ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್

ತಿರುವನಂತಪುರ, ಬುಧವಾರ, 26 ಜುಲೈ 2017 (18:05 IST)

ಮಲೆಯಾಳಿ ನಟಿ ಅಪಹರಣ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಟ ದಿಲೀಪ್ ಪತ್ನಿ ನಟಿ ಕಾವ್ಯಾ ಮಾಧವನ್ ಅವರನ್ನೂ ವಿಶೇಷ ತನಿಖಾ ತಂಡ ವಿಚಾರಣೆಗೊಳಪಡಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ.ಕೊಚ್ಚಿ ಬಳಿ ಇರುವ ದಿಲೀಪ್ ನಿವಾಸಕ್ಕೆ ಭೇಟಿ ನೀಡಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಕಾವ್ಯಾ ಮಾಧವನ್ ಅವರನ್ನ ತನಿಖೆಗೊಳಪಡಿಸಿದ್ದಾರೆ ಎಮದು ಮೂಲಗಳನ್ನುದ್ದೇಶಿಸಿ ವರದಿ ಮಾಡಿದೆ.  ಕಾವ್ಯಾ ಮಾಧವನ್ ತಾಯಿ ನಡೆಸುತ್ತಿರುವ ಬೋಟಿಕ್`ಗೆ ಪಲ್ಸಾರ್ ಸುನಿ ಭೇಟಿ ನೀಡಿ ಲೈಂಗಿಕ ದೌರ್ಜನ್ಯದ ವಿಡಿಯೋ ಇರುವ ಮೆಮೊರಯ ಕಾರ್ಡ್ ನೀಡಿದನೇ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆಂದು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ನಟಿ ಮೇಲಿನ ಲೈಂಗಿಕ ದೌರ್ಜನ್ಯದ ಬಳಿಕ ಪಲ್ಸಾರ್ ಸುನಿ, ಕಾವ್ಯಾ ತಾಯಿ ನಡೆಸುತ್ತಿರುವ ಲಕ್ಷ್ಯ ಬೋಟಿಕ್`ಗೆ ಭೇಟಿ ನೀಡಿದ್ದಾರೆ. ಕ್ರೈಂ ನಡೆದು ಮೂರು ದಿನಗಳ ಬಳಿಕ ಬೋಟಿಕ್`ನ ಸಿಸಿಟಿವಿ ವಿಡಿಯೋಗಳನ್ನೂ ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.
 
ರಾಜ್ಯ ಪ್ರಶಸ್ತಿ ವಿಜೇತ ನಟಿ ಕಾವ್ಯಾ ಮಾಧವನ್, 76ಕ್ಕೂ ಅಧಿಕ ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. 2015ರಲ್ಲಿ ಕಾವ್ಯಾ-ದಿಲೀಪ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಮಾಹಿತಿ ಕೃಪೆ: ನ್ಯೂಸ್ 18
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಚಾರ್ಮಿಗೆ ಮುಟ್ಟಬಾರದ ಜಾಗದಲ್ಲಿ ಮುಟ್ಟಿದ ಪೊಲೀಸ್ ಪೇದೆ..!

ಡ್ರಗ್ಸ್ ಹಗರಣದಲ್ಲಿ ಸಿಲುಕಿರುವ ತೆಲುಗು ನಟಿ ಚಾರ್ಮಿ ಕೌರ್ ವಿಚಾರಣೆಗೆ ಹಾಜರಾಗಿದ್ದ ವೇಳೆ ಪೇದೆಯೊಬ್ಬ ...

news

ಟಿವಿ ಚಾನೆಲ್ ಗೂ ಬಂದಳಪ್ಪಾ ಜಂಬದ ರಂಬಾ,,!

ಬೆಂಗಳೂರು: ಇತ್ತೀಚೆಗೆ ಹಿರಿ ತೆರೆ ಕಲಾವಿದರು, ಕಿರುತೆರೆಗೆ ವಲಸೆ ಬರುತ್ತಿರುವುದು ಹೊಸದೇನಲ್ಲ. ...

news

ಸ್ಯಾಂಡಲ್ ವುಡ್ ನಟಿಯರ ನಡುವೆ ಹುಳಿ ಹಿಂಡಿದವರ್ಯಾರು..?

ಯಾವುದೇ ಚಿತ್ರರಂಗವಿರಲಿ ಅಲ್ಲಿ ನಟ ನಟಿಯರ ನಡುವೆ ವೃತ್ತಿಪರ ವೈರುಧ್ಯಗಳು ಇದ್ದೇ ಇರುತ್ತವೆ. ಕನ್ನಡ ...

ವ್ಹಾವ್..! ಅಭಿಮಾನಿಗಳನ್ನು ನಿಬ್ಬೆರಗಾಗಿಸುತ್ತೆ ಕತ್ರಿನಾ ಪುಷ್-ಅಪ್ ವಿಡಿಯೋ...

ಟೈಗರ್ ಜಿಂದಾ ಹೈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ...

Widgets Magazine