ದರ್ಶನ್ ಮತ್ತು ಸುದೀಪ್ ವಿವಾದ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರವಿದು

ಬೆಂಗಳೂರು, ಮಂಗಳವಾರ, 14 ಮಾರ್ಚ್ 2017 (08:07 IST)

Widgets Magazine

ಬೆಂಗಳೂರು(ಮಾ.14.): ಸ್ಯಾಂಡಲ್ ವುಡ್`ನ ಸೂಪರ್ ಸ್ಟಾರ್`ಗಳಾದ ಸುದೀಪ್ ಮತ್ತು ದರ್ಶನ್ ನಡುವಿನ ವಿವಾದ ಬಿರುಗಾಳಿ ಬಂದುಹೋಗಿದ್ದು, ಎಲ್ಲರಿಗೂ ಗೊತ್ತೇ ಇದೆ. ಚಲನಚಿತ್ರ ರಂಗದ ಹಿರಿಯ ನಟ ಅಂಬರೀಷ್ ಒಬ್ಬರಿಂದ ಮಾತ್ರ ಅವರಿಬ್ಬರ ನಡುವೆ ಉಂಟಾಗಿರುವ ಮನಸ್ತಾಪ ಬಗೆಹರಿಸಲು ಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಂತೆ ಕುಮಾರ್ ಎಂಬ ಅಭಿಮಾನಿ ದರ್ಶನ್ ಮತ್ತು ಸುದೀಪ್ ಅವರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಅಂಬರೀಶ್ ಮನವೊಲಿಸಿ ಎಂದು ಸುಮಲತಾ ಅಂಬರೀಷ್ ಅವರಿಗೆ ಟ್ವೀಟ್ ಮಾಡಿದ್ದಾನೆ.


ಅಭಿಮಾನಿಯ ಟ್ವಿಟ್`ಗೆ ಉತ್ತರಿಸಿರುವ ಸುಮಲತಾ ಅಂಬರೀಷ್, ಸುದೀಪ್ ಮತ್ತು ದರ್ಶನ್ ಇಬ್ಬರೂ ಪ್ರಭುದ್ಧರು. ಸರಿಯೋ ತಪ್ಪೋ ಅವರಿಬ್ಬರೂ ಒಂದು ನಿರ್ಧಾರ ಕೈಗೊಂಡಿದ್ದಾರೆ ಅದನ್ನ ಗೌರವಿಸೋಣ ಎನ್ನುವ ಮೂಲಕ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂಬುದನ್ನ ಪರೋಕ್ಷವಾಗಿ ಹೇಳಿದ್ದಾರೆ.

ಮೆಜೆಸ್ಟಿಕ್ ಚಿತ್ರದಲ್ಲಿ ನಟಿಸುವಂತೆ ನನಗೆ ಮೊದಲು ಆಫರ್ ಬಂದಿತ್ತು. ನಾನು ಈಗಲೇ ನಟಿಸಲು ಸಾಧ್ಯವಿಲ್ಲ ದರ್ಶನ್ ಅವರಿಗೆ ಅವಕಾಶ ನೀಡುವಂತೆ ಸೂಚಿಸಿದ್ದೆ ಎಂದು ಸುದೀಪ್ ಟಿವಿಯೊಂದರ ಸಂದರ್ಶನದಲ್ಲಿ ಹೇಳಿದ್ದ ಮಾತು ಸುದೀಪ್ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಬಳಿಕ ಟ್ವೀಟ್ ಮಾಡಿದ್ದ ದರ್ಶನ್ ನಾವಿಬ್ಬರೂ ಸ್ನೇಹಿತರಲ್ಲ ಎಂದುಬಿಟ್ಟಿದ್ದರು.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಫೇಸ್ಬುಕ್ ಲೈವ್`ನಲ್ಲಿ ಪಾರೂಲ್ ಯಾದವ್ ಮಸ್ತ್ ಹೋಳಿ ಸೆಲಬ್ರೇಶನ್

ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಟ-ನಟಿಯರು ಸಹ ಹೋಳಿ ಸಂಭ್ರಮದಲ್ಲಿ ಹಿಂದೆ ಬಿದ್ದಿಲ್ಲ. ...

news

ಸಾಕಿ ಬೆಳೆಸಿದವನೇ ಕೊಂದ.. ಕುತೂಹಲ ಹುಟ್ಟಿಸುತ್ತಿದೆ ಬಾಹುಬಲಿ-2 ಪೋಸ್ಟರ್

ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಬಾಹುಬಲಿ-2 ಚಿತ್ರ ಏಪ್ರಿಲ್`ನಲ್ಲಿ ತೆರೆಗೆ ಬರುತ್ತಿದ್ದು, ಚಿತ್ರದ ...

news

ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಫುಡ್ ಪಾಯ್ಸನಿಂಗ್ ...

news

ಅಪ್ಪನ ಅನಾರೋಗ್ಯ: ಕುಸಿದ ಐಶ್ವರ್ಯ ರೈ

ಐಶ್ವರ್ಯ ರೈ ತಂದೆ ಕೃಷ್ಣರಾಜ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ...

Widgets Magazine Widgets Magazine