನ್ನಡ ಸಿನಿಮಾ ಲೋಕದಲ್ಲಿ ಹೊಸದೊಂದು ಸಿನಿಮಾ ಬಿಡುಗಡೆಯಾಗಿದೆ . “ಸೀತಾ ನದಿ” ಇದರ ಹೆಸರು

news

ನನಗೆ ನನ್ನ ದೇಶವೇ ಮೊದಲು ಎಂದ ಜಾನ್ ಅಬ್ರಹಾಂ

ದೇಶದೆಲ್ಲೆಡೆ ಪಾಕಿಸ್ತಾನ ನಟರು ಭಾರತದ ಸಿನಿಮಾಗಳಲ್ಲಿ ಅಭಿನಯಿಸುವ ಕುರಿತು ಚರ್ಚೆಯಾಗುತ್ತಿದ್ದರೆ, ...

ಬಾಹುಬಲಿ 2 ಟ್ರೇಲರ್ ಬಿಡುಗಡೆ

ಬಹು ನಿರೀಕ್ಷಿತ ಚಿತ್ರ ಬಾಹುಬಲಿ ಭಾಗ 2ರ ಟ್ರೇಲರ್ ಬಿಡುಗಡೆಯಾಗಿದೆ. ಮುಂಬೈ ಅಕಾಡಮಿ ಆಫ್ ಮೂವಿಂಗ್ ...

news

ಬಿಗ್ ಬಾಸ್: ದೊಡ್ಡ ಗಣೇಶ್ ಔಟ್

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಕ್ರಿಕೆಟಿಗ ದೊಡ್ಡಡ ...

Widgets Magazine Widgets Magazine Widgets Magazine