ಅನಿಲ್ ಕುಂಬ್ಳೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಸುಮಲತಾ ಅಂಬರೀಷ್

ಬೆಂಗಳೂರು, ಶುಕ್ರವಾರ, 7 ಡಿಸೆಂಬರ್ 2018 (09:44 IST)

ಬೆಂಗಳೂರು: ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಸುಮಲತಾ ಅಂಬರೀಷ್ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.


 
ಇತ್ತೀಚೆಗಷ್ಟೇ ಅಂಬರೀಷ್ ನಿಧನರಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿರುವ ಸುಮಲತಾ ತಮ್ಮ ಪತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದವರಿಗೆಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
 
ಅದರಲ್ಲೂ ವಿಶೇಷವಾಗಿ ಅನಿಲ್ ಕುಂಬ್ಳೆ, ಪ್ರಧಾನಿ ಮೋದಿಗೆ ವಿಶೇಷ ದನ್ಯವಾದ ಸಲ್ಲಿಸಿದ್ದಾರೆ. ಅಂಬರೀಶ್ ನಿಧನರಾದಾಗ ಕುಂಬ್ಳೆ ನಿಮ್ಮಂತಹ ಮಣ್ಣಿನ ಮಗನನ್ನು ಕಳೆದುಕೊಂಡು ಈ ನೆಲ ಬರಿದಾಗಿ ಎಂದು ಸಂತಾಪ ವ್ಯಕ್ತಪಡಿಸಿದ್ದರು.
 
ಇದೀಗ ಸುಮಲತಾ ಕುಂಬ್ಳೆಯ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು, ‘ಧನ್ಯವಾದ ಅನಿಲ್ ಕುಂಬ್ಳೆ. ಅವರಿಗೆ ಕ್ರೀಡೆ ಮೇಲೆ ವಿಶೇಷ ಆಸಕ್ತಿ ಇತ್ತು. ಟೆನಿಸ್,  ಕ್ರಿಕೆಟ್, ಫುಟ್ಬಾಲ್, ಗಾಲ್ಫ್ ಎಂದರೆ ಮಮಕಾರವಿತ್ತು. ಕ್ರೀಡಾಳುಗಳನ್ನು ಅದರಲ್ಲೂ ವಿಶೇಷವಾಗಿ ಕರ್ನಾಟಕದ ಆಟಗಾರರನ್ನು ಪ್ರೋತ್ಸಾಹಿಸುತ್ತಿದ್ದರು. ಅದರಲ್ಲೂ ನಿಮ್ಮ ಸಾಧನೆಗಳ ಬಗ್ಗೆ ಯಾವತ್ತೂ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದರು’ ಎಂದು ಸಮಲತಾ ಕುಂಬ್ಳೆ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸುಳ್ಳು ಸುದ್ದಿಯನ್ನೇ ನಿಜ ಮಾಡಿದ್ರು ರಾಕಿಂಗ್ ಸ್ಟಾರ್ ಯಶ್!

ಬೆಂಗಳೂರು: ಕೆಜಿಎಫ್ ಕ್ರೇಜ್ ನಲ್ಲಿ ಮುಳುಗಿದ್ದಾಗ ರಾಕಿಂಗ್ ಸ್ಟಾರ್ ಯಶ್ ಮುಂದೆ ‘ಬಾಹುಬಲಿ’ ಖ್ಯಾತಿಯ ...

news

ಕಿಚ್ಚ ಸುದೀಪ್ ಗೆ ‘ದಿ ವಿಲನ್’ನಂತಹಾ ಸಿನಿಮಾ ಇನ್ಮುಂದೆ ಮಾಡ್ಬೇಡಿ ಎಂದವರು ಯಾರು ಗೊತ್ತೇ?!

ಬೆಂಗಳೂರು: ವಿಲನ್ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗಿದ್ದು ನೋಡಿ ಜನ ಏನೋ ಇದೆ ಎಂದು ಕುತೂಹಲದಿಂದ ...

news

ನನ್ನ ಮದುವೆಗೆ ಬರುವವರೂ ಬೆತ್ತಲೆಯಾಗಿ ಬರಬೇಕು- ನಟಿ ರಾಖಿ ಸಾವಂತ್

ಮುಂಬೈ : ಬಾಲಿವುಡ್ ನ ಹಾಟ್ ನಟಿ ರಾಖಿ ಸಾವಂತ್ ತಮ್ಮ ಮದುವೆಗೆ ಬರುವವರಿಗೆ ಕಂಡೀಷನ್ ವೊಂದನ್ನು ...

news

ಪ್ರಿಯಾಂಕ ಚೋಪ್ರಾಳನ್ನು 'ಜಾಗತಿಕ ವಂಚನೆಯ ನಟಿ' ಎಂದು ಹೇಳಿದ್ಯಾರು ಗೊತ್ತಾ?

ನವದೆಹಲಿ : ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಅಮೆರಿಕದ ...

Widgets Magazine