ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಶ್ವೇತಾ ಶ್ರೀವಾಸ್ತವ್

Bangalore, ಸೋಮವಾರ, 6 ಮಾರ್ಚ್ 2017 (10:47 IST)

Widgets Magazine

ನಟಿ ಶ್ವೇತಾ ಶ್ರೀವಾಸ್ತವ್ ಈಗ ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸ್ವತಃ ಶ್ವೇತಾ ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದಾರೆ.
 
"ತಾನೀಗ ಗರ್ಭಿಣಿ. ನಾವಿಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಬೇಕು" ಎಂದು ಶ್ವೇತಾ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಅಮಿತ್ ಶ್ರೀವಾಸ್ತವ್ ತನ್ನೆಲ್ಲಾ ಕನಸುಗಳನ್ನು ಬೆಂಬಲಿಸಿದ್ದಾರೆ. ನಾನು ನಾನಾಗಿರುವಂತೆ ಅವರ ಪ್ರೋತ್ಸಾಹ ಸದಾ ಇದೆ ಎಂದು ಹೇಳಿದ್ದಾರೆ.
 
ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರ  ಶ್ವೇತಾ ಶ್ರೀವಾಸ್ತವ್‌ರನ್ನು ಗುರುತಿಸುವಂತೆ ಮಾಡಿದ ಚಿತ್ರ. ಆ ಬಳಿಕ ಫೇರ್ ಅಂಡ್ ಲವ್ಲಿ ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಪಡೆದರು. ಶ್ವೇತಾ ಅಭಿನಯದ ಮೊದಲ ಚಿತ್ರ ಮುಖಾಮುಖಿ. ಆ ದಿನಗಳು ಚಿತ್ರದಲ್ಲಿ ಕೊತ್ವಾಲ್‌ರ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗಿನ ಕಿರುಗೂರಿನ ಗಯ್ಯಾಳಿಗಳು ಚಿತ್ರದ ದಾನಮ್ಮ ಪಾತ್ರದ ಮೂಲಕ ಅವರು ತಾವು ಯಾವುದೇ ಪಾತ್ರಕ್ಕೂ ಸಿದ್ಧ ಎಂಬುದನ್ನು ನಿರೂಪಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವಿಜಯ್‌ಗೆ ಎರಡನೇ ಮದುವೆ ಎಂದು ಅಮಾಲಾ ಪೌಲ್ ಮೆಸೇಜ್

ಮೂರು ವರ್ಷಗಳ ಹಿಂದೆ ಅಮಲಾ ಪೌಲ್‌ರನ್ನು ಪ್ರೀತಿಸಿ ಮದುವೆಯಾಗಿದ್ದರು ಕೋಲಿವುಡ್ ನಿರ್ದೇಶಕ ಎಎಲ್ ವಿಜಯ್. ...

news

ದಕ್ಷಿಣದ ಚಿತ್ರದಲ್ಲಿ ಮತ್ತೆ ಸನ್ನಿ ಲಿಯೋನ್ ಹವಾ

ಸದ್ಯಕ್ಕೆ ಬಾಲಿವುಡ್‌ನ ಹಾಟ್ ಬೆಡಗಿಯಲ್ಲಿ ಸನ್ನಿ ಲಿಯೋನ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಕನ್ನಡದಲ್ಲಿ ...

news

ಶೀಘ್ರದಲ್ಲೇ ನಿಮ್ಮ ಮುಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ"

ವಿಭಿನ್ನ ಶೀರ್ಷಿಕೆಯ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರದ ಚಿತ್ರೀಕರಣವು ಈಗ ಬಹುತೇಕ ...

news

ಕಪ್ಪದ ಡೈರಿ ಎಸ್ಐಟಿ ತನಿಖೆಗೆ ಹೈಕೋರ್ಟ್ ನಕಾರ

ಕಾಂಗ್ರೆಸ್ ಹೈಕಮಾಂಡ್`ಗೆ ಕಪ್ಪ ನೀಡಿದ ಮಾಹಿತಿ ಇದೆ ಎನ್ನಲಾದ ಡೈರಿ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ...

Widgets Magazine