ಮೆಗಾಸ್ಟಾರ್‌ ‘ಸೈರಾ’ ಚಿತ್ರದಲ್ಲಿ ಸುದೀಪ್ ನಟಿಸುತ್ತಾರಾ? ಈ ಬಗ್ಗೆ ಸುದೀಪ್ ಹೇಳಿದ್ದೇನು?

ಹೈದರಾಬಾದ್, ಬುಧವಾರ, 11 ಜುಲೈ 2018 (11:45 IST)

ಹೈದರಾಬಾದ್ : ಮೆಗಾಸ್ಟಾರ್‌ ಚಿರಂಜೀವಿ ಅವರ 151ನೇ ಸಿನಿಮಾವಾದ "ಸೈರಾ - ನರಸಿಂಹ ರೆಡ್ಡಿ’' ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ನಟಿಸುತ್ತಾರೋ, ಇಲ್ಲವೋ ಎಂಬ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ.


ಈ ಚಿತ್ರದಲ್ಲಿ ನಟ ಸುದೀಪ್‌ ಅವರು ನಟಿಸುತ್ತಾರಂತೆ ಎಂಬ ಸುದ್ದಿ ಆರಂಭದಲ್ಲಿ ಜೋರಾಗಿ ಕೇಳಿಬಂದಿತ್ತು. ಆದರೆ ಈ ಬಗ್ಗೆ ಸುದೀಪ್‌ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಸುದೀಪ್‌ ನಟಿಸುತ್ತಾರೋ, ಇಲ್ಲವೋ ಎಂಬ ಗೊಂದಲ ಉಂಟಾಗಿತ್ತು. ಆದರೆ ಈಗ ‘ಸೈರಾ' ಸಿನಿಮಾದಲ್ಲಿ ತಾವು ನಟಿಸುತ್ತಿರುವುದಾಗಿ ಸುದೀಪ್ ಟ್ವೀಟ್ ಮಾಡುವುದರ ಮೂಲಕ ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ‘ಸೈರಾ ಚಿತ್ರದಲ್ಲಿ ನಾನು ಲೆಜೆಂಡ್‌ ಮೆಗಾಸ್ಟಾರ್‌ ಚಿರಂಜೀವಿಯವರ ಜೊತೆ ತೆರೆಹಂಚಿಕೊಳ್ಳುತ್ತಿದ್ದೇನೆ' ಎಂದು  ಸುದೀಪ್ ಅವರು ಟ್ವೀಟ್‌ ಮಾಡಿದ್ದಾರೆ.


ಆರಂಭದಲ್ಲಿ ಡೇಟ್ಸ್‌ ಸಮಸ್ಯೆಯಿಂದ ಸುದೀಪ್‌ ಆ ಚಿತ್ರದಲ್ಲಿ ನಟಿಸುವ ಬಗ್ಗೆ ಗೊಂದಲವಿತ್ತು. ಈಗ ಸುದೀಪ್‌, ‘ಪೈಲ್ವಾನ್‌', ‘ಕೋಟಿಗೊಬ್ಬ-3' ಚಿತ್ರಗಳ ಒಂದೊಂದು ಶೆಡ್ನೂಲ್‌ ಮುಗಿಸಿಕೊಟ್ಟಿದ್ದಾರೆ. ಹೀಗಾಗಿ ಈಗ ಡೇಟ್ಸ್‌ ಸಮಸ್ಯೆ ಕೂಡಾ ಬಗೆಹರಿದು, ಸುದೀಪ್‌ ‘ಸೈರಾ' ತಂಡ ಸೇರಿಕೊಳ್ಳಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ರನ್ನು ಹೀಗೆ ಕರೆದರೆ ಅವರಿಗೆ ಸಿಕ್ಕಾಪಟ್ಟೆ ಕೋಪಬರುತ್ತದೆಯಂತೆ!

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಯಾರಾದರೂ ಅಂಕಲ್ ಎಂದು ಕರೆದರೆ ತುಂಬಾ ...

news

ಸಲ್ಮಾನ್ ಖಾನ್ ಈ ಬಾಲಿವುಡ್ ನಟಿಯನ್ನು ಮದುವೆಯಾಗಬೇಕೆಂದು ಬಯಸಿದ್ದರಂತೆ!

ಮುಂಬೈ : ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಐಶ್ವರ್ಯಾ ರೈ, ಕತ್ರಿನಾ ಕೈಫ್, ಸಂಗೀತ ಬಿಜಲಾನಿ ...

news

ಬಾಲಿವುಡ್ ಈ ನಟನಿಂದ ರಾಣಿ ಮುಖರ್ಜಿ ಹೃದಯವೇ ಒಡೆದು ಹೋಯಿತಂತೆ!

ಮುಂಬೈ : ಸಂದರ್ಶನವೊಂದರಲ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಾಲಿವುಡ್ ನ ಸ್ಟಾರ್ ...

news

ಟಾಲಿವುಡ್ ನಟ ಪವನ್ ಕಲ್ಯಾಣ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳಿದ್ಯಾಕೆ?

ಹೈದರಾಬಾದ್ : ಸಿನಿಮಾರಂಗದಿಂದ ದೂರ ಸರಿದು ರಾಜಕೀಯದಲ್ಲಿ ಬ್ಯುಸಿಯಾಗಿರುವ ಟಾಲಿವುಡ್ ನಟ ಪವರ್ ಸ್ಟಾರ್ ...

Widgets Magazine