ಇದರಲ್ಲಿ ಇನ್ನಷ್ಟು ಓದಿ :
ಜಾತಿ ಪ್ರಮಾಣ ಪತ್ರಕ್ಕೆ ನಟ ಸುದೀಪ್ ಅವರ ಹೆಸರಿನಲ್ಲಿ ಅರ್ಜಿಸಲ್ಲಿಸಿದ ಕಿಡಿಗೇಡಿಗಳು

ಬೆಂಗಳೂರು : ವಿಜಯಯಪುರದಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಸ್ಯಾಂಡಲ್ ವುಡ್ ನ ನಟ ಸುದೀಪ್ ಅವರ ಹೆಸರಿನಲ್ಲಿ ಅರ್ಜಿ
ವಿಜಯಪುರದ ತಹಶೀಲ್ದಾರರ ಕಚೇರಿಗೆ ನಟ ಸುದೀಪ್ ಅವರ ಫೋಟೋ ಅಂಟಿಸಿ ಸಿದ್ದಲಿಂಗಪ್ಪ ಕೊಳೂರ ಎಂಬುವವರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಬಂದಿದ್ದು, ಅದನ್ನು ನೋಡಿ ಅಧಿಕಾರಿಗಳು ಒಮ್ಮೆಗೆ ದಂಗಾದರು. ಅದನ್ನು ಸರಿಯಾಗಿ ಪರಿಶೀಲಿಸಿದಾಗ ಅದು ಸುದೀಪ್ ಅವರು ಸಲ್ಲಿಸಿದ ಅರ್ಜಿಯಾಗಿರದೆ, ಅದರಲ್ಲಿ ಅವರ ಫೋಟೋ ಅಂಟಿಸಿ ಯಾರೋ ಕಿಡಿಗೇಡಿಗಳು ಸೈಬರ್ ನಲ್ಲಿ ಒನ್ ಲೈನ್ ಮೂಲಕ ಕಳುಹಿಸಿರುವುದು ತಿಳಿದು ಬಂದಿದೆ.
ವಿಜಯಪುರದ ತಹಶೀಲ್ದಾರರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಿದ್ದಲಿಂಗಪ್ಪ ಹಾಗು ಸೈಬರ್ ನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
|
|
ಸಂಬಂಧಿಸಿದ ಸುದ್ದಿ