ಸುದೀಪ್ ಭೇಟಿಗೆ ಒತ್ತಾಯಿಸಿ ಆತ್ಮಹತ್ಯೆಗೆ ಮುಂದಾದ ಅಭಿಮಾನಿಗಳು

ಬೆಳಗಾವಿ, ಬುಧವಾರ, 8 ಮಾರ್ಚ್ 2017 (14:25 IST)

ಬೆಳಗಾವಿ(ಮಾ.07):  ನಾನು ಸುದೀಪ್ ಅವರನ್ನ ಭೇಟಿಯಾಗಲೇಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಇಬ್ಬರು ಅಭಿಮಾನಿಗಳು ಪೆಟ್ರೋಲ್ ಬಾಟಲ್ ಹಿಡಿದು ನಿಂತಿದ್ದ ಘಟನೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದಿದೆ. ಹೆಬ್ಬುಲಿ ಚಿತ್ರದ ಪ್ರಚಾರಕ್ಕೆ ಸುದೀಪ್ ರಾಜ್ಯದ ಎಲ್ಲ ಕಡೆ ಭೇಟಿ ನೀಡುತ್ತಿದ್ದಾರೆ. ನಮ್ಮನ್ನೂ ಭೇಟಿಮಾಡಬೇಕೆಂದು ಭೂತರಾಯನಮಟ್ಟಿ ಗ್ರಾಮದ ಸಚಿನ್ ಪಾಟೀಲ್, ಪ್ರವೀಣ್ ಪಾಟೀಲ್ ಆತ್ಮಹತ್ಯೆಗೆ ಮುಂದಾಗಿದ್ದರು.


ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರಾಧಿಕಾ, ಯುವಕರನನ್ನ ವಶಕ್ಕೆ ಪಡೆದಿದ್ದು ಆತ್ಮಸಮ಻ಲೋಚನೆ ಕೊಡಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, ಸಮಯಾವಕಾಶ ಕಡಿಮೆ ಇದ್ದಿದ್ದರಿಂದ ಎಲ್ಲೆಡೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. 10-15 ದಿನಗಳಲ್ಲಿ ಎಲ್ಲ ಅಭಿಮಾನಿಗಳನ್ನ ಭೇಟಿಮಾಡುತ್ತೇನೆ. ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದು ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅನುಷ್ಕಾ ಶೆಟ್ಟಿ ತೂಕ ಕಡಿಮೆ ಆಗದೆ ಇರಲು ಕಾರಣ ಗೊತ್ತೇ?

ಪಾತ್ರಕ್ಕಾಗಿ ಕೆಲವು ತಾರೆಗಳು ಯಾವುದೇ ಸಾಹಸಕ್ಕೂ ಕೈಹಾಕುತ್ತಾರೆ. ಆ ರೀತಿಯ ತಾರೆಯಲ್ಲಿ ನಮ್ಮ ಕನ್ನಡ ಮೂಲಕ ...

news

ಪ್ರಕಾಶ್ ರೈಗೆ "ನಿನ್ನ ಜಾತಿ ಯಾವುದೆಂದು" ಅಪಮಾನ

ನಟ ಪ್ರಕಾಶ್ ರೈ ಅಪ್ಪಟ ಕನ್ನಡಿಗ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಅವರು ಎಲ್ಲಾ ಜಾತಿ ...

news

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ...

news

ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ? ಸ್ವತಃ ಕಟ್ಟಪ್ಪನೇ ಹೇಳಿದ ಉತ್ತರ ನೋಡಿ!

ಹೈದರಾಬಾದ್: ‘ಬಾಹುಬಲಿ’ ಭಾಗ 1 ಸಿನಿಮಾ ಮುಗಿದ ನಂತರ ಎಲ್ಲರ ಪ್ರಶ್ನೆ ಕಟ್ಟಪ್ಪ ಯಾಕೆ ಬಾಹುಬಲಿಯನ್ನು ...

Widgets Magazine