13 ವರ್ಷದಲ್ಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳಂತೆ ಬಾಲಿವುಡ್ ನಟಿ

ಸೋಮವಾರ, 6 ಮಾರ್ಚ್ 2017 (10:26 IST)

ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ಪ್ರಖ್ಯಾತ ನಟಿ ನಟಿಯೋರ್ವಳು ಲೈಂಗಿಕ ದೌರ್ಜನ್ಯಕ್ಕೊಳಗಾದ ಸುದ್ದಿ ಸಂಪೂರ್ಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅದರ ನಂತರ ಅನೇಕರು ತಾವು ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ಹೇಳಿಕೊಂಡಿದ್ದರು. ಮತ್ತೀಗ ಬಾಲಿವುಡ್‌ನ ಬೇಡಿಕೆಯ ನಟಿ ಸೋನಮ್ ಕಪೂರ್ ಕೂಡ ತಮಗೆ ಬಾಲ್ಯದಲ್ಲಾದ ಕಹಿ ಅನುಭವವನ್ನು ಹೊರಹಾಕಿದ್ದಾರೆ.
ಇತ್ತೀಚಿಗೆ ಮ್ಯಾಗ್‌ಜೀನ್ ಒಂದಕ್ಕೆ ಸಂದರ್ಶನ ನೀಡಿ ಮಾತನಾಡುತ್ತಿದ್ದ ಸೋನಮ್, ಚಿತ್ರರಂಗಕ್ಕೆ ಬರುವ ಮೊದಲು ನಾನು ಸಾರ್ವಜನಿಕ ಸ್ಥಳದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುತ್ತಿದ್ದೆ. ನನಗೆ 13 ವರ್ಷವಾಗಿದ್ದಾಗ ಚಿತ್ರಮಂದಿರವೊಂದರಲ್ಲಿ ವ್ಯಕ್ತಿಯೋರ್ವ ಮೈಮುಟ್ಟಿ ಅಸಭ್ಯವಾಗಿ ನಡೆದುಕೊಂಡಿದ್ದ. ಈ ಕುರಿತು ಶಿಕ್ಷಕಿಯರಲ್ಲಿ ಹೇಳಿಕೊಂಡಿದ್ದೆ. ಅದಕ್ಕವರು ಇದು ಲೈಂಗಿಕ ದೌರ್ಜನ್ಯವಲ್ಲ. ಎಲ್ಲಾ ಸಂದರ್ಭಗಳಲ್ಲಿ ಇದು ನಡೆಯುತ್ತದೆ, ಎಂದಿದ್ದರು. ಆದರೆ ಆ ವಯಸ್ಸಲ್ಲಿ ಕೂಡ ನನಗದು ಎಂಬ ಅರಿವಿತ್ತು ಎಂದಿದ್ದಾರೆ.
 
ಶಾಲೆಗಳಲ್ಲಿ ಇಂದಿಗೂ ಸಹ ಲೈಂಗಿಕ ಶಿಕ್ಷಣ ಪರಿಣಾಮಕಾರಿಯಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿರುವ ಅವರು ಶಿಕ್ಷಕರೂ ಕೂಡ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಶಕ್ತರಾಗಿಲ್ಲ. ಇದೂವರೆಗೂ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗಿಲ್ಲ. ಇದರಿಂದ ಹುಡುಗಿಯರು ಖಿನ್ನತೆಗೆ ಜಾರುತ್ತಾರೆ. ಅದಕ್ಕಿಂತ ಕೆಟ್ಟ ಸ್ಥಿತಿ ಬೇರೊಂದಿಲ್ಲ. ನಮ್ಮ ದೇಶದಲ್ಲಿ ಸೇರಿದಂತೆ ಜಗತ್ತಿನ ಯಾವುದೇ ದೇಶದಲ್ಲಿ ಮಹಿಳೆಗೆ ಸುರಕ್ಷಿತ ಸ್ಥಳವಿಲ್ಲ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶೀಘ್ರದಲ್ಲೇ ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್‌

ಸದಭಿರುಚಿಯ ಕಾರ್ಯಕ್ರಮ ಎಂದೇ ಬಿಂಬಿತವಾಗಿದ್ದ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ವೀಕೆಂಡ್ ...

news

ಫೇಸ್‌ಬುಕ್‌ನಲ್ಲೂ ಅಸಮಧಾನ ಹೊರ ಹಾಕಿದ ದರ್ಶನ್

ನಿನ್ನೆ ಟ್ವಿಟರ್‌ನಲ್ಲಿ ತಮ್ಮ ಮತ್ತು ಸುದೀಪ್ ನಡುವಿನ ಸ್ನೇಹ ಅಂತ್ಯವಾಗಿದೆ ಎಂದು ಟ್ವೀಟ್ ಮಾಡಿದ್ದ ...

news

ದರ್ಶನ್- ಸುದೀಪ್ ಬ್ರೇಕ್ ಅಪ್‌ಗೆ ಕಾರಣವಾದ ವಿಡಿಯೋ ತುಣುಕು

ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಗಳಾದ ಸುದೀಪ್- ದರ್ಶನ್ ಸ್ನೇಹ ಮುರಿದು ಬಿದ್ದಿದೆ. ಸ್ವತಃ ದರ್ಶನ್ ...

news

ದರ್ಶನ್- ಸುದೀಪ್ ಕುಚುಕು ಸ್ನೇಹ ಅಂತ್ಯ?

ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಗಳಾದ ಸುದೀಪ್- ದರ್ಶನ್ ಸ್ನೇಹ ಮುರಿದು ಬಿದ್ದಿದೆ. ನಮ್ಮ ನಡುವೆ ಯಾವುದೇ ...

Widgets Magazine